Advertisement
ಹೈಪರ್‌ಥೈರಾಯ್ಡಿಸಂ – ಥೈರಾಯ್ಡ್ ಪ್ರವಾಹ
Related Articles
Advertisement
ತೀವ್ರ ತರಹದ ಹೈಪೊಥೈರಾಯ್ಡಿಸಂಗೆ ಒಳಗಾಗಿ, ಚಿಕಿತ್ಸೆಗೊಳಪಡದ ರೋಗಿಗಳು ಮೈಕ್ಸೆಡೇಮಾ ಕೋಮಾಕ್ಕೆ ತುತ್ತಾಗಬಹುದಾಗಿದೆ. ಈ ರೋಗಿಗಳು ಸಾಮಾನ್ಯವಾಗಿ ಕಾಲುಗಳು ಮತ್ತು ಮುಖದಲ್ಲಿ ಊತ, ಮಾತು ನಿಧಾನವಾಗುವುದು, ತೂಕ ಹೆಚ್ಚುವುದು, ನಿಶ್ಶಕ್ತಿ, ಜೊಂಪು ಮತ್ತು ಕೊಮಾದ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಅನಾರೋಗ್ಯದಿಂದ ಸಾವನ್ನಪ್ಪುವ ಪ್ರಮಾಣ ಹೆಚ್ಚಿರುವುದರಿಂದ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಆರೈಕೆ-ಚಿಕಿತ್ಸೆ ಆವಶ್ಯಕವಾಗಿರುತ್ತದೆ.
ಗೊಯಟರ್
ಸಾಮಾನ್ಯವಾಗಿ ಬಹುತೇಕ ಎಲ್ಲ ಗೊಯಟರ್ ಪ್ರಕರಣಗಳು ಪ್ರಾಣಾಪಾಯಕರ ಅಲ್ಲದಿದ್ದರೂ ಎಂಡೊಕ್ರೈನಾಲಜಿ ತಜ್ಞರಾಗಿ ನಾವು ಇದರ ಹಿಂದೆ ಇರಬಹುದಾದ ಕ್ಯಾನ್ಸರ್ ಸಾಧ್ಯತೆಗಳ ಬಗ್ಗೆ ಸಂದೇಹ ಪಡುತ್ತೇವೆ. ಹಿನ್ನೆಲೆಯ ಕಾರಣಗಳನ್ನು ಅವಲಂಬಿಸಿ ಥೈರಾಯ್ಡ್ ಕ್ಯಾನ್ಸರ್‌ಗಳು ನಿಧಾನಗತಿಯಲ್ಲಿ ಅಥವಾ ಕ್ಷಿಪ್ರಗತಿಯಲ್ಲಿ ಉಲ್ಬಣಗೊಳ್ಳುವಂಥವು ಆಗಿರಬಹುದು.
ಥೈರಾಯ್ಡ್ ಕ್ಯಾನ್ಸರ್‌ಗಳಲ್ಲಿ ಪ್ಯಾಪಿಲರಿ, ಫಾಲಿಕ್ಯುಲರ್, ಮೆಡ್ಯುಲರಿ ಮತ್ತು ಆನಾಪ್ಲಾಸ್ಟಿಕ್ ಎಂಬ ವಿಧಗಳಿವೆ. ಥೈರಾಯ್ಡನ ಅಲ್ಟ್ರಾಸೌಂಡ್ ಮತ್ತು ಎಫ್ಎನ್‌ಎ (ಫೈನ್ ನೀಡಲ್ ಆಸ್ಪಿರೇಶನ್)ಗಳನ್ನು ಉಪಯೋಗಿಸಿ ಗೊಯಟರ್‌ನ ವಿಶ್ಲೇಷಣೆ ನಡೆಸಲಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯನ್ನು ಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಥೈರಾಯ್ಡ್ ಸಮಸ್ಯೆ ಸಾಮಾನ್ಯ ವಾದುದಾದರೂ ಅದನ್ನು ನಿರ್ಲಕ್ಷಿಸಬಾರದು. ಕ್ಲಪ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
-ಡಾ| ಶ್ರೀನಾಥ್ ಪಿ. ಶೆಟ್ಟಿ
ಕನ್ಸಲ್ಟಂಟ್, ಎಂಡೊಕ್ರೈನಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೊಕ್ರೈನಾಲಜಿ ವಿಭಾಗ, ಕೆಎಂಸಿ, ಮಂಗಳೂರು)