ಬೆಂಗಳೂರು: 16ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಕೂಟದಲ್ಲಿ ಶುಭಾರಂಭ ಮಾಡಿದೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಆರ್ ಸಿಬಿ ಸುಲಭ ಜಯ ದಾಖಲಿಸಿತ್ತು.
ಆರ್ ಸಿಬಿ ತಂಡವು ಮೈದಾನದಂತೆ ಮೈದಾನದ ಹೊರಗೂ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುತ್ತದೆ. ಖ್ಯಾತ ನಿರೂಪಕ ದ್ಯಾನಿಶ್ ಸೇಠ್ ಅವರ ಮಿಸ್ಟರ್ ನ್ಯಾಗ್ ಆರ್ ಸಿಬಿ ಇನ್ಸೈಡರ್ ಶೋನಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ:ಕಡಿಮೆ ಬಜೆಟ್ ಫೋನ್ ಬೇಕೆನ್ನುವವರಿಗಾಗಿ ಬಂದಿದೆ ಪೋಕೋ ಸಿ50
ಈ ವೇಳೆ ಮಾತನಾಡಿದ ವಿರಾಟ್ ಕೊಹ್ಲಿ ಅವರು ಆರ್ ಸಿಬಿ ತಂಡದ ಸಾಮಾಜಿಕ ಜಾಲತಾಣ ಉಪಸ್ಥಿತಿಯ ಬಗ್ಗೆ ಮಾತನಾಡಿದರು. ಒಂದು ವೇಳೆ ಐಪಿಎಲ್ ನಲ್ಲಿ ಸಾಮಾಜಿಕ ಜಾಲತಾಣದ ಬಗ್ಗೆ ಯಾವುದೇ ಟ್ರೋಫಿ ಇದ್ದರೆ ನಾವು ಖಂಡಿತವಾಗಿಯೂ ಗೆಲ್ಲುತ್ತೇವೆ. ಅದಕ್ಕಾಗಿ ಪೂರ್ಣ ಕೂಟ ಆಡಬೇಕಿಲ್ಲ, ಕೇವಲ ಎರಡು ವಾರದಲ್ಲೇ ನಾವು ಗೆಲ್ಲುತ್ತೇವೆ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏ.6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.