Advertisement

ಮನೆಯೊಳಗೆ ಹೆಚ್ಚು ಬೆಳಕಿದ್ದರೆ ಮನಸ್ಸಿಗೂ ಮುದ

01:31 AM Aug 03, 2019 | mahesh |

ಮಳೆಗಾಲದಲ್ಲಿ ಮನೆ ಅಂದವಾಗಿ ಕಾಣಬೇಕಾದರೆ ಮನೆಯೊಳಗಡೆ ಬೆಳಕು ಬರಬೇಕು. ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಇದು ಮನೆಯೊಳಗಡೆ ಬೆಳಕು ಕಡಿಮೆ ಮಾಡುತ್ತದೆ.

Advertisement

ಮನೆಯಲ್ಲಿ ಪ್ರಾಕೃತಿಕ ಬೆಳಕು ಹೆಚ್ಚು ಬರುವಂತೆ ಮಾಡಬಹುದು ಮತ್ತು ಕೃತಕ ಬೆಳಕನ್ನು ಬಳಸಿ ಮನೆಯನ್ನು ಅಂದಗೊಳಿಸಬಹುದು. ಪ್ರಾಕೃತಿಕ ಬೆಳಕು ಮಳೆಗಾಲದಲ್ಲಿ ಕಡಿಮೆಯಾದರೂ ಸ್ವಲ್ಪ ಬೆಳಕಾದರೂ ಮನೆಯೊಳಗೆ ಬರುವಂತೆ ನೋಡಿಕೊಳ್ಳಬೇಕು.

ನೈಸರ್ಗಿಕ ಬೆಳಕು ಮನೆಯೊಳಗೆ ಬರಬೇಕಾದರೆ ಕರ್ಟನ್‌ಗಳನ್ನು ತೆಗೆಯಿರಿ ಅಥವಾ ಲೈಟ್ ಬಣ್ಣದ ಕರ್ಟನ್‌ಗಳನ್ನು ಬಳಸಿ. ಕಿಟಿಕಿಗಳಿಗೆ ಗ್ಲಾಸ್‌ ವಿಂಡೋಗಳನ್ನು ಬಳಸಿ. ಅದಲ್ಲದೇ ಮನೆಯೊಳಗಿರುವ ಬೆಳಕನ್ನು ಹೆಚ್ಚಿಸಬೇಕಾದರೆ

1 ಬಿಳಿ ಕರ್ಟನ್‌ ಬಳಸಿ

ಸಾಮಾನ್ಯವಾಗಿ ಬಿಳಿ ಬಣ್ಣ ಬೆಳಕನ್ನು ಹೆಚ್ಚು ಪ್ರತಿಧ್ವನಿಸುತ್ತದೆ. ಇದರಿಂದ ಮನೆಯೊಳಗೆ ಬೆಳಕು ಹೆಚ್ಚು ಕಾಣಿಸುತ್ತದೆ. ಎಲ್ಲ ಕಡೆ ಬಿಳಿ ಕರ್ಟನ್‌ಗಳನ್ನೇ ಹೆಚ್ಚಾಗಿ ಬಳಸಿ. ಇದರಿಂದ ಮನೆಯೊಳಗೆ ಸರಿಯಾಗಿ ಬೆಳಕು ಹರಿಯುತ್ತದೆ.

Advertisement

2 ಬೆಡ್‌, ಕುಷನ್‌ಗಳಿಗೆ ಡಾರ್ಕ್‌ ಕಲರ್‌ ಬಳಸಿ

ಬೆಡ್‌, ಕುಷನ್‌ಗಳಿಗೆ ಹಾಕುವ ಬಟ್ಟೆಗಳು ಡಾರ್ಕ್‌ ಕಲರ್‌ನದ್ದಾಗಿರಲಿ. ಇದರಿಂದ ಮನೆಯೊಳಗಡೆ ಹೆಚ್ಚು ಬ್ರೈಟ್ ನೋಟ ಸಿಗುತ್ತದೆ.

3 ಪ್ರಕಾಶಮಾನ ಬಣ್ಣ ಬಳಸಿ

ಮಳೆಯ ಸಂದರ್ಭ ಮನೆ ಗೋಡೆಗಳಲ್ಲಿ ಯಾವುದೇ ಬಣ್ಣವಿದ್ದರೂ ಅದು ಡಲ್ ಆಗಿ ಕಾಣುತ್ತದೆ. ಅದಕ್ಕಾಗಿ ಪ್ರಕಾಶಮಾನ ಬಣ್ಣಗಳು ಮಳೆಗಾಲಕ್ಕೆ ಸೂಕ್ತ. ಇವು ಮನೆಯ ಕತ್ತಲೆಯನ್ನು ಓಡಿಸುವಲ್ಲಿ ಸಹಕಾರಿ.

4 ಮನೆಯೊಳಗಡೆ ದೊಡ್ಡದಾದ ಲೈಟ್ ಬಳಸಿ

ಮಳೆಗಾಲದಲ್ಲಿ ಮನೆಯೊಳಗಡೆ ಹೆಚ್ಚು ಬೆಳಕು ನೀಡುವ ಲೈಟ್‌ಗಳನ್ನು ಬಳಸಿ. ಲೈಟ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿರಲಿ.

5 ಕ್ಯಾಂಡಲ್ಗಳನ್ನೂ ಬಳಸಬಹುದು

ಮಳೆಗಾಲದಲ್ಲಿ ಕ್ಯಾಂಡಲ್ಗಳನ್ನು ಮನೆಯ ಬೆಳಕು ಹೆಚ್ಚಿಸಲು ಬಳಸಬಹುದು. ಇದರಿಂದ ಮನೆ ಸುಂದರವಾಗಿ ಕಾಣುವುದರ ಮನೆಯೊಳಗಿನ ಕತ್ತಲು ಕಡಿಮೆಯಾಗುತ್ತದೆ. ಕ್ಯಾಂಡಲ್ ಬೆಳಕು ಮನೆಗೆ ಹೆಚ್ಚು ಅಂದ ನೀಡುತ್ತದೆ.

ಮನೆಯೊಳಗಡೆ ಬೆಳಕು ಹೆಚ್ಚಿರಬೇಕು. ಆಗ ಮನಸ್ಸಿಗೂ ಹೆಚ್ಚು ಮುದ. ಮನೆಯೊಳಗೆ ಕತ್ತಲಿದ್ದರೆ ಮನಸ್ಸಿಗೂ ಕತ್ತಲಾವರಿಸಿದಂತೆ. ಯಾವುದೇ ಕೆಲಸಕ್ಕೂ ಮನಸ್ಸಿರುವುದಿಲ್ಲ ಹೀಗಾಗಿ ಮಳೆಗಾಲದಲ್ಲಿ ಮನೆ ಬೆಳಕಿನಿಂದ ಕೂಡಿರುವಂತೆ ಮಾಡುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next