Advertisement

ಕೋವಿಡ್ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದ್ದಲ್ಲಿ ದಾಖಲೆ ನೀಡಲಿ: ಬಿ.ಎ. ಬಸವರಾಜ

02:40 PM Jul 04, 2020 | keerthan |

ಹಾವೇರಿ: ಕೋವಿಡ್-19 ಚಿಕಿತ್ಸೆಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ನೀಡಲಿ. ಈ ಬಗ್ಗೆ ಯಾವ ತನಿಖೆಗೂ ಸಿದ್ಧರಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಪ್ರತಿಕ್ರಿಯಿಸಿದರು.

Advertisement

ಅವರು ಶನಿವಾರ ಇಲ್ಲಿಯ ನಗರಸಭೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಅವ್ಯವಹಾರದ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಯಾವುದಾದರೂ ದಾಖಲೆ, ಆಧಾರ ಇದ್ದರೆ ಅದನ್ನು ಎಲ್ಲರ ಮುಂದೆ ಇಡಲಿ. ಯಾವ ಕಂಪನಿಯಲ್ಲಿ ಏನಾಗಿದೆ ಎಂದು ತಿಳಿಸಲಿ. ಅದನ್ನು ಬಿಟ್ಟು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ನಾಯಕರು. ಅವರು ಈ ಕೋವಿಡ್-19 ಸಂದರ್ಭದಲ್ಲಿ ಹೊರಗೆ ಎಲ್ಲಿಯಾದರೂ ಹೋಗಿದ್ದಾರಾ? ಯಾವ ಆಸ್ಪತ್ರೆಗಾದರೂ ಭೇಟಿ ನೀಡಿದ್ದಾರಾ? ಎಂದು ಪ್ರಶ್ನಿಸಿದ ಸಚಿವರು, ಸಿದ್ದರಾಮಯ್ಯನವರು ಮನೆಯಲ್ಲಿಯೇ ಇದ್ದು ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಾಗಿ ಆಡಳಿತ ಪಕ್ಷದವರಿಗೆ ಏನೋ ಹೇಳಬೇಕು. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಸೋಂಕು ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಕೋವಿಡ್ 19 ಸೋಂಕು ನಿಯಂತ್ರಿಸುವ ರಾಜ್ಯದ ಕಾರ್ಯಕ್ಕೆ ಇಡೀ ದೇಶದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next