Advertisement
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಪ್ಪ ಮೊಯ್ಲಿ ಅವರ ಬಗ್ಗೆ ತಮಗೆ ಗೌರವವಿದ್ದು, ಈ ಹಿಂದೆ ಮೈಸೂರು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದ ವೇಳೆ ವಿವಿಯನ್ನು ಚೆನ್ನಾಗಿ ಅಭಿವೃದ್ಧಿ ಮಾಡಿದ್ದೀರಿ ಎಂದು ಹೇಳಿದ್ದರು.
Related Articles
Advertisement
ಮಂಪರು ಪರೀಕ್ಷೆ ಮಾಡಲಿ: ತಮ್ಮನ್ನು ಭ್ರಷ್ಟ ಕುಲಪತಿ ಎಂದು ವೀರಪ್ಪ ಮೊಯ್ಲಿ ಹೇಳಿದ್ದು, ತಾನು ತನ್ನ ಆಸ್ತಿ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲು ತಯಾರಾಗಿದ್ದೇನೆ. ಅಲ್ಲದೆ, ಈ ವಿಷಯದಲ್ಲಿ ತಾವು ಯಾವುದೇ ಪರೀಕ್ಷೆಗೂ ಸಿದ್ಧನಾಗಿದ್ದೇನೆ. ಅದೇ ರೀತಿ ದಶಕಗಳ ಹಿಂದೆ ಏನೂ ಇಲ್ಲದೆ ರಸ್ತೆಯಲ್ಲಿದ್ದವರು ಇಂದು ಲೆಕ್ಕವಿಲ್ಲದಷ್ಟು ಹಣ ಸಂಪಾದಿಸಿ, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಮಂದಿಯನ್ನೂ ಮಂಪರು ಪರೀಕ್ಷೆಗೆ ಮುಂದಾಗುವಂತೆ ಕಿಡಿಕಾರಿದರು.
ದಾಖಲೆ ಸಂಗ್ರಹ: ಮುಕ್ತ ವಿವಿಯಲ್ಲಿ ಈ ಹಿಂದೆ ನಡೆದಿರುವ ಹಾಗೂ ಈಗಲೂ ನಡೆಯುತ್ತಿರುವ ಹಗರಣದ ಬಗ್ಗೆ ತಮಗೆ ಮಾಹಿತಿ ಲಭಿಸಿದ್ದು. ಈ ಬಗ್ಗೆ ದಾಖಲೆ ಸಂಗ್ರಹಿಸುತ್ತಿದ್ದೇನೆ. ಎಲ್ಲಾ ದಾಖಲೆಗಳೊಂದಿಗೆ ವಾರದೊಳಗೆ ಮುಕ್ತ ವಿವಿ ಹಗರಣದ ಬಗ್ಗೆ ಸಂಪೂರ್ಣ ವಿವರ ನೀಡಲಿದ್ದು, ಆ ಮೂಲಕ ಮುಕ್ತ ವಿವಿಗೆ ಕಪ್ಪು ಮಸಿ ಬಳಿದವರು, ಬಳಿಯುತ್ತಿರುವವರು ಯಾರು ಎಂಬುದು ಸ್ಪಷ್ಟವಾಗಲಿದೆ ಎಂದರು.
ವಾರದಲ್ಲಿ ಮಾಹಿತಿ ಸ್ಫೋಟ: ರಾಜ್ಯ ಮುಕ್ತ ವಿವಿ ಹಗರಣಗಳಲ್ಲಿ ಯಾರು ಭಾಗಿಯಾಗಿದ್ದಾರೆ. ಯಾರ ಕೈವಾಡವಿದೆ. ಅಲ್ಲಿ ಏನೇನು ನಡೆದಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ದಾಖಲೆ ಸಮೇತ ಮುಂದಿನ ವಾರದಲ್ಲಿ ವಿವರಿಸುತ್ತೇನೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ತೇಜೋವಧೆಗೆ ಮುಂದಾಗಿದ್ದು, ಇದಕ್ಕಾಗಿ ತಮ್ಮ ವಿರುದ್ಧ ಪಿತೂರಿ, ಕುತಂತ್ರ ಮಾಡುತ್ತಿದ್ದಾರೆ.
ಆದರೆ, ಒಂದು ಸುಳ್ಳನ್ನು ನೂರು ಬಾರಿ ಉತ್ಛರಿಸಿ ಅದನ್ನೇ ನಿಜ ಎಂದು ಸಾಬೀತು ಪಡಿಸಲು ಸಾಧ್ಯವಿಲ್ಲ, ಯಾವುದೇ ವ್ಯಕ್ತಿ ಬಗ್ಗೆ ಆಪಾದನೆಗಳನ್ನು ಮಾಡುವ ವೇಳೆ ಸೂಕ್ತ ದಾಖಲೆಗಳಿರಬೇಕು. ಯಾವುದೇ ದಾಖಲೆಗಳು ಇಲ್ಲದಿದ್ದರೂ ತಮ್ಮ ತೇಜೋವಧೆ ಮಾಡುವ ಉದ್ದೇಶದಿಂದ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದು ವಿಶ್ರಾಂತ ಕುಲಪತಿ ಪೊ›.ಕೆ.ಎಸ್.ರಂಗಪ್ಪ ತಿಳಿಸಿದರು.