Advertisement

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

12:01 AM Sep 17, 2024 | Team Udayavani |

ತುಮಕೂರು: ಶಾಸಕ ಮುನಿರತ್ನ ಆಡಿಯೋ ರೆಕಾರ್ಡ್‌ ಒಂದರಲ್ಲಿ ಒಂದು ಸಮುದಾಯದ ಬಗ್ಗೆ ಅವಹೇಳನ ಮಾಡಿ ಅವಮಾನಿಸಿದರು ಎಂಬುದಾಗಿ ದೂರು ಬಂದ ಹಿನ್ನೆಲೆಯಲ್ಲಿ ಎಫ್ಐಆರ್‌ ದಾಖಲಿಸಿ ಬಂಧಿಸಿ ತನಿಖೆ ಪ್ರಾರಂಭಿಸಲಾಗಿದೆ.

Advertisement

ಧ್ವನಿ ಅವರದ್ದೇ ಎಂದು ಖಚಿತವಾದರೆ ಕಾನೂನು ಪ್ರಕಾರ ಕ್ರಮ ಜರಗಿಸಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರನ್ನು 2 ದಿನದ ಅವಧಿಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆಡಿಯೋದಲ್ಲಿರುವ  ಧ್ವನಿತನ್ನದಲ್ಲ ಎಂದು ಮುನಿರತ್ನ ಅಲ್ಲಗಳೆದಿದ್ದಾರೆ. ಫೊರೆನ್ಸಿಕ್‌ನವರು ಧ್ವನಿಯನ್ನು ಪಡೆದು ಪರಿಶೀಲಿಸಲಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next