Advertisement

ಹಗಲಿನಲ್ಲಿ ಬಿಸಿಲಿನ ತಾಪ ಸಂಜೆಯಾದರೆ ಮೈ ನಡುಗಿಸೋ ಚಳಿ

09:30 PM Nov 22, 2019 | Team Udayavani |

ದೇವನಹಳ್ಳಿ: ಮುಂಜಾನೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಂಜಿನಿಂದಾಗಿ ಜನತೆ ಚಳಿಯಿಂದಾಗಿ ನಡುಗುತ್ತಿರುವಂತೆಯೇ ರಾಷ್ಟ್ರೀಯ ಹೆದ್ದಾರಿ 7 ಮತ್ತು 207 ರಲ್ಲಿ ಬರುವ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

Advertisement

ಮುಂದೆ ನಿಂತವರು ಸ್ಪಷ್ಟವಾಗಿ ಕಾಣದಷ್ಟು ಮಂಜು ಸುರಿಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮುಂದೆ ಆಗಮಿಸುವ ವಾಹನಗಳು ಅಸ್ಪಷ್ಟವಾಗಿ ಕಾಣುತ್ತಿವೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಬಹಳಷ್ಟಿದೆ.

ವಾಯು ವಿಹಾರ ಮಾಡುವವರು. ಪತ್ರಿಕಾ ವಿತರಕರೂ ಚಳಿಯಲ್ಲಿ ನಡುಗುವಂತಾಗುತ್ತಿದೆ. ಚಳಿಯಲ್ಲಿ ಬೆಳಗ್ಗೆ ತೆರೆದಿದ್ದು ಹೋಟಲ್‌ಗ‌ಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಟೀ, ಕಾಫೀ ಕುಡಿಯುವುದರ ಮೂಲಕ ಚಳಿಯನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚಿಗೆ 02-03 ಬಾರಿ ಮಳೆ ಬಂದು ಹೋಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನದ ಮೇಲೆ ಬಿಸಿಲು ಆವರಿಸುತ್ತದೆ. ಪ್ರಾಣಿ ಪಕ್ಷಿಗಳಾದಿಯಾಗಿ ಎಲ್ಲರಿಗೂ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಸೆಲೆಗಳು ಭಾಗಶಃ ಬತ್ತಿವೆ. ಇದರಿಂದಾಗಿ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಹಾಗೆಯೇ ಚಳಿಯಿಂದಾಗಿ ಹಿಂದಿಗಿಂತಲೂ ಈ ಬಾರಿ ಉರಿಬಿಸಿಲು ಜನರನ್ನು ಗಾಬರಿಗೊಳ್ಳುವಂತೆ ಮಾಡಿದೆ. ಕೆಲವರು ಮನೆಯಲ್ಲಿ ಇಟ್ಟಿದ್ದ ಸ್ವೆಟರ್‌ ಮತ್ತು ಟೋಪಿಯನ್ನು ಹೊರ ತೆಗೆದು ದಿನನಿತ್ಯ ಧರಿಸುವಂತಾಗಿದೆ.

ಸಂಜೆಯಾಗುತ್ತಲೆ ಮೈ ನಡುಗಿಸುವ ಚಳಿ ಜನರನ್ನು ತತ್ತರಿಸುತ್ತಿದೆ. ಹವಾಮಾನ ವೈಪರೀತ್ಯದಿಂದ ಜನ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಜನರು ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ. ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಲ್ಲುವ ರೋಗಿಗಳ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದೆ.

Advertisement

ಸಂಜೆಯಾಗುತ್ತಲೇ ಜನರು ಚಳಿಗೆ ತತ್ತರಿಸುವಂತಾಗುತ್ತಿದೆ. ಎರಡು ವಾರಗಳಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಈ ನಡುವೆಯೇ ಸಂಜೆಯಾದರೆ ಸಾಕು ಮೈ ಕೊರೆಯುವ ಚಳಿ ಪ್ರಾರಂಭವಾಗುತ್ತದೆ.
-ನಾಗೇಶ್‌, ನಾಗರಿಕ

ಚಳಿಗಾಲದಲ್ಲಿ ಕೆಲವು ಖಾಯಿಲೆ ಇರುವವರು ಇಂತಹ ಸಂದರ್ಭದಲ್ಲಿ ಜಾಗ್ರತೆಯಿಂದ ಇರಬೇಕು. ಚಳಿಯಿಂದ ಜನರಲ್ಲಿ ಕೆಮ್ಮು ನೆಗಡಿ, ಜ್ವರ ಉಲ್ಬಣವಾಗುವ ಸಾಧ್ಯತೆಯಿದೆ.
-ನರಸಾರೆಡ್ಡಿ, ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next