Advertisement

ಎಸ್‌ಟಿಪಿ ನಿಷ್ಕ್ರಿಯವಾಗಿದ್ದರೆ ನೀರು ಬಂದ್‌

12:21 PM Mar 26, 2019 | Team Udayavani |

ಬೆಂಗಳೂರು: ಬೇಸಿಗೆಯಲ್ಲಿ ನೀರು ಪೋಲಾಗುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಲಮಂಡಳಿ, ಈ ನಿಟ್ಟಿನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸದ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಪೂರೈಕೆ ಕಡಿತಗೊಳಿಸಲು ನಿರ್ಧರಿಸಿದೆ.

Advertisement

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬುಎ) ಮತ್ತು ಜಲಮಂಡಳಿ ವತಿಯಿಂದ ನಗರದಲ್ಲಿರುವ ಎಲ್ಲ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ತಪಾಸಣೆ ನಡೆಸಲಾಗುವುದು.

ಈ ವೇಳೆ ಅಪಾರ್ಟ್‌ಮೆಂಟ್‌ಗಳಲ್ಲಿ ಈ ಸಂಸ್ಕರಣಾ ಘಟಕಗಳು ನಿಯಮಾನುಸಾರ ಕಾರ್ಯನಿರ್ವಹಿಸದಿರುವುದು ಕಂಡುಬಂದಲ್ಲಿ ಅಂತಹ ಅಪಾರ್ಟ್‌ಮೆಂಟ್‌ಗಳ ಮೇಲೆ ಕ್ರಮಕೈಗೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗುವುದು ಹಾಗೂ ನೀರು ಸರಬರಾಜಿನ ಪ್ರಮಾಣ ಕಡಿತಗೊಳಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಸಿದೆ.

ರೂಪುರೇಷೆ: ನೀರಿನ ಸದ್ಬಳಕೆ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಿರುವ ಜಲಮಂಡಳಿ, ಅನಿವಾರ್ಯ ಇದ್ದರೂ ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಗ್ರಾಹಕರಿಗೆ ಕಾವೇರಿ ನೀರು ಸರಬರಾಜಿಗೆ ಕತ್ತರಿ ಹಾಕುವುದು. ಮಳೆ ನೀರು ಕೊಯ್ಲನ್ನು ಅಳವಡಿಸಿಕೊಂಡಿರುವ ಕಟ್ಟಡಗಳ ಸುಸ್ಥಿತಿ ಪರಿಶೀಲಿಸಿ ಅದರ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು.

ಯಾವ ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲು ಕಡ್ಡಾಯ ಮಾಡಲಾಗಿದೆಯೋ, ಅಲ್ಲಿ ಹೆಚ್ಚುವರಿಯಾದ ಸಂಸ್ಕರಿಸಿದ ನೀರನ್ನು ಅಕ್ಕ-ಪಕ್ಕದ ಅಪಾರ್ಟ್‌ಮೆಂಟ್‌ಗಳಿಗೆ ಹಾಗೂ ಮನೆಗಳಿಗೆ ಇತರೆ ಬಳಕೆಗೆ ಉಪಯೋಗಿಸಿಕೊಳ್ಳಲು ಜೋಡಿ ಕೊಳವೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದೂ ಹೇಳಿದೆ.

Advertisement

ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವ ನಾಗರಿಕರು ಒಂದು ವರ್ಷದ ಅವಧಿಯಲ್ಲಿ ನೀರಿನ ಬಳಕೆಯನ್ನು ಒಂದು ಸವಾಲು ಎಂದು ಸ್ವೀಕರಿಸಿ ಗಣನೀಯವಾಗಿ ಬಳಕೆಯ ಪ್ರಮಾಣವನ್ನು ಕಡಿಮೆ ಉಪಯೋಗಿಸಿದ್ದಲ್ಲಿ, ಅಂತಹವರನ್ನು ಗುರುತಿಸಿ ಜಲಮಂಡಳಿಯ ತಜ್ಞರ ತಂಡದಲ್ಲಿ ಸೇರಿಸಿ ಅವರು ಅನುಸರಿಸಿದ ವಿಧಾನಗಳನ್ನು ಇತರರಿಗೂ ತಿಳಿಸಲಾಗುವುದು.

ಪರವಾನಗಿ ರದ್ದು: ಜಲಮಂಡಳಿಯಿಂದ ಗೃಹಬಳಕೆ ಉದ್ದೇಶಕ್ಕೆ 2011ರಿಂದ ಇದುವರೆಗೆ ನೀಡಿರುವ ಸುಮಾರು 20 ಸಾವಿರ ಕೊಳವೆಬಾವಿಗಳ ವಿವರ ಪಡೆದು, ಇದರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಟ್ಯಾಂಕರ್‌ಗಳ ಮಾಲೀಕರ ಮೇಲೆಯೂ ಕ್ರಮಕೈಗೊಳ್ಳಲಾಗುವುದು. ಹಾಗೂ ಅಂತಹವರ ಪರವಾನಗಿ ರದ್ದುಪಡಿಸಲಾಗುವುದು ಎಂದೂ ಮಂಡಳಿ ಎಚ್ಚರಿಸಿದೆ.

ಉದ್ಯಾನಗಳಿಗೆ ಸಂಸ್ಕರಿಸಿದ ನೀರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಿರ್ಮಿಸಿರುವ ಉದ್ಯಾನಗಳಿಗೆ ಇನ್ಮುಂದೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಪೂರೈಸಬೇಕು ಎಂದು ಸೂಚನೆ ನೀಡಿರುವ ಜಲಮಂಡಳಿ, ಕೊಳವೆಬಾವಿಗಳ ನೀರನ್ನು ಸರಬರಾಜು ಮಾಡುವುದು ಕಂಡುಬಂದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ಪಾಲಿಕೆ ಉದ್ಯಾನಗಳಿಗೆ ಸ್ವತಃ ಮಂಡಳಿಯೇ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ. ಆದಾಗ್ಯೂ ಅವೈಜ್ಞಾನಿಕವಾಗಿ ಕೊಳವೆಬಾವಿ ಮೂಲಕ ಉದ್ಯಾನಗಳಿಗೆ ನೀರನ್ನು ಹಾಯಿಸುತ್ತಿದ್ದರೆ, ನೀರಿನ ಸಂಪರ್ಕ ಸ್ಥಗಿತಗೊಳಿಸಲಾಗುವುದು.

ಎಸ್‌ಟಿಪಿ ನಿಷ್ಕ್ರಿಯ, ನೀರು ಬಂದ್‌, STP passive, water stopಜತೆಗೆ ಉದ್ಯಾನಗಳಿಗೆ ತ್ಯಾಜ್ಯನೀರು ಶುದ್ಧೀಕರಣ ಘಟಕವನ್ನು ಅಳವಡಿಸಿಕೊಂಡಿರುವ ಅಪಾರ್ಟ್‌ಮೆಂಟ್‌ ಅಥವಾ ವಸತಿ ಸಮುತ್ಛಯಗಳಲ್ಲಿ ಸಂಸ್ಕರಿಸಿದ ನೀರನ್ನು ಪಡೆಯಬೇಕು. ಈ ಸಂಬಂಧ ಪಾಲಿಕೆಯು ಪೈಪ್‌ಲೈನ್‌ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next