ದಾವಣಗೆರೆ: ಹಕ್ಕ-ಬುಕ್ಕ, ಕನಕದಾಸ, ಸಂಗೊಳ್ಳಿ ರಾಯಣ್ಣನವರ ಮೂಲ ಕುರಿತು ವಿಧಾನ ಪರಿಷತ್ ಸದಸ್ಯ ವಿ. ಎಸ್. ಉಗ್ರಪ್ಪನವರು ನೀಡಿದ ಹೇಳಿಕೆ ವಾರದಲ್ಲಿ ಹಿಂಪಡೆಯದಿದ್ದರೆ, ಅವರ ಮನೆ ಮುತ್ತಿಗೆ ಹಾಕಿ ಪ್ರತಭಟಿಸಲಾಗುವುದು ಎಂದು ಪ್ರದೇಶಕುರುಬರ ಸಂಘ ಎಚ್ಚರಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಮಚಂದ್ರಪ್ಪ, ಉಗ್ರಪ್ಪ ಹೇಳಿಕೆಕುಚೋದ್ಯದಿಂದ ಕೂಡಿದೆ. ಇತಿಹಾಸ ತಿರುಚಿ ಅಗ್ಗದ ಪ್ರಚಾರ ಪಡೆಯುವ ತಂತ್ರ ಹೇಳಿಕೆಯ ಹಿಂದಿದೆ. ವಿಧಾನ ಪರಿಷತ್ ಸದಸ್ಯರಾಗಿರುವ ಉಗ್ರಪ್ಪ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ನಮ್ಮ ಸಮಾಜ ಖಂಡಿಸುತ್ತದೆ ಎಂದರು.
ಕುರುಬ, ನಾಯಕ ಜನಾಂಗದವರು ಭಾತೃತ್ವ ಭಾವದಲ್ಲಿ ಜೀವನ ನಡೆಸುತ್ತಿದ್ದಾರೆ. ಎರಡೂ ಸಮುದಾಯದ ಮಧ್ಯೆ ವಿಷ ಬೀಜ ಬಿತ್ತುವಂತಹ ಕೆಲಸ ಉಗ್ರಪ್ಪ ಮಾಡಿದ್ದಾರೆ. ಇದುವರೆಗೆ ಉಗ್ರಪ್ಪ ಜಾತ್ಯತೀತ ನಿಲುವು ಹೊಂದಿ ರಾಜಕೀಯ ಮಾಡಿಕೊಂಡು ಬಂದಿದ್ದರು. ವಾಲೀ¾ಕಿ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.
ಇದೀಗ ನಾಯಕ ಸಮಾಜದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ಏಕಾಏಕಿ ಇಂತಹ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ ಎಂದು ಅವರು ಹೇಳಿದರು. ದಾಸಶ್ರೇಷ್ಠ ಕನಕದಾಸರು ತಮ್ಮ ಕೀರ್ತನೆಗಳಲ್ಲಿಯೇ ತಾವು ಕುರುಬ ಜಾತಿಗೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಐತಿಹಾಸಿಕ ದಾಖಲೆಗಳ ಪ್ರಕಾರ ಸಂಗೊಳ್ಳಿ ರಾಯಣ್ಣ ಕುರುಬ ಸಮಾಜಕ್ಕೆ ಸೇರಿದವರು.
ಇದಕ್ಕೆ ಉಗ್ರಪ್ಪನವರು ಈಗ ಸರ್ಟಿμಕೇಟ್‌ನೀಡಬೇಕಾದ ಅಗತ್ಯ ಇಲ್ಲ. ಅವರು ತಮ್ಮ ಬಾಯಿ ಚಪಲಕ್ಕೆ ನೀಡಿದ ಹೇಳಿಕೆಯನ್ನು ವಾರದಲ್ಲಿ ಹಿಂಪಡೆಯಬೇಕು. ಕುರುಬ ಸಮಾಜದ ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ನಾವು ಅವರ ಮನೆಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಅವರು ಎಚ್ಚರಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿಪಿ. ರಾಜಕುಮಾರ್ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಯಲ್ಲಿ ನಾನು ಕುರುಬ, ನನ್ನ ತಂದೆ ಬೀರಪ್ಪ, ತಾಯಿ ಬಚ್ಚಮ್ಮ ಎಂಬುದಾಗಿ ಹೇಳಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣನ ವಂಶಸ್ಥರು ಇಂದಿಗೂ ಬದುಕಿದ್ದಾರೆ. ಹೀಗಿರುವಾಗಿ ಉಗ್ರಪ್ಪನವರಿಂದ ಇಂತಹ ಹೇಳಿಕೆ ನಿರೀಕ್ಷಿತವಲ್ಲ.
ಸಂವಿಧಾನ ತಿದ್ದುಪಡಿ ಮಾಡುವಂತಹ ಶಾಸಕಾಂಗವನ್ನು ಪ್ರತಿನಿಧಿಸುವ, ವಕೀಲ, ಚಿಂತಕರೆನ್ನಿಸಿಕೊಂಡಿರುವ ಉಗ್ರಪ್ಪ ನೀಡಿದ ಹೇಳಿಕೆಯಿಂದ ಸಹೋದರ ಸಮಾಜಗಳ ನಡುವಿನ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಬೇಸರಿಸಿದರು. ಸಮಾಜದ ಮುಖಂಡ ಎಸ್.ಎಸ್. ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.