Advertisement

ಹಾಲಿನ ಖರೀದಿ ದರ ಹೆಚ್ಚಿಸದಿದ್ದರೆ ಕೆಎಂಎಫ್ ಮುತ್ತಿಗೆ

03:29 PM Oct 16, 2022 | Team Udayavani |

ಕೋಲಾರ: ರಾಜ್ಯ ಸರಕಾರ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಹಾಲಿನ ಖರೀದಿ ದರ ಹೆಚ್ಚಳ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಕೆಎಂಎಫ್‌ ಮುಂದೆ ಜಿಲ್ಲೆಯ ರೈತರೊಂದಿಗೆ ಬೃಹತ್‌ ಪ್ರತಿಭಟನೆಯ ಮೂಲಕ ಮುತ್ತಿಗೆ ಹಾಕಲಾಗುತ್ತದೆ ಎಂದು ಕೋಮುಲ್‌ ನಿರ್ದೇಶಕ ವಡಗೂರು ಡಿ.ವಿ ಹರೀಶ್‌ ತಿಳಿಸಿದರು.

Advertisement

ತಾಲೂಕಿನ ವಕ್ಕಲೇರಿ ಹೋಬಳಿಯ ಜಂಗಾಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದಿಂದ ಈಗಾಗಲೇ ಲೀಟರಿಗೆ 27 ರೂ. ನೀಡುತ್ತಿದ್ದು, ಖರೀದಿ ದರ ಹೆಚ್ಚಿಸಲು ಸರ್ಕಾರ ಮತ್ತು ಕೆಎಂಎಫ್‌ ಅನುಮತಿಗಾಗಿ ಪ್ರಸ್ತಾವನೆ ಕಳಿಸಿದ್ದರೂ ಕಾರಣಾಂತರಗಳಿಂದ ಸಿಎಂ ಅನುಮೋದನೆ ನೀಡಿಲ್ಲ ಕೂಡಲೇ ಖರೀದಿ ದರ 6 ರೂ. ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಕೊರೊನಾ ವೇಳೆ ಹಾಲಿನ ಉತ್ಪಾದನೆ ಹೆಚ್ಚಿದ್ದರೂ ಸರಿಯಾದ ರೀತಿಯಲ್ಲಿ ಬಳಕೆ ಯಾಗದೇ ಸುಮಾರು 35 ಕೋಟಿ ನಷ್ಟ ಅನುಭವಿಸಲಾಯಿತು. ಇದರ ಮಧ್ಯೆ ಕೋಚಿಮುಲ್‌ ಒಕ್ಕೂಟದಿಂದ ಉತ್ಪಾದಕರಿಗೆ ಸಿಗಬೇಕಾದ ಸಾಕಷ್ಟು ಸೌಲಭ್ಯಗಳನ್ನು ನೀಡ ಲಾಗಿದೆ. ರಾಜಕೀಯ ಲಾಭಗಳಿಗಾಗಿ ಒಕ್ಕೂಟವನ್ನು ವಿಭಜನೆಗೆ ತಡೆಯಾಜ್ಞೆ ತಂದಿದ್ದರೂ ಇತ್ತೀಚೆಗೆ ಕೋಚಿಮುಲ್‌ ವಿಭಜನೆಯಾಗಿದ್ದು, ಆಡಳಿತದ ದೃಷ್ಟಿಯಿಂದ ಒಳ್ಳೆಯದಾಗಿದೆ. ಒಕ್ಕೂಟದಿಂದ ಉತ್ಪಾದಕರಿಗೆ ಹಾಗೂ ಸಂಘಗಳಿಗೆ ಸಿಗಬೇಕಾಗ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಕೊಡಿಸುತ್ತೇನೆ ಪಶು ಆಹಾರಗಳನ್ನು ಕಡಿಮೆ ದರದಲ್ಲಿ ಉತ್ಪಾದಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಧರ್ಮಸ್ಥಳ ಸಂಸ್ಥೆ ತಾಲೂಕು ನಿರ್ದೇಶಕ ಸಿದ್ದಗಂಗಯ್ಯ ಮಾತನಾಡಿ, ಧರ್ಮಸ್ಥಳದ ಸಂಘದಿಂದ ರಾಜ್ಯಾದ್ಯಂತ ರೈತರನ್ನು ಮಹಿಳೆ ಯರನ್ನು ಸಂಘಟಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ರೂಪಿಸಿ ಕೊಂಡು ಬಂದಿದೆ. ಜತೆಗೆ ಹಾಲು ಉತ್ಪಾದಕರ ಬೆಳವಣಿಗೆಗೆ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹಾಲು ಉತ್ಪಾದಕರ ಏಳಿಗೆಗಾಗಿ ರಾಜ್ಯದಲ್ಲಿ 27 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 71 ಹಾಲು ಉತ್ಪಾದಕರ ಸಂಘ ಗಳಿಗೆ 65 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಧರ್ಮಸ್ಥಳ ಸಂಘವನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕಾಗಿದೆ ಎಂದು ಹೇಳಿದರು.

ಜಂಗಾಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್‌ ಅಧ್ಯಕ್ಷೆ ವಹಿಸಿದ್ದರು. ಕೋಮುಲ್‌ ವಿಸ್ತಾರಣಾಧಿಕಾರಿ ರಾಮಾಂಜಿನಪ್ಪ, ಭರತ್‌ ಕುಮಾರ್‌ ಶ್ರೀನಿವಾಸ್‌, ರಾಜುಬಾಬು, ನಾಗಪ್ಪ, ಕೃಷ್ಣಪ್ಪ, ಶ್ರೀನಿವಾಸ್‌, ಗೋಪಾಲ್‌, ಸಂಘದ ಕಾರ್ಯದರ್ಶಿ ನಂಜುಂಡಪ್ಪ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next