Advertisement
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹಾಗೂ ಕೋಲಾರದ ಬಂಗಾರಪೇಟೆಯಲ್ಲಿ ರವಿವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣ ಪ್ರಚಾರ ಹಾಗೂ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರಕಾರ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.
Related Articles
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಉದ್ಯೋಗ ಕೊಡಿ ಎಂದರೆ ಪಕೋಡಾ ಮಾರಿ ಎಂದ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಲು ನಾಲಾಯಕ್ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
Advertisement
ಶಿಡ್ಲಘಟ್ಟದಲ್ಲಿ ರವಿವಾರ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವಿ.ಗೌತಮ್ ಪರ ಚುನಾವಣ ಪ್ರಚಾರದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಮೋದಿ ಹಾಗೂ ದೇವೇಗೌಡರು ಸುಳ್ಳು ಹೇಳಿದ್ದಾರೆ. ಸುಳ್ಳನ್ನು ಯಾರೂ ನಂಬುವುದಿಲ್ಲ. ಸುಳ್ಳು ಹೇಳುವುದಕ್ಕೆ ಮಿತಿ ಬೇಡವೇ? ನಾವು ನುಡಿದ್ದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ 8 ತಿಂಗಳಿಗೆ 5 ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.
ರೋಡ್ ಶೋದಲ್ಲಿ ಖಾಲಿ ಚೊಂಬು ಸದ್ದುಕೋಲಾರದ ಬಂಗಾರಪೇಟೆಯಲ್ಲಿ ನಡೆದ ಕಾಂಗ್ರೆಸ್ ರೋಡ್ ಶೋದಲ್ಲಿ ಖಾಲಿ ಚೊಂಬಿನ ಸದ್ದು ಜೋರಾಗಿತ್ತು. ಸಿಎಂ ತಮ್ಮ ಭಾಷಣದ ನಡುವೆ ಕೇಳುವ ಪ್ರತಿ ಪ್ರಶ್ನೆಗೂ ಜನರಿಂದ “ಚೊಂಬು..ಚೊಂಬು..’ ಎಂಬ ಉತ್ತರ ಸಿಕ್ಕಿತು. 10 ವರ್ಷಗಳಿಂದ ರಾಜ್ಯಕ್ಕೆ ಖಾಲಿ
ಚೊಂಬು ಕೊಡುಗೆ: ಸುರ್ಜೇವಾಲ
ಮಂಡ್ಯ: ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಖಾಲಿ ಚೊಂಬು ಕೊಡುಗೆ ನೀಡುತ್ತಲೇ ಬಂದಿದ್ದಾರೆ. ರಾಜ್ಯದ ತಮ್ಮ ಪಾಲಿನ ತೆರಿಗೆ, ಪರಿಹಾರ ಹಣ ನೀಡದೆ ಖಾಲಿ ಚೊಂಬು ನೀಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 58 ಸಾವಿರ ಕೋಟಿ ರೂ. ಬರಬೇಕು. ಎನ್‌ಡಿಆರ್‌ಎಫ್ ನಿಯಮದಡಿ ಬರ ಪರಿಹಾರವಾಗಿ 18 ಸಾವಿರ ಕೋಟಿ ರೂ. ಬರಬೇಕು. ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ರಾಜ್ಯಕ್ಕೆ ಒಂದು ರೂಪಾಯಿಯೂ ಬಂದಿಲ್ಲ. ಕೇಳಿದರೆ, ಮೋದಿ ಖಾಲಿ ಚೊಂಬು ತೋರಿಸುತ್ತಾರೆ. ದೇಶದಲ್ಲಿ ಖಾಲಿ ಚೊಂಬು ಸಂಸ್ಕೃತಿಯನ್ನು ಬೆಳೆಸಿದ್ದೇ ನರೇಂದ್ರ ಮೋದಿ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ಧಾಳಿ ನಡೆಸಿದರು.