Advertisement

15 ದಿನದಲ್ಲಿ ಮಹದಾಯಿ ವಿವಾದ ಇತ್ಯರ್ಥ ಆಗದಿದ್ದರೆ ಚುನಾವಣೆ ಬಹಿಷ್ಕಾರ!

08:56 AM Oct 07, 2017 | |

ಹುಬ್ಬಳ್ಳಿ: ಕಳೆದ ಮೂರು ದಶಕಗಳಿಂದ ಮಹದಾಯಿ ವಿವಾದವನ್ನು ಜೀವಂತವಾಗಿಟ್ಟಿರುವ ರಾಜಕಾರಣಿಗಳಿಗೆ ಹೋರಾಟಗಾರರು ಮತ್ತೆ ಬಿಸಿ ಮುಟ್ಟಿಸಿದ್ದಾರೆ. ಸಮಸ್ಯೆ ಇತ್ಯರ್ಥ ಕುರಿತು ಇನ್ನು 15 ದಿನದೊಳಗೆ ಸ್ಪಷ್ಟ ನಿರ್ಧಾರ
ತಿಳಿಸಬೇಕು. ಇಲ್ಲವಾದರೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಹಾಗೂ ರಾಜಕೀಯ ಸಮಾವೇಶಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಎಚ್ಚರಿಸಿದೆ.

Advertisement

ಮಹದಾಯಿ ಹೋರಾಟಗಾರರ ಹಾಗೂ ರೈತರ ನಿಯೋಗ ಶುಕ್ರವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರ ನಿವಾಸಕ್ಕೆ ಆಗಮಿಸಿ ಚರ್ಚಿಸಿತು. ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಘೋಷಣೆ ಆಗಲಿದ್ದು, ವಿವಾದ
ಇತ್ಯರ್ಥಕ್ಕೆ ತಾರ್ತಿಕ ಅಂತ್ಯ ಕಾಣಿಸಲು ಆಗದಿದ್ದರೆ ಮುಂದಿನ ಹೋರಾಟ ನಿರ್ಧರಿಸುತ್ತೇವೆ. ಮಹದಾಯಿ ಹೋರಾಟ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ, ರಾಜಕೀಯ ಸಮಾವೇಶಗಳಿಗೆ ಅವಕಾಶ ನೀಡಲಾಗುವುದಿಲ್ಲ. ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ವೀರೇಶ ಸೊಬರದಮಠ, ಶಂಕರಪ್ಪ ಅಂಬಲಿ ತಿಳಿಸಿದರು.

ಮಹದಾಯಿ ವಿಚಾರವಾಗಿ ಸದ್ಯಕ್ಕೆ ಸಾರ್ವಜನಿಕವಾಗಿ ಏನನ್ನೂ ಹೇಳಲಾಗದು. ಬಿಜೆಪಿಯಿಂದ ಏನೆಲ್ಲ
ಸಾಧ್ಯವೋ ಆ ಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಈಗಾಗಲೇ ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆಗೆ ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. 

ಜಗದೀಶ ಶೆಟ್ಟರ್‌, ವಿಧಾನ ಸಭಾ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next