ಕುದೂರು: ಭಾರತದಲ್ಲಿ ಕೋವಿಡ್ 19 ವ್ಯಾಪಕವಾಗಿ ಹರಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಕಾರಣ. ಶೀಘ್ರ ವಿಮಾನ ಹಾರಾಟ ನಿಲ್ಲಿಸಿದ್ದರೆ ದೇಶಕ್ಕೆ ಇಷ್ಟು ಕಷ್ಟದ ದಿನಗಳು ಬರುತ್ತಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಬಗ್ಗೆ ವಾಗ್ಧಾಳಿ ನಡೆಸಿದರು. ಶ್ರೀರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಿಂದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮ ರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ದಲ್ಲಿರಲು ಸರ್ಕಾರವನ್ನು ಸಕಾಲದಲ್ಲಿ ಎಚ್ಚರಿ ಸಿದ್ದೇ ಕಾರಣ. ಬಿಜೆಪಿ ಪಕ್ಷವನ್ನು ನಂಬಬೇಡಿ. ಜೆಡಿಎಸ್ ಪಕ್ಷದಿಂದ ಎಚ್ಚರದಿಂದಿರಬೇಕು. ಮಾಗಡಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹೇಳಿದರು. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತ ನಾಡಿ, ಮಾಗಡಿ ತಾಲೂಕಾದ್ಯಂತ ರೈತರ ಹೊಲ, ತೋಟಗಳಲ್ಲಿ ಬೆಳೆದಿದ್ದ ತರಕಾರಿ ಖರೀದಿಸಿ ತಾಲೂಕಿನ ಜನರಿಗೆ ಹಂಚುವ ಕೆಲಸ ಮಾಡಿದ್ದೇವೆ.
ರಾಜ್ಯದಲ್ಲೇ ಮೊಟ್ಟ ಮೊದಲು ಸರ್ಕಾರ ಜಾರಿಗೆ ಬರುವ ಮುನ್ನವೇ ಸವಿತಾ ಸಮಾಜದವರಿಗೆ ಮಾಸಿಕ 500 ರೂ ತಲುಪುವಂತೆ ಮಾಡಲಾಗಿದೆ ಎಂದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಮುಸ್ಲಿಮರು ಕೋವಿಡ್ 19ದಿಂದಾಸಗಿ ಅತ್ಯಂತ ಸರಳವಾಗಿ ರಂಜಾನ್ ಆಚರಣೆ ಮಾಡುತ್ತಿ ದ್ದಾರೆ. ಅವರಿಗೆ ಪ್ರತಿ ವರ್ಷ ಆಹಾರದ ಕಿಟ್ ವಿತರಿಸುತ್ತ ಬಂದಿದ್ದು, ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಸಿದ್ದೇನೆ ಎಂದರು. ಮಾಜಿ ಸಚಿವ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿದರು.
ಕುದೂರು ಹೋಬಳಿ ಆಶಾ ಕಾರ್ಯಕರ್ತೆಯರಿಗೆ 3000 ರೂ.ಗಳ ಸಹಾಯ ಧನ, ನಂದಿನಿ ಸಿಹಿ ಕಿಟ್ ವಿತರಿಸಲಾಯಿತು. ಮಾಜಿ ಸಚಿವ ಚಲುವರಾಯಸ್ವಾಮಿ, ಜಿಪಂ ಸದಸ್ಯ ಎಚ್.ಎನ್.ಅಶೋಕ್, ಅಣ್ಣೇ ಗೌಡ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ಡಾ.ರಾಜಣ್ಣ, ಕುದೂರು ಗ್ರಾಪಂ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಯುವ ಮುಖಂಡ ಯತೀಶ್, ಚಂದ್ರುಶೇಖರ್, ಹನುಮಂತರಾಯಪ್ಪ, ಶ್ರೀಗಿರಿಪುರ ಪ್ರಕಾಶ್,ಸಿದ್ದಲಿಂಗಪ್ಪ, ಶಿವಪ್ರಸಾದ್, ಹೊನ್ನಪ್ಪ, ಅಬ್ದುಲ್ ಜಾವಿದ್ ಇತರರು ಇದ್ದರು.
ಪೊಲೀಸರ ಹರಸಾಹಸ, ಸಾರ್ವಜನಿಕರ ಆಕ್ರೋಶ: ಜನರನ್ನು ನಿಯಂತ್ರಿಸಲು ಪೊಲೀಸರು ಉರಿಬಿಸಿಲಿನಲ್ಲಿ ಹರಸಾಹಸ ಪಡುವಂತಾಯಿತು. ಕೋವಿಡ್ 19ದಂತಹ ಸಂಕಷ್ಟದ ಸಂದರ್ಭದಲ್ಲಿ ಹೀಗೆ ಕಾರ್ಯಕ್ರಮ ಮಾಡಿ ಜನಸಂದಣಿ ಮಾಡದೆ ಮುಸ್ಲಿಮರ ಮನೆಗಳಿಗೆ ಕಿಟ್ ನೀಡಿದ್ದರೆ ಸರಿಹೋಗು ತ್ತಿತ್ತು. ಚುನಾವಣೆ ಗಿಮಿಕ್ ರೀತಿ ದೊಂಬಿ ಕಾರ್ಯಕ್ರಮ ಮಾಡಿದ್ದು, ಸಾರ್ವಜನಿಕ ರಲ್ಲಿ ಆಕ್ರೋಶ ಮೂಡಿಸಿತು.