Advertisement

ಸಂವಿಧಾನಕ್ಕೆ ಧಕ್ಕೆಯಾದರೆ ನಮ್ಮ ಬದುಕಿಗೆ ಧಕ್ಕೆ: ಸತೀಶ

11:29 AM Oct 08, 2018 | |

ಕಲಬುರಗಿ: ದೇಶದ ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಅದು ನಮ್ಮ ಬದುಕಿಗೆ ಧಕ್ಕೆ ಬಂದಂತೆ. ಸಂವಿಧಾನ ಉಳಿಯದಿದ್ದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಉಳಿವು ಅಗತ್ಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ಸತೀಶ ಹೇಳಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ
ಸಂವಿಧಾನದ ಅಳಿವು-ಉಳಿವು ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ
ಅತಿಥಿಗಳಾಗಿದ್ದ ಪತ್ರಕರ್ತ ಶಿವರಂಜನ ಸತ್ಯಂಪೇಟ ಮಾತನಾಡಿ, ಕೋಮುವಾದ, ಭಯೋತ್ಪಾದನೆ, ಮೂಲಭೂತವಾದ, ಮನುವಾದ, ಭ್ರಷ್ಟಾಚಾರ ತಲೆ ಎತ್ತುತ್ತಿರುವ ಇಂದಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ ಡಾ|
ಬಿ.ಆರ್‌. ಅಂಬೇಡ್ಕರ ಹಾಗೂ ಅವರು ರಚಿಸಿದ ಸಂವಿಧಾನ ಎಂದೆಂದಿಗೂ ಪ್ರಸ್ತುತವಾಗಲಿದೆ ಎಂದು ಹೇಳಿದರು.

ಸಂವಿಧಾನ ನಮಗೆ ಹಕ್ಕುಗಳ ಜತೆಗೆ ಕರ್ತವ್ಯ, ಹೊಣೆಗಾರಿಕೆ ನೀಡಿದೆ. ಅದನ್ನು ತಿಳಿದುಕೊಳ್ಳಬೇಕು ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದೊದಗಿದ ಸಂದರ್ಭದಲ್ಲಿ ಸಂವಿಧಾನದ ಓದು ಹಾಗೂ ಅಭಿಯಾದದ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿದ್ದ ರಾಜ್ಯ ಹೈಕೋರ್ಟ್‌ ನ್ಯಾಯವಾದಿ ಎಚ್‌. ಮೋಹನಕುಮಾರ ಮಾತನಾಡಿ, ಬಂಧುತ್ವ, ಭಾತೃತ್ವ ಹೊಂದಿರುವ ಭಾರತದ ರಾಷ್ಟ್ರೀಯತೆಗೆ ಪೆಟ್ಟು ಬಿದ್ದಿದೆ. ಸಾಂಸ್ಕೃತಿಕ ದಬ್ಟಾಳಿಕೆಯಿಂದಾಗಿ ನಾವು
ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದೇವೆ ಎಂದು ವಿಷಾದಿಸಿದರು.

ಚಿಕ್ಕಬಳ್ಳಾಪುರದ ಜನಾರ್ಧನ ಎನ್‌., ಡಾ| ಶಿವಾನಂದ ಲೆಂಗಟಿ, ಮಸ್ತಾನ್‌ ಬಿರಾದಾರ, ಡಾ| ಅನಂತಾ ಬಿ.ಜಿ., ಮಲ್ಲಯ್ಯ ಗುತ್ತೇದಾರ, ಶಂಬಣ್ಣ ಹೂಗಾರ, ಪ್ರಕಾಶ ರಾಠೊಡ, ಸವಿತಾ ನಾಶಿ, ಚಂದ್ರಕಾಂತ ನಿರಗುಡಿ ಇದ್ದರು.

Advertisement

 ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಎ. ಶ್ರೀಗನ್‌ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಮಾಡಬೂಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಮ್ಮ ಸಲಗರ್‌ ಪ್ರಬಂಧ ಮಂಡಿಸಿದರು. ಸುನೀಲಕುಮಾರ ಸ್ವಾಗತಿಸಿದರು. ದಿಲೀಪಕುಮಾರ ಶೆಟ್ಟಿ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next