Advertisement

Not limited to Gaza; ಇಸ್ರೇಲ್‌ ಹಿಟ್‌ಲಿಸ್ಟ್‌ ಇನ್ನೂ ಯಾರಿದ್ದಾರೆ?

02:11 AM Oct 01, 2024 | Team Udayavani |

ಕಳೆದ ವರ್ಷ ಅಕ್ಟೋಬರ್‌ 7ರ ದಾಳಿ ಬಳಿಕ ಹಮಾಸ್‌ ಸರ್ವನಾಶಕ್ಕೆ ಇಸ್ರೇಲ್‌ ಪಣ ತೊಟ್ಟಿದೆ. ಆದರೆ, ಈಗ ಯುದ್ಧ ಬರೆ ಗಾಜಾಕ್ಕೆ ಸೀಮಿತ ವಾಗದೆ ಮಧ್ಯಪ್ರಾಚ್ಯವನ್ನು ವ್ಯಾಪಿಸುತ್ತಿದೆ. ಹಮಾಸ್‌ ಜತೆಗೆ ಹೆಜ್ಬುಲ್ಲಾ, ಹೌತಿ, ಸಿರಿಯಾನ್‌, ಇರಾಕ್‌ ಉಗ್ರರನ್ನು ಇಸ್ರೇಲ್‌ ಹುಡುಕಿ ಹೊಡೆ ಯುತ್ತಿದೆ. ಇತ್ತೀಚೆಗೆ ಹಮಾಸ್‌ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ ಹತ್ಯೆಗೀಡಾದ ಬೆನ್ನಲ್ಲೇ ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಕಥೆ ಮುಗಿ ಸಿದೆ. ಆದರೂ ಇಸ್ರೇಲ್‌ ಹಿಟ್‌ಲಿಸ್ಟ್‌ನಲ್ಲಿ ಇನ್ನೂ ಅನೇಕರಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

Advertisement

1. ಹಮಾಸ್‌ ನಾಯಕ ಯಾಹ್ಯಾ ಸಿನ್ವಾರ್‌
ಹಮಾಸ್‌ ಮುಖ್ಯಸ್ಥ ನಾಗಿರುವ ಈತ ಇಸ್ರೇಲ್‌ನ ನಂ.1 ಟಾರ್ಗೆಟ್‌. ಅಕ್ಟೋಬರ್‌ 7ರ ಇಸ್ರೇಲ್‌ ಮೇಲಿನ ದಾಳಿಗೆ ಈತನೇ ಮಾಸ್ಟರ್‌ವೆುçಂಡ್‌. ಗಾಜಾದ ಸುರಂಗಗಳಲ್ಲಿ ಅಡಗಿಕೊಂಡಿದ್ದಾನೆ. ಹಲವು ಬಾರಿ ಇಸ್ರೇಲ್‌ಗೆ ಜಸ್ಟ್‌ ಮಿಸ್‌ ಆಗಿರುವ ಈತ ಸಿಗದೆ ಗಾಜಾ ಮೇಲಿನ ಇಸ್ರೇಲ್‌ ದಾಳಿ ಕೊನೆಯಾಗುವ ಸಾಧ್ಯತೆಗಳಿಲ್ಲ. 2 ದಶಕಗಳ ಕಾಲ ಇಸ್ರೇಲ್‌ ಜೈಲಿನಲ್ಲಿದ್ದ. 2011ರಲ್ಲಿ ಬಿಡುಗಡೆಯಾಗಿದ್ದು 2017ರಿಂದ ಹಮಾಸ್‌ ನಾಯಕನಾಗಿದ್ದಾನೆ.

2. ಖಮೇನಿ: ಇರಾನ್‌ ಸರ್ವೋಚ್ಚ ನಾಯಕ
ಇರಾನ್‌ ಸರ್ವೋಚ್ಚ ನಾಯಕ ಅಯೊ ತೊಲ್ಲಾ ಅಲಿ ಖಮೇನಿ, ಮಧ್ಯ ಪ್ರಾಚ್ಯದಲ್ಲಿ ಶಿಯಾ ಸಂಘಟನೆಗಳ ಮೂಲಕ ಇಸ್ರೇಲ್‌ ಮೇಲೆ ದಾಳಿಗೆ ಕಾರಣವಾಗಿದ್ದಾನೆ. ಪಾಲೆಸ್ತೀನ್‌, ಗಾಜಾ, ಲೆಬನಾನ್‌, ಸಿರಿಯಾ, ಇರಾಕ್‌ನಲ್ಲಿ ರೆಸಿಸ್ಟೆನ್ಸ್‌ ಫೋರ್ಸ್‌ ಮೂಲಕ ತಮ್ಮ ಛಾಯಾ ಸಂಘಟನೆಗಳಿಗೆ ಇರಾನ್‌ ಮೂಲಕ ಹಣಕಾಸು, ಸೇನಾ ನೆರವು ನೀಡುತ್ತಿ ದ್ದಾನೆ. ಹಸನ್‌ ನಸ್ರಲ್ಲಾ ಹತ್ಯೆ ಬಳಿಕ ಈತನನ್ನು ಸುರಕ್ಷಿತ ಜಾಗಕ್ಕೆ ಇರಾನ್‌ ಸೇನೆ ಸ್ಥಳಾಂತರಿಸಿದೆ.

3. ಹಾಶೆಂ: ಹೆಜ್ಬುಲ್ಲಾ ಮುಂದಿನ ನಾಯಕ?
ಲೆಬನಾನ್‌ ಶಿಯಾ ಇಸ್ಲಾಮಿಕ್‌ ರಾಜಕೀಯ ಪಕ್ಷ ಮತ್ತು ಉಗ್ರ ಸಂಘಟನೆ ಹೆಜ್ಬುಲ್ಲಾದ ಪ್ರಧಾನ ಕಾರ್ಯದರ್ಶಿಯಾಗಿ ಈತನೇ ಆಯ್ಕೆಯಾ ಗುವ ಸಾಧ್ಯತೆ ಇದೆ. ಕೊಲೆಯಾದ ಹಸನ್‌ ನಸ್ರಲ್ಲಾ ಸೋದರ ಸಂಬಂಧಿಯೂ ಆಗಿರುವ ಹಾಶೆಂ ಸಹಜವಾಗಿ ಇಸ್ರೇಲ್‌ನ ಮುಂದಿನ ಟಾರ್ಗೆಟ್‌ ಆಗಿದ್ದಾನೆ. ಅಮೆರಿಕದಿಂದ ಹತನಾದ ಇರಾನ್‌ ಕಮಾಂಡರ್‌ ಖಾಸೆಂ ಸುಲೈಮಾನಿ ಪುತ್ರಿಯನ್ನು ಈತನ ಪುತ್ರ ವಿವಾಹವಾಗಿದ್ದಾನೆ.

4. ನಯೀಂ: ಹೆಜ್ಬುಲ್ಲಾದ ಪ್ರಮುಖ ನಾಯಕ
ಹೆಜ್ಬುಲ್ಲಾದ ಉಪಮುಖ್ಯಸ್ಥನಾಗಿರುವ ಈತ ಹಸನ್‌ ನಸ್ರಲ್ಲಾ ಸ್ಥಾನ ತುಂಬುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ 71 ವರ್ಷದ ಈತ, ಸಂಘಟನೆಯ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹೆಜ್ಬುಲ್ಲಾ ಸಂಘಟನೆಯನ್ನು ಸಾರ್ವಜನಿಕ ವಲಯದಲ್ಲಿ ಜನಪ್ರಿಯತೆ ಗಳಿಸಲು ಕಾರಣವಾಗಿದ್ದಾನೆ. ಜತೆಗೆ ಹಸನ್‌ ನಸ್ರಲ್ಲಾ ಹತ್ಯೆ ಬಳಿಕ, ಇಸ್ರೇಲ್‌ಗೆ ಬಲವಾದ ಪೆಟ್ಟು ಸಿದ್ಧ ಎಂದು ಘೋಷಿಸಿದ್ದು, ಅದಕ್ಕೆ ತಕ್ಕ ತಯಾರಿ ನಡೆಸಿದ್ದಾನೆ.

Advertisement

5. ಮಾರಾÌನ್‌ : ಹಮಾಸ್‌ ಸಮನ್ವಯಕಾರ
ಈತ ಕಳೆದ ತಿಂಗಳು ಇಸ್ರೇಲ್‌ ಸೇನೆ ಯಿಂದ ಹತ್ಯೆಗೀಡಾದ ಹಮಾಸ್‌ ಸೇನಾ ಮುಖ್ಯಸ್ಥ ಮಹಮದ್‌ ಡೈಫ್ನ ಉಪನಾಯಕ. ಹಮಾಸ್‌ ಸೇನಾ ವಿಭಾಗ ಮತ್ತು ರಾಜಕೀಯ ವಿಭಾಗದ ನಡುವಿನ ಸಮನ್ವಯಕಾರ. ಮಾರ್ಚ್‌ ನಲ್ಲಿ ಇಸ್ರೇಲ್‌ ವಾಯ ದಾಳಿಗೆ ಬಲಿಯಾಗಿದ್ದಾನೆ ಎಂಬ ಮಾಹಿತಿ ಇವೆ. ಆದರೆ ಹಮಾಸ್‌ ಮಾತ್ರ ಖಚಿತಪಡಿ ಸಿಲ್ಲ. 2006ರಲ್ಲಿ ಈತನ ಹತ್ಯೆ ಇಸ್ರೇಲ್‌ ಯತ್ನಿಸಿದ್ದು, ಆ ವೇಳೆ ಗಾಯಗೊಂಡಿದ್ದ.

6. ಖಾಲೇದ್‌: ಹಮಾಸ್‌ ಮಾಜಿ ನಾಯಕ
ಗಾಜಾ ಪಟ್ಟಿಯ ಹಮಾಸ್‌ನ ಮಾಜಿ ರಾಜಕೀಯ ಮುಖ್ಯಸ್ಥನಾಗಿದ್ದು, ಸದ್ಯ ಕತಾರ್‌ನಲ್ಲಿ ವಾಸಿಸುತ್ತಿ ದ್ದಾನೆ. ಈಗ ಕತಾರ್‌ನಲ್ಲಿ ಹಮಾಸ್‌ ಸಮು ದಾಯದ ಮುಖ್ಯಸ್ಥ ನಾಗಿದ್ದಾನೆ. 1997ರಲ್ಲಿ ಜೋರ್ಡಾನ್‌ನಲ್ಲಿ ಈತ ವಾಸವಾಗಿದ್ದಾಗ ವಿಷದ ಇಂಜೆಕ್ಷನ್‌ ನೀಡಿ ಇಸ್ರೇಲ್‌ ಸೇನೆಯು ಹತ್ಯೆಗೆ ಯತ್ನಿಸಿತ್ತು. ಬದುಕುಳಿದ ಬಳಿಕ ಕತಾರ್‌ಗೆ ಪರಾರಿಯಾಗಿದ್ದ. ಆ ಬಳಿಕ 2012ರಲ್ಲಿ ಗಾಜಾಗೆ ಮೊದಲ ಬಾರಿ ಭೇಟಿ ನೀಡಿದ್ದನು.

7. ಜಹಾರ್‌: ದಾಳಿಯಲ್ಲಿ ಬದುಕುಳಿದ!
ಹಮಾಸ್‌ನ ಪ್ರಮುಖ ನಾಯಕ. 1988ರಲ್ಲಿ ಈತನನ್ನು ಇಸ್ರೇಲ್‌ ಬಂಧಿಸಿ ಬಳಿಕ 1992ರಲ್ಲಿ ನೋ ಮ್ಯಾನ್ಸ್‌ ಲ್ಯಾಂಡ್‌ಗೆ ಅಟ್ಟಿತ್ತು. ಅಲ್ಲಿ ಒಂದು ವರ್ಷ ಕಳೆದ ಬಳಿಕ ಗಾಜಾಗೆ ವಾಪಸಾಗಿ 2006ರ ಪಾಲೆಸ್ತೀನ್‌ ಚುನಾವಣೆಯಲ್ಲಿ ಜ¿‌ುಗಳಿಸಿದ್ದ. ಬಳಿಕ ಇಸ್ಮಾಯಿಲ್‌ ಹನಿಯೇ ನೇತೃತ್ವದ ಸಂಪುಟದಲ್ಲಿ ವಿದೇಶಾಂಗ ಸಚಿವಾಲಯ ಸೇರಿದ್ದ. 2003ರಲ್ಲಿ ಈತನ ಮನೆ ಮೇಲೆ ಇಸ್ರೇಲ್‌ ಬಾಂಬ್‌ ಹಾಕಿತ್ತು. ಆದರೆ ಈತ ಬಚಾವ್‌ ಆಗಿದ್ದಾನೆ.

8.ತೌಫಿಕ್‌: ಹಮಾಸ್‌ಗೆ ಶಸ್ತ್ರಾಸ್ತ್ರ ತಯಾರಿಕೆ
ಈತ ಹಮಾಸ್‌ಗೆ ಶಸ್ತ್ರಾಸ್ತ್ರ ತಯಾರಿಕೆ ನೇತೃತ್ವ ವಹಿಸಿದ್ದು, 1989ರಲ್ಲಿ ಈತನನ್ನು ಇಸ್ರೇಲ್‌ ಸೇನೆ ಬಂಧಿ ಸಿತ್ತು. ಬಳಿಕ 2011ರಲ್ಲಿ ಕೈದಿಗಳ ವಿನಿಯಮ ಗಳಡಿ ಬಿಡುಗಡೆ ಆಗಿದ್ದ. 2017ರಲ್ಲಿ ಇಸ್ರೇಲ್‌ ಈತನ ಹತ್ಯೆಗೆ ಯತ್ನಿಸಿತ್ತು ಮತ್ತು ಸ್ವಲ್ಪದರಲ್ಲೇ ಪಾರಾಗಿದ್ದ. ಗಾಜಾದಲ್ಲಿ ಇಂಟರ್‌ ಸೆಕ್ಯುರಿಟಿ ಮುಖ್ಯಸ್ಥ ನಾಗಿದ್ದ ಈತ 2021ರಲ್ಲಿ ಚುನಾವಣೆಗೂ ಸ್ಪರ್ಧೆ ಮಾಡಿದ್ದ. ಜೆರುಸಲೆಂ ಹಮಾಸ್‌ ವಶಕ್ಕೆ ಪಡೆಯುವು ದಾಗಿ ಘೋಷಿಸಿದ್ದ.

9.ಸಿನ್ವಾರ್‌ ತಲೆಗೆ 2.50 ಕೋಟಿ ರೂ.!
ಈತ ಯಾಹ್ಯಾ ಸಿನ್ವಾರ್‌ ಸಹೋದರ. ಗಾಜಾ ದಕ್ಷಿಣದ ಹಮಾಸ್‌ ಕಮಾಂಡರ್‌ ಆಗಿದ್ದಾನೆ. ಇಸ್ರೇಲ್‌ ಯೋಧನ ಅಪಹರಣ ಕೇಸ್‌ ಈತನ ಮೇಲಿದೆ. ಈಗಾಗಲೇ ಇಸ್ರೇಲ್‌ನ 6 ಹತ್ಯಾ ದಾಳಿಯಿಂದ ಪಾರಾಗಿರುವ ಈತ, ಖಸಂ ಬ್ರಿಗೇಡ್‌ನ‌ ಪ್ರಮುಖ ಕಮಾಂಡರ್‌ ಆಗಿದ್ದಾನೆ. ಇಸ್ರೇಲ್‌ ಮೇಲಿನ ಅಕ್ಟೋಬರ್‌ 7ರ ದಾಳಿಗೆ ಈತನೇ ಮಾಸ್ಟರ್‌ ಮೈಂಡ್‌ ಎಂದು ನಂಬಲಾಗಿದ್ದು ಈತನ ತಲೆಗೆ 3 ಲಕ್ಷ ಡಾಲರ್‌(2.51 ಕೋಟಿ ರೂ. ಕಟ್ಟಲಾಗಿದೆ.)

ಅ.7ರ ದಾಳಿ ಬಳಿಕ ಹತ್ಯೆಯಾದ ಪ್ರಮುಖರು
ಹಸನ್‌ ನಸ್ರಲ್ಲಾ-ಹೆಜ್ಬುಲ್ಲಾ ಮುಖ್ಯಸ್ಥ, ಇಸ್ಮಾಯಿಲ್‌ ಹನಿಯೇ-ಹಮಾಸ್‌ ರಾಜಕೀಯ ಮುಖ್ಯಸ್ಥ, ಸಯ್ಯದ್‌ ರಜಿ ಮೌಸವಿ- ಐಆರ್‌ಜಿಸಿ (ಇರಾನ್‌ ಆರ್ಮಿ) ಸಲಹೆಗಾರ, ಸಲೇಹ್‌ ಅಲ್‌ ಅರೌರಿ-ಹಮಾಸ್‌ ರಾಜಕೀಯ ಉಪಮುಖ್ಯಸ್ಥ, ವಿಸಮ್‌ ಅಲ್‌-ತವಿಲ್‌-ಹೆಜ್ಬುಲ್ಲಾ ಕಮಾಂಡರ್‌, ಇಸ್ಮಾಯಿಲ್‌ ಅಲ್‌-ಜಿನ್‌-ಹೆಜ್ಬುಲ್ಲಾ ಕಮಾಂಡರ್‌, ಮಹಮದ್‌ ಹದಿ ಹಾಜಿ ರಹಿಮಿ-ಐಆರ್‌ಜಿಸಿ ಕಮಾಂಡರ್‌, ಮಹಮದ್‌ ರೆಜಾ ಝೆಹದಿ-ಐಆರ್‌ಜಿಸಿ ಕಮಾಂಡರ್‌, ಅಲಿ ಅಹಮದ್‌ ಹುಸೈನ್‌-ಹೆಜ್ಬುಲ್ಲಾ ಕಮಾಂಡರ್‌, ಫೌದ್‌ ಶೂಕರ್‌-ಹೆಜ್ಬುಲ್ಲಾ ಕಮಾಂಡರ್‌ (ನಸ್ರುಲ್ಲಾ ಬಂಟ), ಇಬ್ರಾಹಿಂ ಮುಹಮದ್‌ ಖಬಿಸಿ – ಹೆಜ್ಬುಲ್ಲಾ ಕ್ಷಿಪಣಿ, ರಾಕೆಟ್‌ ಮುಖ್ಯಸ್ಥ, ಬ್ರಾಹಿಂ ಅಖೀಲ್‌ – ಹೆಜ್ಬುಲ್ಲಾ ಆಪರೇಶನ್‌ ಹೆಡ್‌, ನಬೀಲ್‌ ಕೌಕ್‌ – ಹೆಜ್ಬುಲ್ಲಾ ಸೆಂಟ್ರಲ್‌ ಕೌನ್ಸಿಲ್‌ ಉಪಮುಖ್ಯಸ್ಥ.

6 ರಾಷ್ಟ್ರಗಳ ಮೇಲೆ ದಾಳಿ: ಇಸ್ರೇಲ್‌ ತಾಕತ್ತು!
ಮಧ್ಯಪ್ರಾಚ್ಯದಲ್ಲಿ ಏಕಾಂಗಿಯಾಗಿ ನಿಂತಿರುವ ಇಸ್ರೇಲ್‌, ಗಾಜಾ ಪಟ್ಟಿ, ಪ್ಯಾಲೆಸ್ತೀನ್‌ ವೆಸ್ಟ್‌ ಬ್ಯಾಂಕ್‌ ಜತೆಗೆ ಲೆಬನಾನ್‌, ಸಿರಿಯಾ, ಇರಾನ್‌, ಇರಾಕ್‌, ಯೆಮನ್‌ ಮತ್ತು ಈಜಿಪ್ಟ್ ಮೇಲೆ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ತನ್ನ ಸೇನಾ ಸಾಮರ್ಥ್ಯವನ್ನು ತೋರುತ್ತಿದೆ. ಉತ್ತರ ಗಡಿಯಲ್ಲಿ ತಂಟೆ ತೆಗೆಯುತ್ತಿರುವ ಲೆಬನಾನ್‌ನ ಇರಾನ್‌ ಬೆಂಬಲಿತ ಉಗ್ರ ಸಂಘಟನೆ ಹೆಜ್ಬುಲ್ಲಾಗೆ ಸೇರಿದ ಸ್ಥಳಗಳ ಮೇಲೆ ನಿತ್ಯವೂ ಬಾಂಬ್‌ ದಾಳಿ ನಡೆಸುತ್ತಿದೆ. ಇನ್ನು ಸಿರಿಯಾದಲ್ಲಿರುವ ಇರಾನ್‌ ಕಮಾಂಡರ್‌ಗಳು ಸತತವಾಗಿ ಕೊಲ್ಲುತ್ತಿದ್ದು, ಸದ್ಯಕ್ಕೆ ಎಲ್ಲ ಹಿರಿಯ ಅಧಿಕಾರಿಗಳನ್ನು ಇರಾನ್‌ ವಾಪಸ್‌ ಕರೆಸಿಕೊಂಡಿದೆ. ಇಸ್ರೇಲ್‌ ಮೇಲೆ ಡ್ರೋನ್‌ ದಾಳಿ ಮಾಡಿದ್ದ ಯೆಮನ್‌ ಹೌತಿ ಉಗ್ರರಿಗೂ ಸರಿಯಾದ ಪಾಠ ಕಲಿಸಿದೆ. ಇರಾಕ್‌ನಲ್ಲಿರುವ ಇರಾನ್‌ ಬೆಂಬಲಿತ ಪಾಪ್ಯುಲರ್‌ ಮೊಬಲೈಸೇಶನ್‌ ಫೋರ್ಸ್‌ (ಪಿಎಂಎಫ್) ಮೇಲೆ ಕೂಡ ದಾಳಿ ನಡೆಸುತ್ತಿದೆ.

ಹಸನ್‌ ನಸ್ರಲ್ಲಾ ಹತ್ಯೆಯಾಗಿದ್ದೇಕೆ?
ಬಹುಕಾಲ ಲೆಬನಾನ್‌ ಶಿಯಾ ಇಸ್ಲಾಮಿಕ್‌ ರಾಜಕೀಯ ಪಕ್ಷ ಮತ್ತು ಉಗ್ರ ಸಂಘಟನೆ ಹೆಜ್ಬುಲ್ಲಾದ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಈತ, ಪದೇಪದೆ ತನ್ನ ಸಂಘಟನೆ ಮೂಲಕ ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಉತ್ತರ ಗಡಿಯಲ್ಲಿ 60 ಸಾವಿರಕ್ಕೂ ಅಧಿಕ ಇಸ್ರೇಲಿಗರು ಮನೆ-ಮಠ ತೊರೆದಿದ್ದಾರೆ. ಇವರನ್ನು ವಾಪಸ್‌ ಕರೆತರುವ ಸುರಕ್ಷಿತ ವಾತಾವರಣ ನಿರ್ಮಿಸದೆ ನೆತನ್ಯಾಹು ಸರಕಾರಕ್ಕೆ ನೆಮ್ಮದಿ ಇರಲಿಲ್ಲ. ಇಸ್ರೇಲ್‌ ಹತ್ಯೆ ಬೆದರಿಕೆ ಹಿನ್ನೆಲೆ ಯಲ್ಲಿ ನಸ್ರಲ್ಲಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಹಲವು ವರ್ಷಗಳೇ ಕಳೆದು ಹೋಗಿತ್ತು. ಬಂಕರ್‌ನಲ್ಲಿ ಆತ ವಾಸವಿದ್ದು, ಪ್ರಮುಖ ಸಂಗತಿಗಳ ವೇಳೆ ಆತನ ವೀಡಿಯೋ ಭಾಷಣವನ್ನು ವೇದಿಕೆಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಕಳೆದ ಮೇಯಲ್ಲಿ ಈತನ ತಾಯಿ ಮೃತರಾದರೂ ಈತ ಕಾಣಿಸಿಕೊಂಡಿರಲಿಲ್ಲ. ಈತನ ಹಿರಿಯ ಪುತ್ರ ಇಸ್ರೇಲ್‌ ದಾಳಿಗೆ ಸಾವನ್ನಪ್ಪಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next