Advertisement
ಆಲೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ, ಪಂಗಡ ಹಿತರಕ್ಷಣಾ ಸಮಿತಿ ತ್ತೈಮಾಸಿಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇ.25ರ ಅನುದಾನವನ್ನು ಕೇವಲ ಸೀಮಿತ ಕೆಲಸಗಳಿಗೆ ಮಾತ್ರ ವಿನಿಯೋಗಿಸದೇ, ಗ್ರಾಮೀಣ ಪ್ರದೇಶ ಗಳಲ್ಲಿರುವ ಗುಡಿ ಕೈಗಾರಿಕೆ ಪ್ರೋತ್ಸಾಹಿಸಲು ಉನ್ನತ ಶಿಕ್ಷಣ ಪಡೆಯವವರಿಗೆ, ಕ್ರೀಡಾಪಟುಗಳಿಗೆ ಬಳಸ ಬೇಕು. ಜೊತೆಗೆ ಶವ ಸಂಸ್ಕಾರಕ್ಕೆ ಕಂದಾಯ ಇಲಾಖೆ, ಗ್ರಾಪಂನಲ್ಲಿ ಹಣ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
Related Articles
Advertisement
ವರದಿ ಪಡೆಯಲಾಗಿದೆ: ತಾಲೂಕಾದ್ಯಂತ ಮಂಜೂ ರಾಗಿರುವ ಶೌಚಾಲಯಗಳ ಬಗ್ಗೆ ವರದಿ ಪಡೆಯಲಾಗಿದೆ. ಹಲವು ಫಲಾನುಭಗಳಿಗೆ ಮಂಜೂರಾಗಿರುವ ಮನೆ ಈವರೆಗೂ ನಿರ್ಮಾಣ ಮಾಡಿಲ್ಲ. ಅಂತಹವರು ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ತಾಪಂ ಇಒ ಚಂದ್ರಶೇಖರ್ ಮಾಹಿತಿ ನೀಡಿದರು.
ಹೊಸ ಪಡಿತರ ಕಾರ್ಡು ಪಡೆಯಲು ಫಲಾನು ಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮನೆಗೆ ಪಡಿತರ ಚೀಟಿ ತಲುಪಿಸಲಾಗುವುದು ಎಂದು ಆಹಾರ ನಿರೀಕ್ಷಕಿ ಬಿ.ಸಿ.ಚಂದ್ರಿಕಾ ತಿಳಿಸಿದರು.
ಟ್ಯಾಂಕರ್ ಖರೀದಿಗೆ ಅರ್ಜಿ: ನರೇಗಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಫಲಾನುಭವಿಗಳಿಗೆ ಅರ್ಜಿ ವಿತರಣೆಯನ್ನು ಈ ಕ್ಷಣದಿಂದಲೇ ಆರಂಭಿಸಲಾಗಿದೆ. ಇದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು. 2018-19ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ನೀರಿನ ಟ್ಯಾಂಕರ್ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ತಿಳಿಸಿದರು.
ಕೃಷಿ ಹೊಂಡ: ಫಲಾನುಭವಿಗಳು ಸೂಚಿಸಿದ ಜಾಗದಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗು ವುದು ಎಂದು ಕೃಷಿ ಇಲಾಖೆ ಸಹಾಯಕ ನಿದೇಶಕಿ ಶೈಲಜಾ ತಿಳಿಸಿದರು.
ಸಮರ್ಪಕವಾಗಿ ಬಳಸಿಕೊಳ್ಳಿ: ಸರಕಾರಿ ಇಲಾಖೆಗಳಿಂದ ಪರಿಶಿಷ್ಟ ಜಾತಿ, ಪಂಗಡದವರಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ದಲಿತ ಮುಖಂಡ ದೇವರಾಜು ಮನವಿ ಮಾಡಿಕೊಂಡರು. ಸಭೆಯಲ್ಲಿ ತಹಶೀಲ್ದಾರ್ ಡಾ. ಎನ್.ಕೆ.ಶಾರ ದಾಂಬ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ವಿನಯ್ ಉಪಸ್ಥಿತರಿದ್ದರು.