Advertisement
ಈ ಆ್ಯಪ್‌ನ್ನು 17 ದಿನಗಳಲ್ಲಿ 37,000ಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ತನ್ನ ಗ್ರಾಹಕರಿಗೆ ಇನ್ನಷ್ಟು ಹೆಚ್ಚುವರಿ ಸೇವೆಗಳನ್ನು ನೀಡುವ ಉದ್ದೇಶ ಹೊಂದಿರುವ ಬೆಸ್ಕಾಂ, ಫೇಸ್‌ಬುಕ್, ಟ್ವಿಟರ್‌ನಲ್ಲಿ ಸಲ್ಲಿಕೆಯಾಗುವ ದೂರುಗಳಿಗೂ “ಸೆಂಟಿಮೆಂಟ್ ಅನಾಲಿಸಿಸ್’ ಮೂಲಕ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆಸಿದೆ.
Related Articles
Advertisement
ಸೆಂಟಿಮೆಂಟ್ ಅನಾಲಿಸಿಸ್: ಬೆಸ್ಕಾಂ ಸೇವೆಗೆ ಸಂಬಂಧಪಟ್ಟಂತೆ ದೂರು ಸಲ್ಲಿಸಲು ಸಹಾಯವಾಣಿ, ಮೊಬೈಲ್ ಆ್ಯಪ್ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ದೂರುಗಳು ಸಲ್ಲಿಕೆಯಾಗುತ್ತವೆ. ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಸಾಕಷ್ಟು ಮಂದಿ ಸಮಸ್ಯೆ ಉಲ್ಲೇಖೀಸುವುದರಿಂದ ಸಂಸ್ಥೆಯ ಕಾರ್ಯ ನಿರ್ವಹಣೆ ಬಗ್ಗೆಯೂ ಕೆಟ್ಟ ಸಂದೇಶ ರವಾನೆಯಾಗಲಿದೆ. ಇದನ್ನು ತಡೆಗಟ್ಟಲು ಫೇಸ್‌ಬುಕ್, ಟ್ವಿಟರ್‌ನಲ್ಲಿ ಸಲ್ಲಿಕೆಯಾಗುವ ದೂರುಗಳನ್ನು “ಸೆಂಟಿಮೆಂಟ್ ಅನಾಲಿಸಿಸ್’ನಡಿ ಪರಿಶೀಲಿಸಿ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನೂ ಸಂಸ್ಥೆ ರೂಪಿಸುತ್ತಿದೆ.
ಆನ್‌ಲೈನ್ ಸೇವಾ ಶುಲ್ಕ ವಿನಾಯ್ತಿ?: ಗ್ರಾಹಕರು ಮೊಬೈಲ್ ಆ್ಯಪ್ ಮೂಲಕವೇ ಆನ್‌ಲೈನ್‌ನಲ್ಲಿ ಬೆಸ್ಕಾಂ ಬಿಲ್ ಪಾವತಿಸಿದಾಗ ಬ್ಯಾಂಕ್‌ಗಳು ಇಂತಿಷ್ಟು ಆನ್‌ಲೈನ್ ಸೇವಾ ಶುಲ್ಕ ವಿಧಿಸುತ್ತವೆ. ಹಾಗಾಗಿ ಆನ್‌ಲೈನ್ ಸೇವಾ ಶುಲ್ಕ ವಿನಾಯ್ತಿ ನೀಡುವ ಸಂಬಂಧ ಪ್ರತಿಷ್ಠಿತ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಲು ಬೆಸ್ಕಾಂ ಚಿಂತನೆ ನಡೆಸಿದೆ. ಮಾತುಕತೆಗೂ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
* ಎಂ. ಕೀರ್ತಿಪ್ರಸಾದ್