Advertisement

ಆಸೀಸ್‌ ಮಂಡಳಿ ಅನುಮತಿ ನೀಡಿದರೆ ಐಪಿಎಲ್‌ಗೆ: ಫಿಂಚ್‌

03:58 AM Jul 09, 2020 | Sriram |

ಮೆಲ್ಬರ್ನ್: ಕ್ರಿಕೆಟ್‌ ಆಸ್ಟ್ರೇಲಿಯ ಅನುಮತಿ ನೀಡಿದರಷ್ಟೇ ಐಪಿಎಲ್‌ನಲ್ಲಿ ಆಡಬಹುದಾಗಿದೆ ಎಂದು ಕಾಂಗರೂ ಏಕದಿನ ತಂಡದ ಕಪ್ತಾನ ಆರನ್‌ ಫಿಂಚ್‌ ಹೇಳಿದ್ದಾರೆ.

Advertisement

“ನಾವೆಲ್ಲ ಈಗ ಇಕ್ಕಟ್ಟಿನಲ್ಲಿದ್ದೇವೆ. ಒಂದೆಡೆ ಐಪಿಎಲ್‌ ಒಪ್ಪಂದ, ಇನ್ನೊಂದೆಡೆ ದೇಶಿ ಕ್ರಿಕೆಟ್‌ನಲ್ಲಿ ವಿಕ್ಟೋರಿಯಾ ತಂಡದೊಂದಿಗಿನ ಒಡಂಬಡಿಕೆ. ಐಪಿಎಲ್‌ನಲ್ಲಿ ಭಾಗವಹಿಸುವುದಾದರೆ ಆಗ ದೇಶಿ ಕ್ರಿಕೆಟ್‌ ಪಂದ್ಯಾವಳಿಯ ಮೊದಲರ್ಧವನ್ನು ಕೈಬಿಡಬೇಕಾಗುತ್ತದೆ. ಹಾಗೆಯೇ ಐಪಿಎಲ್‌ನಲ್ಲಿ ಆಡಲು ಕ್ರಿಕೆಟ್‌ ಆಸ್ಟ್ರೇಲಿಯದ ನಿರಾಕ್ಷೇಪಣ ಪತ್ರವೂ ಮುಖ್ಯವಾಗುತ್ತದೆ’ ಎಂದು ಆರನ್‌ ಫಿಂಚ್‌ ಹೇಳಿದರು.

“ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲ. ಈ ಹಂತದಲ್ಲಿ ನಾವೆಲ್ಲ ಟಿ20 ವಿಶ್ವಕಪ್‌ ನಡೆಸುವ ಯೋಜನೆ ರೂಪಿಸುತ್ತಿದ್ದೇವೆ. ಇದರ ಅಧಿಕೃತ ಪ್ರಕಟನೆ ಘೋಷಣೆಯಾಗದ ಹೊರತು ನಾವು ಏನೂ ಮಾಡುವಂತಿಲ್ಲ’ ಎಂಬುದಾಗಿ ಫಿಂಚ್‌ ಹೇಳಿದರು. ಕಳೆದ ಹರಾಜಿನಲ್ಲಿ ಆರನ್‌ ಫಿಂಚ್‌ ಅವರನ್ನು 4.4 ಕೋ.ರೂ.ಗಳ ಮೊತ್ತಕ್ಕೆ ಆರ್‌ಸಿಬಿ ಬಲೆ ಬೀಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next