Advertisement

ಹತ್ಯೆ ಮುಂದುವರಿದರೆ ಸತ್ಯ ಹೇಳುವವರೇ ಇರರು

11:42 AM Sep 07, 2017 | |

ಯಲಹಂಕ: ವಿಚಾರವಂತರ ಹತ್ಯೆ ಸರಣೆ ಹೀಗೆ ಮುಂದುವರಿದರೆ ಸತ್ಯ ಹೇಳುವವರ ಸಂಖ್ಯೆ ಸಮಾಜದಲ್ಲಿ ಕಡಿಮೆಯಾಗುವ ಆತಂಕವಿದೆ. ಸಮಾಜವನ್ನು ಫ್ಯಾಸಿಸಂ ಕಡೆಗೆ ತಿರುಗಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ಅದನ್ನು ತಡೆಯಲು ಕಾನೂನು ಬಲಿಷ್ಠವಾಗಬೇಕು ಎಂದು ಯುವ ಚಿಂತಕ ಡಾ. ಕೆ. ಟಿ. ವಿಜಯಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.
 
ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗೌರಿ ಲಂಕೇಶ್‌ ಶ್ರದ್ದಾಂಜಲಿಯಲ್ಲಿ ಮಾತನಾಡಿದ ಅವರು “ಕಳೆದ 3 ವರ್ಷಗಳಲ್ಲಿ ಮಹಾರಾಷ್ಟ್ರದ ಪನ್ಸಾರೆ, ದಾಬೋಲ್ಕರ್‌, ಕರ್ನಾಟಕದ ಡಾ. ಕಲ್ಪುರ್ಗಿ ನಂತರ ಮೂಲಭೂತವಾದಿಗಳಿಗೆ ಬಲಿಯಾದ ನಾಲ್ಕನೆಯ ಜೀವ ಗೌರಿ.

Advertisement

ಈ ಹತ್ಯೆ ಸರಣೆ ಹೀಗೆ ಮುಂದುವರೆದರೆ ಸತ್ಯ ಹೇಳುವವರ ಸಂಖ್ಯೆ ಸಮಾಜದಲ್ಲಿ ಕಡಿಮೆಯಾಗಲಿದೆ. ಇದರ ವಿರುದ್ಧ ಜನಾಂದೋಲನಗಳಾಗಬೇಕು. ರಾಜ್ಯದಲ್ಲಿ ಇನ್ನೂ ಅನೇಕ ವಿಚಾರವಾಧಿಗಳಿಗೆ ಜೀವ ಬೆದರಿಕೆಯಿದ್ದು ಅವರಿಗೆ ಸರ್ಕಾರ ರಕ್ಷಣೆ ನೀಡಬೇಕು,’ ಎಂದು ಒತ್ತಾಯಿಸಿದರು. ಪ್ರಾಧ್ಯಾಪಕ ಡಾ ಜೆ. ಬಾಲಕೃಷ್ಣ ಮಾತನಾಡಿ, “ಸಮಾಜದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ನಡೆದರೆ ಸಮಸಮಾಜಕ್ಕೆ ಹಾನಿಕರ. ಅದಕ್ಕಾಗಿ ಸರ್ಕಾರವು ಪ್ರಜಾಪ್ರಭುತ್ವ ಉಳಿಸುವ ಹಾದಿಯಲ್ಲಿ ಕಾಯೊನ್ಮುಖವಾಗಬೇಕು. ಬುದ್ಧ ಧರ್ಮ, ಬಸವಣ್ಣ, ಗಾಂಧಿಯನ್ನು ಕೊಂದವರು ಗೌರಿ ಲಂಕೇಶರನ್ನು ಕೊಂದರು,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next