Advertisement

ವಿದ್ಯಾರ್ಥಿಗಳು ಬಲಿಷ್ಠರಾದರೆ ದೇಶ ಸಮೃದ್ಧ 

09:58 AM Dec 10, 2017 | Team Udayavani |

ಮಹಾನಗರ: ದೇಶ ಸಮೃದ್ಧವಾಗಬೇಕಾದರೆ ತರಗತಿಯಲ್ಲಿ ಕಲಿಯುವ ಮತ್ತು ಮೈದಾನದಲ್ಲಿ ಆಡುವ ವಿದ್ಯಾರ್ಥಿಗಳು ಬಲಿಷ್ಠರಾಗಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಹೇಳಿದರು.

Advertisement

ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣ ಸಂಪನ್ಮೂಲ ಕೇಂದ್ರ, ಚೈಲ್ಡ್‌ಲೈನ್‌ ನೋಡೆಲ್‌ ಏಜೆನ್ಸಿ, ದಕ್ಷಿಣ ಕನ್ನಡ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಪಡಿ ಮಂಗಳೂರು ಹಾಗೂ ಚೈಲ್ಡ್‌ಲೈನ್‌ 1098 ಆಶ್ರಯದಲ್ಲಿ ಮಕ್ಕಳ ಮಾಸೋತ್ಸವ ಅಂಗವಾಗಿ ನಡೆದ ಸಚಿವರು- ಶಾಸಕರೊಂದಿಗೆ ಮಕ್ಕಳ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರೌಢಶಾಲೆಗಳ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಸಚಿವ ಯು.ಟಿ. ಖಾದರ್‌ ಬಳಿ ವಿದ್ಯಾರ್ಥಿಗಳು ಅನುದಾ
ನಿತ ಶಾಲೆ, ವಿದ್ಯಾರ್ಥಿಗಳಿಗೂ ಶೂ ಮತ್ತು ಸಮವಸ್ತ್ರ, ಸರಕಾರಿ ಶಾಲೆ ಮಕ್ಕಳಿಗೂ ಸಿಬಿಎಸ್‌ಇ ಮಾದರಿ ಪಠ್ಯ,
ಕನ್ನಡ ಶಾಲೆಗಳಿಗೆ ಮೂಲಸೌಲಭ್ಯ, ಕಾಟಿಪಳ್ಳ ಶಾಲೆ ಬಳಿ ಗುಟ್ಕಾ, ಗಾಂಜಾ ವ್ಯವಹಾರ ನಿಯಂತ್ರಣ, ಮಧ್ಯಾಹ್ನಕ್ಕೆ
ಕುಚ್ಚಲಕ್ಕಿ ಊಟ ಪೂರೈಕೆ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾ
ಮಯ್ಯ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಎ.ಉಸ್ಮಾನ್‌ ಮಾತನಾಡಿದರು.

ಮೂಡಬಿದಿರೆ ಎಸ್‌ಐ ದೇಜಪ್ಪ, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧಿಕಾರಿ ಜೇಮ್ಸ್‌ ಕುಟಿನ್ಹೊ, ರಾಜ್ಯ ಎಸ್‌ಡಿಎಂಸಿ ಸದಸ್ಯ ಎಸ್‌.ಎಂ.ಅಬೂಬಕರ್‌, ರೇಮಂಡ್‌ ತಾಕೊಡೆ, ಜಿಲ್ಲಾ ಮಾಸೋತ್ಸವ ಸಮಿತಿ ಅಧ್ಯಕ್ಷ ಸದಸ್ಯ ವಿಕ್ರಂ ಕದ್ರಿ, ಉಳ್ಳಾಲ ವಲಯ ಫೋಟೊಗ್ರಾಫರ್‌ಗಳ ಸಂಘದ ಕಾರ್ಯದರ್ಶಿ ರಾಜೇಶ್‌ ಉಳ್ಳಾಲ, ಶಿಕ್ಷಣ ಒಕ್ಕೂಟದ ಅಧ್ಯಕ್ಷೆ ಪ್ರೇಮಿ ಫರ್ನಾಂಡಿಸ್‌ ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮಕ್ಕೆ ಮುನ್ನ ಮಣ್ಣಗುಡ್ಡೆ ಪ್ರೌಢಶಾಲೆ ಶಾಲೆ ವಿದ್ಯಾರ್ಥಿಗಳು ‘ಅಮಾಯಕನ ಹಳ್ಳಿಯ ಅಮಾಯ ಕರು’
ಎಂಬ ಕಿರು ನಾಟಕ ಪ್ರದರ್ಶಿಸಿದರು. ಕಮಲಾ ಗೌಡ ಸ್ವಾಗತಿಸಿದರು. ಅನಂತರಾಮ ಕೇರಳ ಪ್ರಾಸ್ತಾವಿಕ ಮಾತನಾಡಿ ದರು. ಯೋಗೀಶ್‌ ಮಲ್ಲಿಗೆಮಾಡು ನಿರೂಪಿಸಿದರು.

ಗುಣಮಟ್ಟದ ಶಿಕ್ಷಣ ಅಗತ್ಯ 
ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ವಿದ್ಯಾರ್ಥಿ ಗಳು ಅಂಕಗಳನ್ನು ಪಡೆಯುವ ಜತೆಗೆ, ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಪಡೆದು, ಸಂಸ್ಕಾರ, ಸಂಸ್ಕೃತಿ ಮೈಗೂಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂದರು.

ಬಲಿಷ್ಠರಾಗಲಿ
ಶಾಸಕರು, ಸಂಸದರು, ಸಚಿವರು ಉನ್ನತ ಹುದ್ದೆಗೆ ಏರಿದರೆ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಆದರೆ ವಿದ್ಯಾರ್ಥಿಗಳು ಬಲಿಷ್ಠರಾದರೆ ಮುಂದೆ ಅವರು ದೇಶದ ಸಂಪತ್ತಾಗುತ್ತಾರೆ. ಮಕ್ಕಳು ದೊಡ್ಡವರಾಗಿ ತಮ್ಮ ಹೆತ್ತವರಿಗೆ ಆಸ್ತಿಯಾದರೆ ಸಾಲದು. ಸಮಾಜ ಮತ್ತು ದೇಶದ ಆಸ್ತಿಯಾಗಬೇಕು. ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದರೆ ಸಮಾಜದ ಬಹುತೇಕ ಸಮಸ್ಯೆಗಳು ನಿರ್ನಾಮವಾಗಲಿದೆ.
ಯು.ಟಿ.ಖಾದರ್‌
   ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next