ಒಂದು ಮತ್ತು ಎರಡನೇ ಸುತ್ತಿನ ದಾಖಲಾತಿಯ ಎಲ್ಲ ಮಾಹಿತಿಯನ್ನು ಶಾಲಾಡಳಿತ ಮಂಡಳಿ ನಿರ್ದಿಷ್ಟ ತಂತ್ರಾಂಶದ ಮೂಲಕ ಅಪ್‌ಲೋಡ್ ಮಾಡಿದೆ. ಆದರೆ, ಮೂರು ಮತ್ತು ನಾಲ್ಕನೇ ಸುತ್ತಿನ ಸೀಟು ಹಂಚಿಕೆಯ ಮಾಹಿತಿಯನ್ನು
ಪೂರ್ಣಪ್ರಮಾಣದಲ್ಲಿ ಇನ್ನೂ ಅಪ್‌ಲೋಡ್ ಮಾಡಿಲ್ಲ. ಹೀಗಾಗಿ ಸುಮಾರು 4,000 ಮಕ್ಕಳ ಮಾಹಿತಿಯೇ ಶಿಕ್ಷಣ ಇಲಾಖೆಗೆ ಸಿಕ್ಕಿಲ್ಲ. ಹೀಗಾಗಿ, ಮಾಹಿತಿ ನೀಡದ ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿಸದೆ “ಶಿಕ್ಷೆ’ ನೀಡಲು ತೀರ್ಮಾನಿಸಿದೆ.
Advertisement
ಆನ್‌ಲೈನ್ ಲಾಟರಿ ಮೂಲಕ ನಾಲ್ಕು ಸುತ್ತಿನ ಸೀಟು ಹಂಚಿಕೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳ ವಿವರವೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿದೆ. ಲಾಟರಿ ಮೂಲಕ ಸೀಟು ಪಡೆದ ಮಕ್ಕಳ ಪಾಲಕರು ಸಂಬಂಧಪಟ್ಟ ಶಾಲೆಗೆಮಗುವನ್ನು ಸೇರಿಸಿದ ತಕ್ಷಣವೇ ಶಾಲಾಡಳಿತ ಮಂಡಳಿ ಅದನ್ನು ಸಾಫ್ಟ್ವೇರ್‌ನಲ್ಲಿ ಅಪ್ ಲೋಡ್ ಮಾಡಬೇಕು. ಒಂದು ವೇಳೆ ಅಪ್ ಲೋಡ್ ಮಾಡದಿದ್ದರೆ ಮಗು ಶಾಲೆಗೆ ದಾಖಲಾಗಿಲ್ಲವೆಂದು ಪರಿಗಣಿಸಲಾಗುತ್ತದೆ. ಮಗು ಶಾಲೆಗೆ ದಾಖಲಾಗಿಯೂ ಅಪ್‌ಲೋಡ್ ಮಾಡದೇ ಇರುವುದು ಕಂಡಬಂದರೆ, ಅಂತಹ ಶಾಲಾ ಆಡಳಿತ ಮಂಡಳಿಗೆ ಆರ್‌ಟಿಇ ಶುಲ್ಕ ಮರುಪಾವತಿಸುದಿಲ್ಲ.
ನಾಲ್ಕನೇ ಸುತ್ತಿನಲ್ಲಿ ಸುಮಾರು 10 ಸಾವಿರ ಸೀಟು ಭರ್ತಿಯಾಗಿದೆ. ಕೆಲವೊಂದು ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರೇ ಉತ್ಸಾಹ ತೋರಿಸದಿರುವುದರಿಂದ ನಾಲ್ಕು ಸುತ್ತಿನ ಬಳಿಕವೂ ಸಾವಿರಾರು ಸೀಟು ಉಳಿದಿವೆ. ಪೋಷಕರಿಂದ ಗೊಂದಲ: ೆಂಗಳೂರು ಸೇರಿ ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಕೆಲ ಪಾಲಕರು ಎರಡನೇ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ರದ್ದು ಮಾಡಿ, ಮೂರನೇ ಸುತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮೂರನೇ ಸುತ್ತಿನಲ್ಲಿ ಸೀಟು ಸಿಕ್ಕಿದೆ. ಆದರೆ, ಎರಡನೇ ಸುತ್ತಿನಲ್ಲಿ ಸೀಟು ರದ್ದಾಗಿರುವ ಬಗ್ಗೆ ಶಾಲಾಡಳಿತ ಮಂಡಳಿ ಇಲಾಖೆಗೆ ಮಾಹಿತಿ
ನೀಡಿಲ್ಲ. ಇದೇ ರೀತಿಯ ಯಡವಟ್ಟುಗಳು 3ನೇ ಸುತ್ತಿನಲ್ಲೂ ನಡೆದಿವೆ. ಉತ್ತಮ ಶಾಲೆಯಲ್ಲಿ ಸೀಟು ಸಿಗಬೇಕೆಂಬ ಪೋಷಕರ ಬಯಕೆ ಇಲಾಖೆಯಲ್ಲಿ ಗೊಂದಲ ಸೃಷ್ಟಿಸಿದೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಕೆಲ ಶಾಲಾಡಳಿತ ಮಂಡಳಿ ಹೆಚ್ಚುವರಿ ಸೀಟಿನ ಮಾಹಿತಿಯನ್ನೇ ಇಲಾಖೆಗೆ ನೀಡಿಲ್ಲ ಎನ್ನಲಾಗಿದೆ.