Advertisement

ಕನಸಿನಲ್ಲಿ ಮಳೆ ಬಂದರೆ ಶುಭ

06:00 AM Sep 21, 2018 | |

ಕನಸಿನ ಸಾಮ್ರಾಜ್ಯದಲ್ಲಿ ಮಳೆಗೆ ವಿಶಿಷ್ಟ ಸ್ಥಾನವಿದೆ. ಕನಸಿನಲ್ಲಿ ಮಳೆಯನ್ನು ಕಂಡರೆ ಅದು ಕಾರ್ಯಸಿದ್ಧಿಯ ಸೂಚಕವಾಗಿರುತ್ತದೆ. ಈ ಕುರಿತು ಕಾರ್ಲ್ ಯೂಂಗ್‌ ಅವರು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಕುತೂಹಲಕಾರಿ ಅಂಶಗಳನ್ನು ಶ್ರುತಪಡಿಸಿದ್ದಾರೆ. ಮಳೆ ಬುವಿಗೆ ಶುದ್ಧ ನೀರನ್ನು ನೀಡುವ ಒಂದು ಮುಖ್ಯ ಜಲದ ಮೂಲ. ನೀರಿಲ್ಲದೆ ಜೀವನವಿಲ್ಲ. ಮಳೆಯ ನೀರು ಅಮೃತೋಪಮ. ಅಂತೆಯೇ ಇದು ಇಳೆಯ ಕೊಳೆಯನ್ನೆಲ್ಲ ತೊಳೆಯುವುದೂ ದಿಟ!

Advertisement

ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಅಲ್ಲದೆ ಚಿಂತೆಯ, ಸಮಸ್ಯೆಗಳ ನಿವಾರಣೆಯ ಸೂಚಕ. ಮಳೆ ಬಂದು ಹೇಗೆ ಬಿಸಿಲಿನ ಧಗೆಯಲ್ಲಿ ಬೆಂದ ಬುವಿಯಲ್ಲಿ ತಂಪು, ತಂಗಾಳಿ ತರುವಂತೆ, ಮರಗಿಡ ಗಳಲ್ಲಿ ಹಸಿರೊಡೆಯುವಂತೆ, ಇಡೀ ಪ್ರಕೃತಿ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೋ ಅದೇ ರೀತಿಯಲ್ಲಿ ಕನಸಿನಲ್ಲಿ ಮಳೆಯನ್ನು ಕಂಡಾಗ ಅದು ಋಣಾತ್ಮಕ ಸಂಗತಿಯ ನಿವಾರಣೆಯನ್ನೂ , ಸಮಸ್ಯೆಗೆ ಚಿಂತೆಗೆ ಪರಿಹಾರವನ್ನೂ ಸೂಚಿಸುವಂಥದ್ದಾಗಿದೆ.

ಸುಪ್ತಪ್ರಜ್ಞೆಯಲ್ಲಿ ಅಡಗಿರುವ ಭಾವನೆಗಳು, ಭೀತಿ, ಆತಂಕ, ಅಸಂತೋಷ ಮೊದಲಾದ ಭಾವಗಳ ಅಭಿವ್ಯಕ್ತಿಯಾಗಿಯೂ ಕನಸು ಕಾಣಿಸಿಕೊಳ್ಳುತ್ತದೆ.
ಮಳೆಯ ಕನಸು ಅಥವಾ ಕನಸಿನಲ್ಲಿ ಮಳೆಯನ್ನು ಕಾಣುವುದೆಂದರೆ ಋಣಾತ್ಮಕವಾದ ಇಂತಹ ಋಣಾತ್ಮಕ ಭಾವಗಳನ್ನು ಮೀರಿ, ಸುಪ್ತಪ್ರಜ್ಞೆಯಲ್ಲಿ ಧನಾತ್ಮಕ ಯೋಚನೆ, ಯೋಜನೆ, ಆನಂದ ಲಹರಿ ಕಾಣಿಸಿಕೊಳ್ಳುವುದೇ ಆಗಿದೆ. ಮಳೆಯಂತಹ ಹಲವು ಧನಾತ್ಮಕ ಅಂಶಗಳುಳ್ಳ ಕನಸುಗಳು ಪ್ರಜ್ಞೆಯು ವಿಕಸಿತವಾದುದನ್ನು ಸೂಚಿಸುವ ಸಾಂಕೇತಿಕ ತಣ್ತೀಗಳನ್ನು ಹೊಂದಿವೆ.

ಹೀಗೆ ಮಳೆ, ಮಳೆ ಮತ್ತು ಗುಡುಗು ಮಿಂಚು, ಮಳೆ ಮತ್ತು ರಭಸದ ಗಾಳಿ ಇವೇ ಮೊದಲಾದವುಗಳ ಕನಸಿನ ಅಭಿವ್ಯಕ್ತತೆಯ ಕುರಿತು ಕಾರ್ಲ್ ಯೂಂಗ್‌ ಅಧ್ಯಯನ ಮಾಡಿದಂತೆ, ತದನಂತರ ಕ್ರಿಶ್ಚಿಯಾನಾ ಸ್ಪಾನಿಯಸ್‌ ಅಧ್ಯಯನ ಮಾಡಿ ಈ ಕುರಿತು ಮಾನವನ ಮನಸ್ಸಿಗೆ ಚಿಕಿತ್ಸಕವಾದ ತಣ್ತೀಗಳನ್ನು , ಪ್ರಯೋಗಗಳನ್ನು ಮಾಡಿದರು. ಮಳೆ ಮತ್ತು ಮೋಡ ಮುಸುಕಿದ ಕಗ್ಗತ್ತಲೆಯ ವಾತಾವರಣ ಹೊಂದಿರುವ ಕನಸು ಮನೋವಸಾದ ಅಥವಾ ಬೇಸರ, ಖನ್ನತೆ ರೋಗ ಚಿಹ್ನೆ ಅಥವಾ ಸನ್ನಿವೇಶಗಳನ್ನು ಸೂಚಿಸುವುದು.

ಮಳೆಗಿಂತಲೂ ಅಧಿಕ ಮಿಂಚು, ಗುಡುಗುಗಳ ಕನಸು ಕಂಡಿತೆಂದರೆ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಾಗಿರುವ ಸನ್ನಿವೇಶದ ಪ್ರಭಾವವನ್ನು ಅಂತಹ ಕನಸು ಸೂಚಿಸುತ್ತದೆ. ಮಳೆಯೊಂದಿಗೆ, ಮಳೆಬಿಲ್ಲು ಅಥವಾ ಕಾಮನಬಿಲ್ಲಿನ ಕನಸು ಸಂತಸದ ಸನ್ನಿವೇಶದ ಸೂಚಕ. ಮಳೆಯಲ್ಲಿ ಛತ್ರಿ ಅಥವಾ ಕೊಡೆ ಹಿಡಿದಿರುವ ಕನಸು ಮನಸ್ಸಿನ ಅಭದ್ರತೆಯ ನಿವಾರಣೆಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

Advertisement

ಮಳೆಯ ಕನಸಿನ ಆಧ್ಯಾತ್ಮಿಕ ಮೋಹ
ಮಳೆಯನ್ನು ಕನಸಲ್ಲಿ ಕಂಡರೆ ಅಥವಾ ಮಳೆಸದ್ದು ಕೇಳಿಸಿಕೊಂಡರೆ ಅದು ಕ್ಷಮಾಸೂಚಕ, ಆಶೀರ್ವಾದದ ಪ್ರತೀಕವಾಗಿದೆ.
ಅಂತೆಯೇ ಮಳೆಹನಿಗಳಲ್ಲಿ ಮೀಯುವ ಕನಸು, ದುಃಖ ಅಥವಾ ಕಣ್ಣೀರು ಹರಿದು, ಮನಸ್ಸು ಶುಭ್ರ ಹಾಗೂ ಸಂತಸ ಭರಿತವಾಗುವ ಸೂಚಕ.
ಬುವಿಗೆ ತಂಪನ್ನೀಯಲು ಮಳೆ ನೀಡುವಂತೆ ಋಗ್ವೇದದಲ್ಲಿ ಯಂತ್ರಗಳು (ಪರ್ಜನ್ಯ ಮಂತ್ರಗಳು) ಹಲವಾರು ಇವೆ. ಅಂತೆಯೇ ಅಧಿಕ ಮಳೆಯಿಂದ ಅತಿವೃಷ್ಟಿಯಿಂದ ಆಗುವ ಅನಾಹುತವನ್ನು ತಪ್ಪಿಸುವಂತೆಯೂ ಪ್ರಾರ್ಥಿಸುವ ಮಂತ್ರಗಳಿವೆ.

ಇಸ್ಲಾಂನಲ್ಲಿ ಮಳೆಯ ಕನಸು, ಉತ್ತಮ ಬೆಳೆ, ಇಳೆಯ ಸಂತೃಪ್ತಿ, ಜನಜೀವನ ಸುಗಮತೆ ಮತ್ತು ಸಂತೋಷವನ್ನು ಸೂಚಿಸುತ್ತದೆ.
ಆಯುರ್ವೇದ ಶಾಸ್ತ್ರದಲ್ಲೂ ಬತ್ತಿದ ಜಲಾಶಯ, ನೀರಿಲ್ಲದ ಕೆರೆ-ಬಾವಿ ತಟಾಕಗಳ ಕನಸು ದೇಹವನ್ನು ಕ್ಷೀಣಿಸುವಂತಹ ಕಾಯಿಲೆ (ಕ್ಷಯರೋಗವೇ) ಮುಂತಾದವುಗಳ ಸೂಚಕ ಎಂದು ತಿಳಿಸಲಾಗಿದೆ. ಕಾಲೇ ವರ್ಷತು ಪರ್ಜನ್ಯಃ ಪೃಥಿವೀಂ ಸಸ್ಯ ಶಾಲಿನೀಂ ಎಂದು ಶಾಂತಿಮಂತ್ರದಲ್ಲಿ ತಿಳಿಸಿರುವಂತೆ ಕಾಲಕಾಲಕ್ಕೆ ಮಳೆಯಾಗಲಿ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next