Advertisement

ರಾಜಕೀಯ ಶಕ್ತಿ ನೀಡಿದರೆ ಅಭಿವೃದ್ಧಿಗೆ ಮತ್ತಷ್ಟು ಶ್ರಮ

04:00 PM Dec 12, 2022 | Team Udayavani |

ನಾಗಮಂಗಲ: “ಗ್ರಾಮದ ಜನ ರಾಜಕೀಯವಾಗಿ ನನಗೆ ಶಕ್ತಿ ನೀಡಿದರೆ ಗ್ರಾಮದ ಸಂಪೂರ್ಣಅಭಿವೃದ್ಧಿಗೆ ಬದ್ಧನಾಗಿರುತ್ತೇನೆ’ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಫೈಟರ್‌ ರವಿ ಭರವಸೆ ನೀಡಿದರು.

Advertisement

ತಾಲೂಕಿನ ಅರೆಅಲ್ಪಹಳ್ಳಿ ಗ್ರಾಮದಲ್ಲಿ ವೈಯಕ್ತಿಕವಾಗಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಸೌಕರ್ಯ ಕಲ್ಪಿಸುವೆ: ಮುಂಬರುವ ಚುನಾವಣೆ ಯಲ್ಲಿ ನಾಗಮಂಗಲ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಹಲವಾರು ಸಮಸ್ಯೆಗಳು ಸಾರ್ವಜನಿಕರನ್ನು ಕಿತ್ತು ತಿನ್ನುತ್ತಿರುವುದು ನನ್ನ ಕ್ಷೇತ್ರ ಪ್ರವಾಸ ಸಮಯದಲ್ಲಿ ಕಂಡು ಬಂದಿವೆ.

ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಂಪೂರ್ಣವಾಗಿ ಫ‌ಲವಾಗಿರುವ ಹಿನ್ನಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ,ಆರೋಗ್ಯ, ಶಿಕ್ಷಣ ಸೇರಿದಂತೆ ಜನರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಮೂಲ ಸೌಕರ್ಯಗಳನ್ನು ನಾನು ಒದಗಿಸುತ್ತಿದ್ದೇನೆ ಎಂದು ತಿಳಿಸಿದರು.

ಸ್ಪಂದಿಸುತ್ತೇನೆ: ನಾನು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳಿಗೆ ರಾಜಕೀಯ ವ್ಯಕ್ತಿಗಳಿಂದ ಅಡತಡೆ ಎದುರಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಜಕೀಯ ಕ್ಷೇತ್ರ ಪ್ರವೇಶ ಮಾಡುವಂತಾಯಿತು. ಸಮಾಜ ಸೇವೆ ನಿರಂತರವಾಗಿ ನಡೆಯ  ಬೇಕಾದರೆ ರಾಜಕೀಯ ಶಕ್ತಿ ಬೇಕಾಗಿದೆ. ಕ್ಷೇತ್ರದ ಮತದಾರರ ಆಶೀರ್ವಾದ ಬೇಕು. ಅರೆಅಲ್ಪಹಳ್ಳಿಗ್ರಾಮ ಚಿಕ್ಕಗ್ರಾಮವಾದರೂ ಈ ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸದಿರುವುದು ಬೇಸರದಸಂಗತಿ. ನನಗೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ ನನ್ನ ಕೈಲಾದ ಸಹಾಯ ಮಾಡಿ ಜನರ ಸಮಸ್ಯೆಗೆಸ್ಪಂದಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನ ನನಗೆ ರಾಜಕೀಯವಾಗಿ ಶಕ್ತಿ ನೀಡಿದರೆಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತೇನೆ ಎಂದರು.

Advertisement

ಈ ವೇಳೆ ಗ್ರಾಮದ ಜನರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಿಕೊಡುವಂತೆಗ್ರಾಮ ಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಫೈಟರ್‌ ರವಿ, ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚ ಸಿದ್ಧಪಡಿಸಿಕೊಂಡು ಬಂದರೆ ಅದಕ್ಕೆ ಪೂರಕವಾಗಿ ಕೈಲಾದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ನೆರವು: ಬಳಿಕ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟು ವಿದ್ಯಾರ್ಥಿಗಳ ಶೈಕ್ಷಣಿಕಪ್ರಗತಿ ಪರಿಶೀಲಿಸಿದರು. ಅಲ್ಲದೇ, ಮಕ್ಕಳಆಟೋಪಕರಣ ಖರೀದಿಗೆ 7ಸಾವಿರ ಮತ್ತುಶಿಥಿಲಗೊಂಡಿರುವ ಶಾಲೆಯ ಬಿಸಿಯೂಟದಅಡುಗೆ ಮನೆ ದುರಸ್ಥಿ ಕಾರ್ಯಕ್ಕೆ 7ಸಾವಿರವನ್ನು ಸ್ಥಳದಲ್ಲಿಯೇ ನೀಡಿದರು.

ಧನಸಹಾಯ: ಈ ಮುನ್ನ ಗ್ರಾಮಕ್ಕೆ ಆಗಮಿಸಿದ ಫೈಟರ್‌ರವಿ ಅವರನ್ನು ಬೃಹತ್‌ ಹಾರ ಹಾಕಿಗೌರವಿಸಿದರು. ನಂತರ ತಮ್ಮ ಪ್ರವಾಸಮುಂದುವರಿಸಿ ಕಾಡಗೆರೆ ಕೊಪ್ಪ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಗ್ರಾಮದ ದೇವಸ್ಥಾನದ ಅಭಿವೃದ್ಧಿಗೆ 25ಸಾವಿರ ಆರ್ಥಿಕ ಸಹಾಯ ಮಾಡಿದರು.ಕಾಡಗೆರೆ ಶಾಲೆಗೆ ಧ್ವಜ ಸ್ಥಂಭ ನಿರ್ಮಿಸಲು 10ಸಾವಿರ ಧನ ಸಹಾಯ ನೀಡಿದರು. ಮುಖಂಡರಾದ ಶಿವಣ್ಣ, ಶಂಕರ್‌, ಕೆಂಪೇಗೌಡ, ಫೈಟರ್‌ರವಿಅಭಿಮಾನಿ ಬಳಗದ ಮುಖ್ಯಸ್ಥ ಅರ್ಜುನ್‌, ಗ್ರಾಮದ ಮಹಿಳೆಯರು, ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next