Advertisement
ಏನಿದು ?ಒಂದು ಕಾರ್ಯಕ್ರಮವನ್ನು ಸೂಕ್ತ ರೂಪರೇಷೆಯೊಂದಿಗೆ ಆಯೋಜಿಸುವುದು. ಉದಾಹರಣೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದ್ದರೆ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ವೇದಿಕೆ ಸಿದ್ಧತೆ, ಸಭಾಂಗಣ ಅಲಂಕಾರ, ನಿರೂಪಣೆ, ಆಹ್ವಾನ ಪತ್ರಿಕೆ, ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಸಹಿತ ಇನ್ನಿತರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವ ಹಿಸಿ, ಕಾರ್ಯಕ್ರಮವನ್ನು ಮತ್ತಷ್ಟು ಸುಂದರಗೊಳಿಸುವುದು. ಇದಕ್ಕೆ ತಂಡವನ್ನು ಕಟ್ಟಿಕೊಳ್ಳುವುದು ಬಹುಮುಖ್ಯ. ಕಾಲೇಜಿನಲ್ಲಿ ನಮ್ಮದೇ ಒಂದು ಸ್ನೇಹಿತ ಸಂಘವಿದ್ದರೆ ಇಂತಹ ಕಾರ್ಯಕ್ರಮ ಆಯೋಜಿಸಿ ಬದುಕಿಗೊಂದು ಹೊಸ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಹಣಕಾಸು, ನಿರೂಪಣೆ, ಫೋಟೋಗ್ರಫಿ, ಕಂಪ್ಯೂಟರ್, ದೈಹಿಕ ಶ್ರಮಿಕರನ್ನೊಳಗೊಂಡಂತ ಸ್ನೇಹಿತರ ತಂಡ ನಿಮ್ಮದಾಗಿದ್ದರೆ ಯಶಸ್ವಿಯಾಗಿ ಇವೆಂಟ್ ಮ್ಯಾನೇಜ್ ಮೆಂಟ್ ನಡೆಸಬಹುದು.
ಇದು ಈಗಾಗಲೇ ದೊಡ್ಡ ಮಟ್ಟದ ಒಂದು ಉದ್ಯಮವಾಗಿದೆ. ಯಾವುದೇ ಮದುವೆ, ಇನ್ನಿತರ ಸಭೆ ಸಮಾರಂಭಗಳ ಸಂಪೂರ್ಣ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ಒಂದು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ನೀಡಿದರೆ ಅವರು ಅದನ್ನು ಯಶಸ್ವಿಗೊಳಿಸುತ್ತಾರೆ. ಇದರಿಂದ ಕಾರ್ಯಕ್ರಮ ನಡೆಸುವವನಿಗೆ ಯಾವುದೇ ತಲೆಬಿಸಿ ಇರುವುದಿಲ್ಲ. ಕೇವಲ ಹಣ ನೀಡಿದರಾಯಿತು. ಇವ ರು ಸಮಾರಂಭದ ಆಮಂತ್ರಣದಿಂದ ಹಿಡಿದು ಸ್ಥಳ, ಸಿದ್ಧತೆ, ಅಲಂಕಾರ, ಊಟ, ಫೋಟೋಗ್ರಫಿ, ಕ್ಯಾಟರಿಂಗ್ ಪ್ರಚಾರ ಎಲ್ಲವನ್ನೂ ನೋಡಿ ಕೊಳ್ಳುತ್ತಾರೆ. ಕೋರ್ಸ್‌ಗಳೂ ಇವೆ
ಇವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಈಗಾಗಲೇ ಆರಂಭವಾಗಿದೆ. ಇದು 6 ತಿಂಗಳ ಅಥವಾ 1 ವರ್ಷದ ಕೋರ್ಸ್ ಆಗಿದ್ದು ಇದರಲ್ಲಿ ಎಲ್ಲವನ್ನು ಕಲಿಸಲಾಗುತ್ತದೆ. ಮಾತ್ರವಲ್ಲದೆ ಇದೊಂದು ಒಳ್ಳೆಯ ಸಂಪಾದನೆಯ ಕ್ಷೇತ್ರವೂ ಹೌದು.
Related Articles
ಇಂತಹ ಇವೆಂಟ್ ಮ್ಯಾನೇಜ್‌ಮೆಂಟ್ ಮೊದಲು ಕಾಲೇಜಿನಲ್ಲೇ ಆರಂಭವಾಗಬೇಕು. ಆಗ ಒಂದು ಕಾರ್ಯಕ್ರಮದಲ್ಲಿ ಇದು ಯಶಸ್ವಿ ಯಾದರೆ ಪ್ರತಿ ವಿಭಾಗದ ಕಾರ್ಯಕ್ರಮಕ್ಕೂ ಇವೆಂಟ್ ಮ್ಯಾನೇಜ್‌ಮೆಂಟ್ ಬೇಕಾಗಬಹುದು. ಇದು ಕೇವಲ ಸರ್ವೀಸ್ ಅಲ್ಲ. ಪ್ರತಿಫಲವಾಗಿ ಇಂತಿಷ್ಟು ಹಣವನ್ನು ಪಡೆಯುತ್ತಾರೆ. ಇದರಿಂದ ಕಲಿಕೆಗೆ ಸ್ವಲ್ಪ ಹಣ ಸಹಾಯವಾದ ರೀತಿಯಾಗುತ್ತದೆ. ಕಾಲೇಜಿನಲ್ಲಿ ಇದನ್ನು ಕಲಿತು ಮುಂದೆ ಇದೇ ಕ್ಷೇತ್ರದಲ್ಲಿ ಮುಂದುವರೆಯುವ ಅವಕಾಶಗಳು ಕೂಡ ಇವೆ.
Advertisement
ಭರತ್ ರಾಜ್ ಕರ್ತಡ್ಕ