Advertisement
ಹೆಚ್ಚುತ್ತಿರುವ ಕೊರೊನಾ ಕೇಸುಗಳ ಹಿನ್ನೆಲೆಯಲ್ಲಿ ತಜ್ಞರೇ ರಾಜ್ಯಾದ್ಯಂತ “ರಿವರ್ಸ್ ಕ್ವಾರಂಟೈನ್’ಗೆ ಶಿಫಾರಸು ಮಾಡಿದ್ದಾರೆ. ಇದು ಜಾರಿಯಾದರೆ ಆರೋಗ್ಯ ಸಮೀಕ್ಷೆ ಮಾಹಿತಿಯಂತೆ 60 ಲಕ್ಷ ವಯೋವೃದ್ಧರು, ಇತರ ಕಾಯಿಲೆಗಳಿಂದ ಬಳಲುತ್ತಿರುವ ಎರಡೂವರೆ ಲಕ್ಷ ಜನ, ಸುಮಾರು 5 ಲಕ್ಷದಷ್ಟು ಗರ್ಭಿಣಿಯರು ಹಾಗೂ ಬಾಣಂತಿಯರು ಸೇರಿ ಒಟ್ಟು 70 ಲಕ್ಷಕ್ಕೂ ಅಧಿಕ ಮಂದಿ ಮನೆಯಲ್ಲಿಯೇ “ಕ್ವಾರಂಟೈನ್’ನಲ್ಲಿರ ಬೇಕಾಗುತ್ತದೆ. ಇದನ್ನೇ ರಿವರ್ಸ್ ಕ್ವಾರಂಟೈನ್ ಎನ್ನುವುದು. ಹೊಸ ಪ್ರಕರಣ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಮಾನ್ಯ ಕ್ವಾರಂ ಟೈನ್‌ಗಿಂತಲೂ ರಿವರ್ಸ್ ಕ್ವಾರಂಟೈನ್ ಸೂಕ್ತ ಎನ್ನುತ್ತಾರೆ ತಜ್ಞರು.
ಆರೋಗ್ಯ ಇಲಾಖೆಯು ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಶಿಕ್ಷಕರನ್ನು ಬಳಸಿಕೊಂಡು ರಾಜ್ಯಾದ್ಯಂತ ಮನೆ ಮನೆ ಆರೋಗ್ಯ ಸಮೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಿತ್ತು. ಆಗ ವೃದ್ಧರು, ಉಸಿರಾಟ ಸಮಸ್ಯೆ ಹೊಂದಿರು ವವರು, ಗರ್ಭಿಣಿಯರು, ಬಾಣಂತಿ ಯರು, ಇತರ ರೋಗಿಗಳ ಮಾಹಿತಿ ಸಂಗ್ರಹಿಸಲಾಗಿದೆ.
Related Articles
ಆರ್ಥಿಕ ಸಮಸ್ಯೆ, ಅಗತ್ಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ರಿವರ್ಸ್ ಕ್ವಾರಂಟೈನ್‌ವನ್ನು ಸರಕಾರ ಕಡ್ಡಾಯ ಗೊಳಿಸುವುದು ಸಾಧ್ಯವಿಲ್ಲ. ಈ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಬಹುದು ಎಂದು ಡಾ| ಸುದರ್ಶನ್ ಬಲ್ಲಾಳ್ ಹೇಳುತ್ತಾರೆ.
Advertisement
ಜನ ಎಚ್ಚೆತ್ತುಕೊಳ್ಳದಿದ್ದರೆ ಕ್ರಮ ಅನಿವಾರ್ಯಸೋಂಕು ಪ್ರಕರಣಗಳು ನಿರಂತರ ಏರಿಕೆಯಾಗುತ್ತಿದ್ದು,ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಸದ್ಯ ಮಹಾರಾಷ್ಟ್ರ ಹೊರತುಪಡಿಸಿದರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಈ ಕ್ರಮ ಅನಿವಾರ್ಯವಾಗುತ್ತದೆ ಎನ್ನುತ್ತಾರೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ| ನಾಗರಾಜ್. ಯಾವ ಜಿಲ್ಲೆಗಳಲ್ಲಿ ಅಗತ್ಯ?
ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಈ ಕ್ರಮವನ್ನು ಶೀಘ್ರ ಜಾರಿಗೆ ತರಬೇಕಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸದ್ಯ ಬೆಂಗಳೂರು (2.62 ಲಕ್ಷ), ಮೈಸೂರು (40,000), ಬಳ್ಳಾರಿ (33,515) , ದಕ್ಷಿಣ ಕನ್ನಡ (25,276) ಹಾಗೂ ಬೆಳಗಾವಿ (20,575) ಸಹಿತ ಐದು ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿದೆ. ಕೊರೊನಾ ಸಾವಿನ ಪ್ರಮಾಣವು ವೃದ್ಧರು ಹಾಗೂ ಇತರ ಕಾಯಿಲೆಗಳಿಂದ ಬಳ ಲುತ್ತಿರುವವರಲ್ಲಿ ಮೂರು ಪಟ್ಟು ಹೆಚ್ಚಿದ್ದು, ರಿವರ್ಸ್ ಕ್ವಾರಂಟೈನ್‌ನಿಂದ ಅದನ್ನು ತಗ್ಗಿಸಬಹುದು.
– ಡಾ| ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆಗಳು