ಹೊಸದಿಲ್ಲಿ: ಭಾರತ ಎಫ್ 21 ಯುದ್ಧ ವಿಮಾನ ಖರೀದಿಗೆ ನಿರ್ಧರಿಸಿದರೆ ಬೇರೆ ಯಾವುದೇ ದೇಶಕ್ಕೆ ಈ ವಿಮಾನವನ್ನು ಮಾರಾಟ ಮಾಡುವುದಿಲ್ಲ ಎಂದು ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪೆನಿ ಹೇಳಿದೆ. ಭಾರತ ಒಟ್ಟು 114 ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಯಿದ್ದು, ಇದು ಅಂತಿಮಗೊಂಡರೆ ಭಾರತಕ್ಕೆ ವಿಶೇಷ ವಾಗಿ ಈ ರಕ್ಷಣಾ ವ್ಯವಸ್ಥೆ ಲಭ್ಯವಾಗ ಲಿದೆ. ಭಾರತದ ವೈಶಿಷ್ಟ್ಯಕ್ಕೆ ನಾವು ಹೆಚ್ಚಿನ ಗಮನ ನೀಡಲಿದ್ದೇವೆ ಎಂದು ಕಂಪ ನಿಯ ಕಾರ್ಯತಂತ್ರ ಮತ್ತು ವಹಿವಾಟು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ವಿವೇಕ್ ಲಾಲ್ ಹೇಳಿದ್ದಾರೆ.
ಭಾರತದ 60 ವಾಯುನೆಲೆಗಳಲ್ಲಿ ಕಾರ್ಯನಿರ್ವಹಿಸಬಹುದಾದ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದು ಅನುಮತಿ ಪಡೆದರೆ 1.24 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದ ಇದಾಗಿರಲಿದೆ. ಅಲ್ಲದೆ ಇದು ವಿಶ್ವದ ಅತಿದೊಡ್ಡ ರಕ್ಷಣಾ ಒಪ್ಪಂದವೂ ಆಗಿರಲಿದೆ.
Advertisement