Advertisement
ಮನೆಯ ಅಂದ ಚೆಂದದ ವಿಷಯಗಳಲ್ಲಿಯೂ ನಾವು ಅನೇಕ ಬಾರಿ ಎಡವುತ್ತಲೇ ಇರುತ್ತೇವೆ. ಮನೆ ಚಿಕ್ಕದಾದರೂ ಪರವಾಗಿಲ್ಲ. ಚೊಕ್ಕವಾಗಿಇರಬೇಕು ಎಂಬುದು ದೊಡ್ಡವರ ಮಾತು. ದುಂದು ವೆಚ್ಚ ಮಾಡದೆ ಇರುವ ಸಂಪನ್ಮೂಲಗಳಲ್ಲಿಯೇ ಮನೆಯ ಅಂದ ಹೆಚ್ಚಿಸಲು ಕೆಲವು ಉಪಾಯಗಳು ಇಲ್ಲಿವೆ.
ಯಾವುದೋ ಘಟನೆಗಳ ಸವಿನೆನಪಿಗಾಗಿ ಕುಟುಂಬ ಸದಸ್ಯರು, ಸ್ನೇಹಿತರು ಹೀಗೆ ಮತ್ತಾರದೋ ಜತೆಯಲ್ಲಿ ತೆಗೆಸಿಕೊಂಡ ಫೋಟೋಗಳು ಮನೆಯಲ್ಲಿ ಎಲ್ಲೋ ಬಿದ್ದಿರುತ್ತವೆ. ಕೆಲವರು ಮಲಗುವ ಕೋಣೆಗಳಲ್ಲಿ ಇಂಥಹ ಫೋಟೋಗಳನ್ನು ಇಟ್ಟಿರುತ್ತಾರೆ. ಇದರ ಬದಲು ಮನೆಯ ಹಾಲ್‌ನ ಗೋಡೆಯ ಒಂದು ಕಡೆ ಇವೆಲ್ಲವನ್ನೂ ಸುಂದರವಾಗಿ ಜೋಡಿಸಿದಾಗ ಎಲ್ಲ ನೆನಪುಗಳೂ ಒಮ್ಮೆ ಕಣ್ಮುಂದೆ ಬರುವುದರ ಜತೆಗೆ ನೋಡಲು ಸುಂದರವಾಗಿಯೂ ಕಾಣುತ್ತದೆ. ಇವುಗಳ ಜತೆಗೆ ಮನೆಯಲ್ಲಿರುವ ಪುಸ್ತಗಳನ್ನು ಕೂಡ ಒಂದೆಡೆ ಅಥವಾ ಬುಕ್ ಸ್ಟ್ಯಾಂಡ್‌ಗಳಲ್ಲಿ ಜೋಡಿಸುವುರಿಂದ ಮನೆಯ ಅಂದ ಹೆಚ್ಚುತ್ತದೆ. ಹಳೆಯ ವಸ್ತುಗಳಿಂದ ಕ್ರಾಫ್ಟ್ ತಯಾರಿ
ಮುರಿದ ಕುರ್ಚಿ, ಅಡುಗೆಗೆ ಬಳಸಿದ ತೆಂಗಿನ ಕಾಯಿಯ ಚಿಪ್ಪು, ಖಾಲಿಯಾಗಿರುವ ಟೂತ್‌ಪೇಸ್ಟ್ ಕವರ್, ಬಾಟಲ್‌ಗಳು ಹೀಗೆ ಹತ್ತು ಹಲವು ಹಾಳಾಗಿರುವ ಅಥವಾ ಕೆಲಸಕ್ಕೆ ಬಾರದ ವಸ್ತುಗಳು ಮನೆಯಲ್ಲಿ ಇರುತ್ತವೆ. ಇವುಗಳಿಂದ ಹಲವು ಬಗೆಯ ಕ್ರಾಫ್ಟ್ಗಳನ್ನು ತಯಾರಿಸಬಹುದಾಗಿದ್ದು, ಇವುಗಳನ್ನು ಶೋಕೇಸ್‌ಗಳಲ್ಲಿ, ಟಿವಿ ಸ್ಟ್ಯಾಂಡ್‌ಗಳಲ್ಲಿ ಅಲಂಕಾರಿಕ ವಸ್ತುಗಳಾಗಿ ಇಡಬಹುದು.
Related Articles
ಕೆಲವರು ಮನೆಯ ಸ್ವಚ್ಚತೆಗಾಗಿ ದುಂದುವೆಚ್ಚ ಮಾಡುತ್ತಾರೆ. ಪ್ರತಿನಿತ್ಯ ಮನೆಯ ಸ್ವಚ್ಚತೆಗೆ ಆದ್ಯತೆ ನೀಡಿದಲ್ಲಿ ಯಾವುದೇ ದುಂದು ವೆಚ್ಚದ ಆವಶ್ಯಕತೆ ಇರುವುದಿಲ್ಲ. ಮುಖ್ಯವಾಗಿ ಬಾತ್
ರೂಮ್, ಟಾಯ್ಲೆಟ್ ಮತ್ತು ಅಡುಗೆ ಕೋಣೆಯಲ್ಲಿನ ಸಿಂಕ್‌ಗಳ ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಪೀಠೊಪಕರಣಗಳಿಗೆ ಅಂಟಿಕೊಂಡಿರುವ ಧೂಳನ್ನೂ ಕಾಲ ಕಾಲಕ್ಕೆ ಶುಚಿಗೊಳಿಸಬೇಕು.
Advertisement
ಬಟ್ಟೆಗಳ ಜೋಡಣೆಹಗ್ಗಗಳನ್ನು ಕಟ್ಟಿ ಮನೆಯ ಎಲ್ಲೆಂದರಲ್ಲಿ ಬಟ್ಟೆಗಳನ್ನು ತೂಗು ಹಾಕುವುದು ಸರ್ವೇ ಸಾಮಾನ್ಯವಾಗಿ ಕಂಡುಬರುವ ತಪ್ಪು. ಹೀಗೆ ಮಾಡುವುದರಿಂದ ಅಂದ ಕೆಡುತ್ತದೆ. ತೊಳೆದು ಹರಗುವ ಬಟ್ಟೆಗಳನ್ನಾದರೆ ಮನೆಯ ಹಿಂಭಾಗದಲ್ಲಿ ಹಾಕಿದರೆ ಉತ್ತಮ. ಉಳಿದ ಬಟ್ಟೆಗಳನ್ನು ಬೆಡ್ ರೋಮ್‌ಗಳಲ್ಲಿನ ಕಪಾಟುಗಳಲ್ಲಿ ಜೋಡಿಸಿಟ್ಟರೆ ಚೆಂದ. ಪ್ರೀತಿ ಭಟ್ ಗುಣವಂತೆ