Advertisement

ಸಾಧನೆಯ ಛಲವಿದ್ದರೆ ಉದ್ಯಮದಲ್ಲಿ ಯಶಸ್ಸು

03:44 PM Oct 10, 2018 | Team Udayavani |

ಉದ್ಯಮ ಕ್ಷೇತ್ರಕ್ಕೆ ಕಾಲಿಡುವಾಗ ಎದುರಾಗುವ ಸವಾಲುಗಳೇನು?
ಅದನ್ನು ಹೇಗೆ ಎದುರಿಸಬಹುದು? ಛಲ, ಗುರಿ ಮತ್ತು ತಾನು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಾವುದೇ ಕ್ಷೇತ್ರದಲ್ಲಿ ತೊಡಕು ಉಂಟಾಗುವುದಿಲ್ಲ. ಇಂದು ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳವಣಿಗೆಯಾಗಿವೆ. ಕೆಲಸದ ಹೊರೆ ಕಡಿಮೆಯಾಗಿದೆ. ಆದ್ದರಿಂದ ಕಷ್ಟಕರ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಬಹುದು. ಆದರೆ ಇದಕ್ಕಾಗಿ ವೃತ್ತಿ ಕ್ಷೇತ್ರದ ಕುರಿತು ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ.

Advertisement

. ಸ್ಮಾರ್ಟ್‌ ನಗರಿಯಾಗುತ್ತಿರುವ ಮಂಗಳೂರಿನಲ್ಲಿ ಉದ್ಯಮ ಕ್ಷೇತ್ರಕ್ಕೆ ಅವಕಾಶಗಳು ಹೇಗಿವೆ?
ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹೇಗೆ ಪಡೆಯಬಹುದು? ದ.ಕ. ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಆದರೆ ಅದಕ್ಕೆ ಪೂರಕವಾದ ಉದ್ಯೋಗವಕಾಶಗಳು ಇಲ್ಲ. ಅದರಲ್ಲಿಯೂ ಇಂದಿನ ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ತಕ್ಕಂತಹಉದ್ಯೋಗಕ್ಕಾಗಿ ಕಾಯುತ್ತಿರುತ್ತಾರೆ. ಅದಕ್ಕೆ ಮಂಗಳೂರು ನಗರದಲ್ಲಿ ಅವಕಾಶಗಳು ಕಡಿಮೆ ಇರುತ್ತದೆ. ಅದ್ದರಿಂದ ಇಂಥದ್ದೇ ಉದ್ಯೋಗ ಬೇಕೆಂದು ಕಾಯದೆ ಸಿಕ್ಕಂತಹಾ ಉದ್ಯೋಗಕ್ಕೆ ಸೇರಿಕೊಂಡು ಅನುಭವವನ್ನು ಪಡೆದ ಬಳಿಕ ಬೇರೆ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

. ಉದ್ಯೋಗಕ್ಕಾಗಿ ವಲಸೆ ಹೋಗುವ ಯುವ ಜನರಿಗೆ ನಿಮ್ಮ ಕಿವಿ ಮಾತು ಏನು? ಉದ್ಯೋಗಕ್ಕೆ ವಲಸೆ ಹೋಗುವ ಬದಲು ಊರಿನಲ್ಲೇ ದುಡಿದು ಸಂಪಾದನೆ ಮಾಡಿದರೆ ಉತ್ತಮ. ಉದ್ಯೋಗಕ್ಕಾಗಿ ಬೇರೆ ಜಿಲ್ಲೆ, ರಾಜ್ಯಕ್ಕೆ ತೆರಳಿದರೆ ಉತ್ಪಾದನೆಗಿಂತ ಹೆಚ್ಚು ಖರ್ಚಾಗುತ್ತದೆ. ಆದರೆ ಈಗಿನ ವಿದ್ಯಾರ್ಥಿಗಳಿಗೆ ಉದ್ಯೋಗ, ಉದ್ಯೋಗ ಮಾಡುವ ಸ್ಥಳದ ಕುರಿತು ಘನತೆಯನ್ನು ನೋಡುತ್ತಾರೆ. ಹಾಗಾಗಿ ಊರಿನಲ್ಲಿ ಇರಲು ಇಷ್ಟಪಡುವುದಿಲ್ಲ. ಆದರೆ, ಇಲ್ಲಿ ಲಾಭಕ್ಕಿಂತ ನಷ್ಟವೇ ಅಧಿಕ.

.ಲಾಭ, ನಷ್ಟದ ಭಯದಲ್ಲಿ ಸ್ವಂತ ಉದ್ಯಮ ನಡೆಸಲು ಹಿಂದೇಟು ಹಾಕುವ ಯುವಜನರಿಗೆ ಏನು ಹೇಳಬಯಸುತ್ತೀರಿ?
ಸ್ವಂತ ಉದ್ಯಮ ನಡೆಸುವುದು ಅಂದಾಕ್ಷಣೆ ಭಯ ಇದ್ದೇ ಇರುತ್ತದೆ. ಅದರಲ್ಲಿಯೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾರ್ಮಿಕರು ಲಭ್ಯತೆ ಕೂಡ ಕಡಿಮೆ ಇದೆ. ಭರವಸೆಯಿಟ್ಟು ಸ್ವಂತ ಉದ್ಯಮಕ್ಕಿಳಿಯಬೇಕು. ಒಂದು ಬಾರಿ ಸೋತರೂ, ಮತ್ತೊಮ್ಮೆ ಗೆಲ್ಲಬಹುದು ಎಂಬ ಆತ್ಮವಿಶ್ವಾಸವಿದ್ದರೆ ಯಶಸ್ಸುಗಳಿಸಬಹುದು.

ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಯಾವ ನಿಯಮ ಅನುಸರಿಸಬೇಕು?  
ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಿಗಲು ನಮ್ಮ ಕೆಲಸವನ್ನು ನಾವು ಪ್ರೀತಿ ಮಾಡಬೇಕು. ಜೊತೆಗೆ ಸಮಯ ಪರಿಪಾಲನೆ ಅಗತ್ಯ. ದುಡಿಯುವ ಕಾರ್ಮಿಕರ ಜೊತೆ ಉತ್ತಮ ಬಾಂದವ್ಯ ವೃದ್ಧಿಸಿಕೊಳ್ಳಬೇಕು.

Advertisement

ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಯಾವ ನಿಯಮ ಅನುಸರಿಸಬೇಕು?
ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಿಗಲು ನಮ್ಮ ಕೆಲಸವನ್ನು ನಾವು ಪ್ರೀತಿ ಮಾಡಬೇಕು. ಜೊತೆಗೆ ಸಮಯ ಪರಿಪಾಲನೆ ಅಗತ್ಯ. ದುಡಿಯುವ ಕಾರ್ಮಿಕರ ಜೊತೆ ಉತ್ತಮ ಬಾಂದವ್ಯ ವೃದ್ಧಿಸಿಕೊಳ್ಳಬೇಕು.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next