ಬೆಂಗಳೂರು: ಮಾಲಿಕಯ್ಯ ಗುತ್ತೆದಾರ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದರೆ ಸರ್ಕಾರ ಬಂದ ತಕ್ಷಣವೇ ಮಂತ್ರಿಯಾಗಬೇಕಿತ್ತು ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಮ್ಮನ್ನು ಬಚ್ಚಾ ಎಂದಿರುವ ಮಾಲಿಕಯ್ಯ ಗುತ್ತೆದಾರ್ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಮಂತ್ರಿಯಾಗಿದ್ದಾಗ ಏನಾಗಿದ್ದರು ಎಂದು ಪ್ರಶ್ನಿಸಿದ್ದಾರೆ.
ಅವರು ಹಿರಿಯರಾಗಿದ್ದರೆ ಸರ್ಕಾರದ ಆರಂಭದಲ್ಲಿಯೇ ಮಂತ್ರಿಯಾಗಬೇಕಿತ್ತು. ನಾನು ಹೊಸಬ ಸರ್ಕಾರದ ಕೊನೆಯ ಭಾಗದಲ್ಲಿ ಮಂತ್ರಿಯಾಗಿದ್ದೇನೆ. ಗುತ್ತೆದಾರ್‌ಗೆ ಅಸಮಾಧಾನ ಇದ್ದಿದ್ದರೆ, ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಏಕೆ ಒಪ್ಪಿಕೊಂಡರು. ಆಗಲೇ ನಿರಾಕರಿಸಬಹುದಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವನ್ನು ಅನುಭವಿಸಿ ಈಗ ಬಿಜೆಪಿ ಸೇರುತ್ತಿದ್ದಾರೆ. ಅಫjಲ್‌ಪುರ ಕ್ಷೇತ್ರಕ್ಕೆ ಹೋದರೆ ಗೊತ್ತಾಗುತ್ತದೆ ಅವರ ಸಾಧನೆ ಏನು ಎಂದು ಲೇವಡಿ ಮಾಡಿದರು.
2014 ರ ಲೋಕಸಭೆ ಚುನಾವಣೆಯಲ್ಲಿ ಇವರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 15 ಸಾವಿರ ಮತ ಕಡಿಮೆ ಬಂದಿವೆ. ಕರ್ನಾಟಕದಲ್ಲಿಯಾಗಲಿ, ಗುಲಬರ್ಗದಲ್ಲಿಯಾಗಲಿ ಕಾಂಗ್ರೆಸ್ ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಅಮಿತ್ ಶಾ ಗುಜರಾತ್‌ನಲ್ಲಿಯೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಆರೋಪ ಮಾಡಿದ್ದರು. ಅಲ್ಲಿ ಏನಾಯಿತು ಎಂದು ಎಲ್ಲರಿಗೂ ಗೊತ್ತು. ರಾಜ್ಯದಲ್ಲಿ ಯಾರು ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡಿರುವುದರಿಂದ ಮತ್ತೆ ಅಧಿಕಾರಕ್ಕೆ ಬರುತ್ತದೆ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ