ಅಹಮದಾಬಾದ್: ಒಂದು ವೇಳೆ ಗುಜರಾತಿಗಳು ಮತ್ತು ರಾಜಸ್ಥಾನದವರು ಮಹಾರಾಷ್ಟ್ರವನ್ನು ತೊರೆದರೆ ಮುಂಬೈ ಆರ್ಥಿಕ ರಾಜಧಾನಿಯಾಗಿ ಉಳಿಯಲಾರದು ಎಂದು ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಇದನ್ನೂ ಓದಿ:ವಿಷ ಮಿಶ್ರಿತ ಮ್ಯಾಗಿ ನೂಡಲ್ಸ್ ತಿಂದ ಮಹಿಳೆ ಸಾವು: ಪೊಲೀಸರ ಹೇಳಿಕೆಯಲ್ಲೇನಿದೆ?
ಮುಂಬೈ ಮತ್ತು ಥಾಣೆಯಿಂದ ಗುಜರಾತಿ ಮತ್ತು ರಾಜಸ್ಥಾನಿಯರನ್ನು ಓಡಿಸಿದರೆ ಮಹಾರಾಷ್ಟ್ರ ಆರ್ಥಿಕವಾಗಿ ಏನನ್ನೂ ಸಾಧಿಸಲಾರದು ಎಂದು ಕೋಶ್ಯಾರಿ ಹೇಳಿದ್ದರು.
ಶುಕ್ರವಾರ ಮುಂಬೈನ ಅಂಧೇರಿಯಲ್ಲಿ ದಿವಂಗತ ಶಾಂತಿದೇವಿ ಚಂಪಾಲಾಲ್ ಜಿ ಕೊಠಾರಿ ಅವರ ಹೆಸರನ್ನು ವೃತ್ತವೊಂದಕ್ಕೆ ನಾಮಕರಣ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ನಾನು ಆಗಾಗ ಜನರಲ್ಲಿ ಹೇಳುತ್ತಿರುತ್ತೇನೆ, ಒಂದು ವೇಳೆ ಮಹಾರಾಷ್ಟ್ರದಲ್ಲಿ ಗುಜರಾತಿಗಳು, ರಾಜಸ್ಥಾನಿಯರನ್ನು ಹೊರಗಟ್ಟಿದರೆ ಮುಂಬೈ ವಾಣಿಜ್ಯ ರಾಜಧಾನಿಯಾಗಿರಲು ಅಸಾಧ್ಯ ಎಂಬುದಾಗಿ ಎಂದು ತಿಳಿಸಿದ್ದರು.
ರಾಜ್ಯಪಾಲ ಭಗತ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್ ರಾವತ್, ರಾಜ್ಯಪಾಲರು ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಶಿಂಧೆ ಖಂಡಿಸಬೇಕು. ಮರಾಠಿ ಸಮುದಾಯದ ಶಿಂಧೆ ಮುಖ್ಯಮಂತ್ರಿಯಾಗಿರುವಾಗ ಮರಾಠಿಗರನ್ನು ಅವಮಾನ ಮಾಡಲಾಗುತ್ತಿದೆ. ಇದು ಕಠಿಣಶ್ರಮದ ಮರಾಠಿಗರಿಗೆ ಮಾಡಿದ ಅವಮಾನ ಎಂದು ರಾವತ್ ಆರೋಪಿಸಿದ್ದಾರೆ.