Advertisement
ಅಂಗೈ ಅಗಲದ ಪರದೆಯಿಂದ ಹಿಡಿದು 21 ಇಂಚಿನ ಮಾನೀಟರ್, ಅಷ್ಟೇ ಏಕೆ 42 ಇಂಚಿನಷ್ಟು ದೊಡ್ಡ ಟಿ.ವಿ ಪರದೆಗೂ ಲಗ್ಗೆಯಿಟ್ಟು ರಾರಾಜಿಸುತ್ತಿರುವ ಫೇಸ್‌ಬುಕ್, ಕೆಲವೇ ತಿಂಗಳಲ್ಲಿ ಜಗತ್ತಿನ ಅತಿ ದೊಡ್ಡ ಧರ್ಮವಾಗಿರುವ ಕ್ರೈಸ್ತ ಧರ್ಮದ ಅನುಯಾಯಿಗಳಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಲಿದೆ! ಕ್ರೈಸ್ತ ಧರ್ಮ, 230 ಕೋಟಿ (2.3 ಬಿಲಿಯನ್) ಅನುಯಾಯಿಗಳನ್ನು ಹೊಂದಿದ್ದು, 2017ರ ಜೂನ್ ಅಂತ್ಯದ ವೇಳೆಗೆ 201 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿದ್ದ ಫೇಸ್‌ಬುಕ್, ಕ್ರೈಸ್ತ ಧರ್ಮೀಯರ ಸಂಖ್ಯೆಗೆ ಅತಿ ಹತ್ತಿರದಿಂದಲೇ ಟಕ್ಕರ್ ನೀಡಿದೆ.
“ಅಮೆರಿಕದಲ್ಲಿ ಧಾರ್ಮಿಕತೆ ಹಾಗೂ ಧರ್ಮವನ್ನು ಮೀರಿದ ನಂಬಿಕೆ ಅಥವಾ ಸಮುದಾಯವಾಗಿ ಫೇಸ್‌ಬುಕ್ ಬೆಳೆಯಲಿದೆ,’ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜೂಕರ್‌ಬರ್ಗ್ ಹೇಳಿದ್ದರು. ಅದರಂತೆ ಧರ್ಮದ ಮೇಲಿನ ಆಸಕ್ತಿ ಕಳೆದುಕೊಂಡ ಅಮೆರಿಕನ್ನರು, ಚರ್ಚ್‌ಗಿಂತಲೂ ಹೆಚ್ಚಾಗಿ ಫೇಸ್‌ಬುಕ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಅಲ್ಲದೆ ಜನರ ನಡುವಿನ ಅಂತರ ಕಡಿಮೆ ಮಾಡುವಲ್ಲೂ ಫೇಸ್‌ಬುಕ್ ಯಶಸ್ವಿಯಾಗಿದೆ.
Related Articles
“ಓ ಬನ್ನಿ ಸೋದರರೆ ಬೇಗ ಬನ್ನಿ… ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ,’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ. ಈ ಸಂದೇಶವನ್ನು ಇಡೀ ವಿಶ್ವವೇ ಪಾಲಿಸುತ್ತಿರುವಂತಿದೆ. ಆದರೆ ಗುಡಿ, ಚರ್ಚು, ಮಸೀದಿಗಳಿಂದ ಹೊರ ಬಂದು, ಫೇಸ್‌ಬುಕ್ ಮಾರ್ಗ ಹಿಡಿದ ಜನ ಸ್ಮಾರ್ಟ್ ಸಾಧನದ ಒಳ ಹೊಕ್ಕಿರುವುದು ದುರಂತ. ಪೆವ್ ಸಂಸ್ಥೆ ಹೇಳಿರುವ ಪ್ರಕಾರ 132 ಕೋಟಿ ಮಂದಿ ಪ್ರತಿ ವಾರ ಫೇಸ್‌ಬುಕ್ ಬಳಸುತ್ತಾರೆ. ಇದೇ ವೇಳೆ ಎಫ್ಬಿ ಮಾಸಿಕ ಬಳಕೆದಾರರ ಸಂಖ್ಯೆ 201 ಕೋಟಿ ಇದೆ. ಎಲ್ಲ ಧರ್ಮಗಳನ್ನು ಗಣನೆಗೆ ತೆಗೆದುಕೊಂಡರೆ ವಾರ ಅಥವ ತಿಂಗಳಿಗೆ ಇಷ್ಟೋಂದು ಸಂಖ್ಯೆಯ ಭಕ್ತರು ಅಥವಾ ಅನುಯಾಯಿಗಳು ಗುಡಿ, ಚರ್ಚ್ ಅಥವಾ ಮಸೀದಿಗೆ ಭೇಟಿ ನೀಡುವುದೇ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣ ಪ್ರಿಯರಿಗೆ ಫೇಸ್‌ಬುಕ್ಕೇ ದೇವಾಲಯ!
Advertisement
ಕ್ಷಿಪ್ರ ಗತಿ ಬೆಳವಣಿಗೆಈವರೆಗೆ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಧರ್ಮ ಎನಿಸಿರುವುದು ಇಸ್ಲಾಂ. ಈ ಧರ್ಮದ ಅನುಯಾಯಿಗಳ ಸಂಖ್ಯೆಯಲ್ಲಿ ವಾರ್ಷಿಕ ಶೇ.1.4ರಷ್ಟು ಪ್ರಗತಿಯಾಗುತ್ತದೆ. ಆದರೆ ಫೇಸ್‌ಬುಕ್ ಈ ಬೆಳವಣಿಗೆ ದಾಖಲೆಯನ್ನು ಪುಡಿಗಟ್ಟಿದ್ದು, ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ವಾರ್ಷಿಕ ಶೇ.22ರಷ್ಟು ಪ್ರಗತಿ ಕಂಡುಬರುತ್ತಿದೆ. à ಪ್ರಗತಿ ಪ್ರಮಾಣದ ಆಧಾರದಲ್ಲಿ ಎಫ್ಬಿ ಬಳಕೆದಾರರ ಸಂಖ್ಯೆ ಇನ್ನು ಕೆಲವೇ ತಿಂಗಳಲ್ಲಿ ಕ್ರೈಸ್ತ ಧರ್ಮೀಯರ ಸಂಖ್ಯೆಯನ್ನೂ ಹಿಂದಿಕ್ಕಿ ಬೆಳೆಯಲಿದೆ. ಚೀನಾ ತಾಣಗಳೂ ಹಿಂದೆ
ಇದೇ ವೇಳೆ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ರೀತಿಯ ಬೃಹತ್ ಸಾಮಾಜಿಕ ಮಾಧ್ಯಮಗಳ ಒಡೆಯನಾಗಿರುವ ಫೇಸ್‌ಬುಕ್, ಬಳಕೆದಾರರ ಸಂಖ್ಯೆಯಲ್ಲಿ ಚೀನಾ ಮೂಲದ ವಿಚಾಟ್ ಹಾಗೂ ಟೆನ್‌ಸೆಂಟ್ ಅನ್ನೂ ಹಿಂದಿಕ್ಕಿದೆ. ಈ ಎರಡೂ ಚೀನಾ ಸಾಮಾಜಿಕ ಮಾಧ್ಯಮಗಳು ಒಟ್ಟಾಗಿ 200 ಕೋಟಿ ಬಳಕೆದಾರರನ್ನು ಹೊಂದಿದ್ದರೆ ಫೇಸ್‌ಬುಕ್ ಒಂದೇ 201 ಕೋಟಿ ಬಳಕೆದಾರರನ್ನು ಹೊಂದಿದೆ. ಇನ್ನು ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಬಳಕೆದಾರರನ್ನೂ ಗಣನೆಗೆ ತೆಗೆದುಕೊಂಡರೆ ಸಂಖ್ಯೆ ಲೆಕ್ಕಕ್ಕೇ ಸಿಗದು.