ಹೀಗಾಗಿ ಬ್ಯಾಂಕ್‌ಗಳಿಂದ 1 ಕೋ.ರೂ. ಸಾಲ ಪಡೆಯಲು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿರುವುದು ಸುದ್ದಿಯಾಗಿರುವಂತೆ ಹಲವರಿಂದ ಹಲವು ರೀತಿಯ ಪ್ರತಿಕ್ರಿಯೆ ಗಳು ಬರುತ್ತಿವೆ.
Advertisement
ಸೋಮವಾರ ಪತ್ರಕರ್ತರು ಸ್ವಾಮೀಜಿ ಅವರನ್ನು “ಸರಕಾರದಿಂದ ಅನುದಾನ ಕೇಳುತ್ತೀರಾ?’ ಎಂದು ಪ್ರಶ್ನಿಸಿದಾಗ “ಕೋವಿಡ್ಅವಧಿಯಲ್ಲಿ ನಾವೇ ಸರಕಾರಕ್ಕೆ ದೇಣಿಗೆ ಕೊಟ್ಟಿದ್ದೇವೆ. ನಾವು ಸ್ವಾವಲಂಬಿ ಭಾರತೀಯ ರಾಗಬೇಕು. ನಮಗೂ ಕರ್ತವ್ಯಗಳಿರುತ್ತವೆ. ಎಲ್ಲರೂ ಸರಕಾರದಿಂದ ಕೇಳುತ್ತ ಹೋದರೆ ಜನಸಾಮಾನ್ಯರ ಮೇಲಿನ ಹೊರೆ ಜಾಸ್ತಿಯಾ ಗುತ್ತದೆ. ಸರಕಾರವಾದರೂ ಎಷ್ಟು ಜನರಿಗೆ ಎಷ್ಟು ಹಣ ಕೊಡಲು ಸಾಧ್ಯ?’ ಎಂದು ಉತ್ತರಿಸಿದರು.
ತೀರ್ಥರು ತಮಗೆ ಬಂದ ಕಾಣಿಕೆಗಳನ್ನುಬಡ ವಿದ್ಯಾರ್ಥಿಗಳು ಕೇಳಿದಾಗ ಶುಲ್ಕ ಪಾವತಿಗೆ ಕೊಡುತ್ತಾರೆ. ನಾವು ಶಿಕ್ಷಣ ಸಂಸ್ಥೆಗಳಿಗೆ ಕೊಡಬೇಕೆ ವಿನಾ ಅಲ್ಲಿಂದ ಪಡೆಯ ಬಾರದು. ಅದು ನಮಗೆ ಆದಾಯದ ಮೂಲವಾಗಬಾರದು. ನಾವು ಸಾಲ ಮಾಡಿದರೆ ಒಂದು ಎಚ್ಚರಿಕೆಯೂ ಇರುತ್ತದೆ. ಸಾಲ ಕೊಡುವ ಬ್ಯಾಂಕ್‌ನವರೂ ಸುಮ್ಮನೆ ಕೊಡುತ್ತಾರೋ? ಮಠದಲ್ಲಿ ಭೂಮಿ ಮೊದಲಾದ ಸಂಪನ್ಮೂಲವಿದೆ ಎಂದು ಅದನ್ನು ಖಾಲಿ ಮಾಡುವುದು ತರವಲ್ಲ ಎಂದು ಹೇಳಿದರು. ಶ್ರೀ ವಿಬುಧೇಶತೀರ್ಥರು 1988-90ರ ಅವಧಿಯಲ್ಲಿ ನಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥರಿಂದ ಪರ್ಯಾಯ ಪೂಜೆ ಮಾಡಿಸಿದಾಗ 60 ಲ.ರೂ. ಸಾಲ ಮಾಡಿದ್ದರು. ಪರ್ಯಾಯ ಪೀಠದಿಂದ ನಿರ್ಗಮಿಸುವಾಗ 25 ಲ.ರೂ. ಸಾಲ ಉಳಿದಿತ್ತು. ಅದನ್ನು ಶ್ರೀ ವಿಬುಧೇಶತೀರ್ಥರೇ ತೀರಿಸಿದರು. ಶ್ರೀಕೃಷ್ಣ ಮಠದಲ್ಲಿ ಪ್ರಸ್ತುತ ನಿತ್ಯ 1ರಿಂದ 1.25 ಲ.ರೂ. ಖರ್ಚು ಬರುತ್ತದೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
Related Articles
ಉಡುಪಿ: ಶ್ರೀಕೃಷ್ಣ ಮಠದ ವಿಟ್ಲಪಿಂಡಿ ಉತ್ಸವ ಆಚರಣೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಕುರಿತು ಇದು ವರೆಗೆ ಯಾವುದೇ ನಿರ್ಧಾರ ತಳೆದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
Advertisement
ಸೋಮವಾರ ನಡೆಯಬೇಕಾದ ಕೋವಿಡ್ ಸಂಬಂಧಿತ ಸಭೆ ನಡೆದಿಲ್ಲ. ವಿಟ್ಲಪಿಂಡಿ ಉತ್ಸವದ ಕುರಿತು ಪರ್ಯಾಯ ಸ್ವಾಮೀಜಿ ಯವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯವನ್ನು ಕೇಳಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ಅವರು ತಿಳಿಸಿದ್ದಾರೆ.