Advertisement
ಹೌದು. ಪ್ರತಿಯೊಬ್ಬರೂ ತಮ್ಮ ಜೀವ ನದ ಒಂದಲ್ಲ ಒಂದು ಹಂತದಲ್ಲಿ ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ಸ್ವವಿಮರ್ಶೆ ಮಾಡಿಕೊಂಡಿರುತ್ತಾರೆ. ಆದರೆ ಈ ನಕಾರಾತ್ಮಕ ಪ್ರಶ್ನೆಗಳ ಬದಲಾಗಿ ಅವನ್ನು ಸಕಾರಾತ್ಮಕ ವಾಗಿಸಿಕೊಂಡರೆ ನಮ್ಮ ಗುರಿಯತ್ತ ಸ್ಪಷ್ಟ ಹೆಜ್ಜೆಗಳನ್ನಿರಿ ಸಲು ಸಾಧ್ಯ. ಧನಾತ್ಮಕ ಚಿಂತನೆಗಳು, ಪ್ರಶ್ನೆಗಳು ನಮ್ಮ ಆತ್ಮಬಲವನ್ನು ಹೆಚ್ಚಿ ಸುವ ಜತೆಯಲ್ಲಿ ನಮ್ಮನ್ನು ಪ್ರಯತ್ನಶೀಲ ಮತ್ತು ಪರಿಶ್ರಮಿಗಳನ್ನಾಗಿಸುತ್ತವೆ. ಇದನ್ನೇ ನೆಪೋಲಿಯನ್ ಹಿಲ್ ಪಾಸಿ ಟಿವ್ ಶೈಲಿಯಲ್ಲಿ ಹೇಳುತ್ತಾನೆ “yes i can’-ಇದು ನನ್ನಿಂದ ಸಾಧ್ಯ ಎನ್ನುವ ಆತ್ಮವಿಶ್ವಾಸವೇ ನಮ್ಮ ಗೆಲುವಿನ ಮೊದಲ ಮೆಟ್ಟಿಲು. ನನ್ನಿಂದಲೂ ಇದು ಸಾಧ್ಯವಿದೆಯಾ? ಎನ್ನುವ ಅವಿಶ್ವಾಸ ವಿದೆಯಲ್ಲ; ಅದೇ ಪತನದ ಕಂದರಕ್ಕೆ ಧುಮುಕುವ ಕೊನೆಯ ಅಂಚು!
Related Articles
Advertisement
ಆ ಭಯವನ್ನು ಮೀರುವುದೇ ಒಂದು ಸವಾಲು. ಆ ಸವಾಲು ಸ್ವೀಕರಿಸಿದರೆ ಸೋಲಿನ ಭಯವಿಲ್ಲ. ಗೆಲುವಿಗೆ ಪ್ರಯತ್ನಿಸುವ ಮೊದಲೇ ಸೋಲಿನ ಸೊಲ್ಲು ನುಡಿ ದವ ಎಂದಾದರೂ ಗೆಲ್ಲುವುದು ಸಾಧ್ಯ ವಿದೆಯೇ?. ಇಂಥ ನಕಾರಾತ್ಮಕ ಮನೋಭಾವವೇ ನಮ್ಮ ಅರ್ಧ ಶಕ್ತಿ, ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಈ ಮನೋಭಾವದಿಂದ ಹೊರಬಂದು ಧನಾತ್ಮಕವಾಗಿ ಚಿಂತಿಸಲು ಆರಂಭಿಸಿ ದಾಗ ನಾವು ಗೆಲುವಿನ ಶಿಖರದ ಮಧ್ಯಭಾಗವನ್ನು ಏರಿದಂತೆ.
ನಾನೇನು ಮಾಡಬಲ್ಲೆ?, ನನ್ನಲ್ಲಿ ಯಾವ ಬಂಡವಾಳವೂ ಇಲ್ಲ ಎಂದು ನಿರಾಸೆಯ ಮಾತನಾಡುವವರು ಕೇವಲ ತನ್ನ ಹೊಸ ಯೋಚನಾ ಶಕ್ತಿಯ ಮೇಲೆ ಅತೀ ಪುಟ್ಟ ಬಂಡವಾಳದೊಂದಿಗೆ ತನ್ನ ತಲೆಯನ್ನೇ ಬಂಡವಾಳ ಮಾಡಿಕೊಂಡು ಗೆದ್ದ ಯಶಸ್ವೀ ಸಾಧಕರ ಜಗತ್ತಿನ ಬಗ್ಗೆ ಒಮ್ಮೆ ನೋಡಬೇಕು. ಇಂದು ನಮ್ಮ ಸುತ್ತಮುತ್ತ ಅಂಥ ಕಂಪೆನಿಗಳೇ ಇವೆ.
ಗೆಲುವು ಒಂದು ಧ್ಯಾನ, ಅದೊಂದು ತಪಸ್ಸು, ಅದೊಂದು ದೀಕ್ಷೆ, ಯಶಸ್ಸು ಎಂಬುದು ಜೀವನದ ಮಹತ್ತರವಾದ ಗುರಿ. ಅದಕ್ಕಿರುವ ಮೊದಲ ಅರ್ಹ ತೆಯೇ ಪರಿಶ್ರಮ, ಸಣ್ಣ ಸಣ್ಣ ಯಶಸ್ಸಿನ ಗೋಲು ಬಾರಿಸುತ್ತಾ ಗೆಲುವಿನ ಗುರಿ ತಲುಪುವ ಅಂತರಂಗದ ವಿಶ್ವಾಸದ ಗಂಗೆ ನಮ್ಮಲ್ಲಿ ಪುಟಿದೇಳಲಿ.
- ಶ್ರೀಲತಾ ಹರ್ಷವರ್ಧನ್ ಶೆಟ್ಟಿ, ವಂಡ್ಸೆ