Advertisement

ತಾಕತ್ತಿದ್ದರೆ ಬಿಜೆಪಿ ದಲಿತ ಸಿಎಂ ಘೋಷಿಸಲಿ: ಸಿದ್ದರಾಮಯ್ಯ

01:10 PM Jun 28, 2022 | Team Udayavani |

ಕೊಪ್ಪಳ: ಸಿಎಂ ಯಾರಾಗಬೇಕೆಂದು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು, ತಾಕತ್ತಿದ್ದರೆ ಬಿಜೆಪಿ ದಲಿತ ಸಿಎಂ ಘೋಷಣೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ಇದನ್ನೂ ಓದಿ:ಬರ್ತ್ ಡೇ ಜತೆ ಶಕ್ತಿ ಪ್ರದರ್ಶನ: ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಚರ್ಚೆ?

ತಾಲೂಕಿನ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ದಲಿತ ಸಿಎಂ ಆಯ್ಕೆ ಮಾಡಿದೆಯಾ? ಮುಂದೆ ದಲಿತ ಸಿಎಂ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುತ್ತಾ? ನಮ್ಮ ಪಕ್ಷದ ಬಗ್ಗೆ ಪ್ರಶ್ನೆ ಮಾಡಲು ಅವರ್ಯಾರು?

ಬಿಜೆಪಿ ದಲಿತ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ. ನಾವು ಯಾರನ್ನು ಮಾಡ ಬೇಕು ಎನ್ನೋದನ್ನು ಹೈಕಮಾಂಡ್‌ನ‌ಲ್ಲಿ ತೀರ್ಮಾನ ಮಾಡ್ತೇವೆ. ಮೊನ್ನೆ ಬಿಎಸ್‌ವೈ ತೆಗೆದು ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ರಲ್ಲ. ಅದನ್ನೇ ಕಾರಜೋಳ ಅವರನ್ನು ಸಿಎಂ ಮಾಡಬಹುದಿತ್ತಲ್ವಾ? ಆದ್ರೆ ಯಾಕೆ ಅವರನ್ನು ಸಿಎಂ ಮಾಡ್ಲಿಲ್ಲ ಎಂದು ಪ್ರಶ್ನಿಸಿದರು.

ಕತ್ತಿ ಮೂರ್ಖ, ಕನ್ನಡ ದ್ರೋಹಿ
ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿ ಗಳು ಯಾರೆಂಬುದನ್ನು ನಾಲ್ಕೈದು ತಿಂಗಳು ಮೊದಲೇ ಘೋಷಣೆ ಮಾಡ್ತೇವೆ. ಕೆಲವರು ಕಾಂಗ್ರೆಸ್‌ ಪಕ್ಷದ ಸಂಪರ್ಕದಲ್ಲಿದ್ದಾರೆ. ಅವರು ಯಾರೆಂದು ಈಗಲೇ ಹೇಳ್ಳೋಕೆ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿ ದರು. ರಾಜ್ಯ ಇಬ್ಭಾಗದ ವಿಚಾರ ಮಾತನಾಡಿರುವ ಉಮೇಶ ಕತ್ತಿ ಒಬ್ಬ ಮೂರ್ಖ. ಅವನು ಕನ್ನಡದ ದ್ರೋಹಿ.

Advertisement

ಕರ್ನಾಟಕ ಏಕೀಕರಣವಾಗಿದ್ದು ಕನ್ನಡ ಭಾಷೆ ಮಾತನಾಡುವ ಎಲ್ಲರೂ ಒಂದಾಗಿರಲಿ ಎನ್ನುವ ಕಾರಣಕ್ಕೆ. ಏಕೀಕರಣಕ್ಕೆ ಹೋರಾಟ ನಡೆಯಿತು. ಉಕ-ದಕ ಅಂತಾ ಮಾತಾಡ್ತಿ ರುವ ಉಮೇಶ ಕತ್ತಿ ಕನ್ನಡಕ್ಕೆ ಮಾಡುತ್ತಿರುವುದು ದ್ರೋಹ. ಅದು ಸಚಿವರಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next