Advertisement

BJP ರಾಜ್ಯಾಧ್ಯಕ್ಷನಾದರೆ ಡಿಕೆಶಿಗಿಂಥ ಸ್ಪೀಡ್‌ ಕೆಲಸ ಮಾಡುವೆ ತೋರಿಸುವೆ: ಸೋಮಣ್ಣ

09:37 PM Aug 12, 2023 | Team Udayavani |

ಬೆಂಗಳೂರು: ಬಿಜೆಪಿ ಹೈಕಮಾಂಡ್‌ ನನಗೆ ಅವಕಾಶ ಮಾಡಿಕೊಟ್ಟರೆ ಡಿ.ಕೆ.ಶಿವಕುಮಾರ್‌ಗಿಂಥ ಸ್ಪೀಡ್‌ ಆಗಿ ಕೆಲಸ ಮಾಡಿ ತೋರಿಸುತ್ತೇನೆ. ವರಿಷ್ಠರು ನನಗೇನಾದರೂ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಅದರ ಮಜಾವೇ ಬೇರೆ ಇರುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಮತ್ತೂಮ್ಮೆ ರಾಜ್ಯಾಧ್ಯಕ್ಷ ಸ್ಥಾನದ ಬಯಕೆ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್‌ ನಾಯಕರ ಅಂಗಳದಲ್ಲಿ ಬಾಲ್‌ ಇದೆ. ಕಾಂಗ್ರೆಸ್‌ ನಲ್ಲಿ ನೂರಾರು ಲೀಡರ್‌ ಇದ್ದಾರೆ. ಕಾರ್ಯಾಧ್ಯಕ್ಷ ಸ್ಥಾನದ ಮೂಲಕ ಅವರು ಕೆಲಸ ಮಾಡುತ್ತಾರೆ. ನಮ್ಮಲ್ಲೂ ಹಾಗೆ ಮಾಡಬಹುದು. ಬಿಜೆಪಿಯಲ್ಲೂ ಎರಡು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿ ಮಾಡಬಹುದು. ನನ್ನ ಅನುಭವ ಬಳಸಿಕೊಳ್ಳುವುದು, ಬಿಡುವುದು ಹೈಕಮಾಂಡ್‌ಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆಯಲ್ಲಿ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡೆ. ಕೆಲವು ಕಹಿ ಘಟನೆಯಿಂದ ಸ್ವಯಂಕೃತ ಅಪರಾಧ ಎಸಗಿ ಗೋವಿಂದರಾಜ ನಗರದ ಜನರಿಗೆ ಅಪಚಾರ ಮಾಡಿದೆ ಎಂಬ ನೋವು ನನ್ನನ್ನು ಕಾಡುತ್ತಿದೆ. 1983ರಿಂದ ರಾಜಕಾರಣದಲ್ಲಿ ನಾನು ಬಹಳ ಕೆಲಸ ಮಾಡಿದ್ದೇನೆ. ಆದರೆ ಈಗ ನಾನೇ ನಾನಾಗಿ ಕಾಲಿನ ಮೇಲೆ ಕಲ್ಲು ಹಾಕಿಕೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ
ಹೈಕಮಾಂಡ್‌ ಕೊಟ್ಟ ಟಾಸ್ಕ್ನ್ ನಾನೋಬ್ಬನೇ ಗಂಭೀರವಾಗಿ ತೆಗೆದುಕೊಂಡೆ. ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ. ಇಷ್ಟರ ನಡುವೆಯೂ ನಾನು ಒಂದು ಕಡೆ ಮೂರು ಸಾವಿರ ಮತಗಳ ಅಂತರದಿಂದ ಸೋತೆ. ಇನ್ನೊಂದು ಕಡೆ ಎಪ್ಪತ್ತು ಸಾವಿರ ಮತಗಳಿಸಿದೆ. ನಾನು ಹೇಗೆ ಸೋತೆ ಅಂತ ಎಲ್ಲರಿಗೂ ಗೊತ್ತು. ಆ ಬಗ್ಗೆ ನನ್ನ ಬಾಯಿ ಬಿಡಿಸಬೇಡಿ ಎಂದು ಹೇಳಿದರು

 

Advertisement
Advertisement

Udayavani is now on Telegram. Click here to join our channel and stay updated with the latest news.

Next