Advertisement

“ತಾಕತ್ತಿದ್ದರೆ ಬಾಬ್ರಿ ಮಸೀದಿ ಕಟ್ಟುತ್ತೇವೆಂದು ಹೇಳಿ’

06:00 AM Dec 04, 2018 | |

ಬೀದರ: ಚುನಾವಣೆ ಬಂದಾಗ ಮಾತ್ರ ಶ್ರೀರಾಮ ಮಂದಿರ ವಿಚಾರ ಚರ್ಚೆಗೆ ಬರುತ್ತದೆ ಎಂಬುದು ಸರಿಯಲ್ಲ. ಅದು ನಿರಂತರವಾಗಿ ನಡೆಯುತ್ತಿದೆ. ಬೇಕಾದರೆ ಕಾಂಗ್ರೆಸ್‌ನವರು ಅಥವಾ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಿಸುತ್ತೇವೆ ಎಂದು ಹೇಳಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಸಿದ್ದರಾಮಯ್ಯ ಅವರಿಂದ ಹಿಂದುತ್ವದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನಮಗಿಲ್ಲ. ಭಾರತದಲ್ಲಿ ಯಾರು ಹಿಂದುತ್ವವಾದಿಗಳು ಎಂಬುದು ಎಲ್ಲರಿಗೂ ಗೊತ್ತಿದೆ. ರಾಮ ಎಂದ ಕೂಡಲೇ ಕಾಂಗ್ರೆಸ್‌ನವರಿಗೆ ಬೆವರು ಬರುತ್ತದೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಯವರು ತಾವು ಹಿಂದೂ, ಬ್ರಾಹ್ಮಣ ಎಂದು ಹೇಳಿಕೊಳ್ಳಲು ಶುರು ಮಾಡಿದ್ದಾರೆ. ದೇಶದಲ್ಲಿ
ಹಿಂದುತ್ವ ಜಾಗೃತವಾಗಿರುವುದನ್ನು ಅರಿತ ಕಾಂಗ್ರೆಸ್‌ನವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.

Advertisement

ದೇವೇಗೌಡ ಸ್ವಯಂ ಘೋಷಿಕ ಮಣ್ಣಿನ ಮಗ. ಅವರು ನಿಜವಾಗಿಯೂ ಮಣ್ಣಿನ ಮಗ ಆಗಿದ್ದರೆ ಅದನ್ನು ಸ್ವತ: ರೈತರೇ ಹೇಳುತ್ತಿದ್ದರು. ಮಣ್ಣಿನ ಮಗನೆಂದು ಹೇಳಿಕೊಳ್ಳುವ ದೇವೇಗೌಡರು, ಹಿಂದುಳಿದ ವರ್ಗಗಳ ನಾಯಕನೆಂದೇ ಹೇಳಿಕೊಳ್ಳುವ ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯಾವತ್ತಾದರೂ ರಾಜ್ಯದ ರೈತರ ಕಣ್ಣೀರೊ ರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರಾ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next