Advertisement

18 ವರ್ಷದ ಹೆಣ್ಣು ಪ್ರಧಾನಿಯನ್ನು ಆಯ್ಕೆ ಮಾಡಬಹುದು, ಬಾಳಸಂಗಾತಿ ಆಯ್ಕೆ ಯಾಕಿಲ್ಲ? ಒವೈಸಿ

02:49 PM Dec 18, 2021 | Team Udayavani |

ನವದೆಹಲಿ: ಒಂದು ವೇಳೆ 18 ವರ್ಷದ ಯುವತಿ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದಾದ ಮೇಲೆ, ಆಕೆ ತನ್ನ ಸಂಗಾತಿಯನ್ನು ಯಾಕೆ ಆಯ್ಕೆ ಮಾಡಿಕೊಳ್ಳಲು ತಕರಾರು ಯಾಕೆ…ಇದು ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಎಂ) ಸಂಸದ ಅಸಾದುದ್ದೀನ್ ಒವೈಸಿ ಕೇಂದ್ರ ಸರ್ಕಾರಕ್ಕೆ ಈ ರೀತಿ ತಿರುಗೇಟು ನೀಡಿದ್ದಾರೆ.

Advertisement

ಇದನ್ನೂ ಓದಿ:ಸಂಗೊಳ್ಳಿ ರಾಯಣ್ಣ, ಶಿವಾಜಿ ಪ್ರತಿಮೆ ಹಾನಿಗೆ ಸಚಿವರ ಖಂಡನೆ, ಕಾನೂನು ಕ್ರಮದ ಎಚ್ಚರಿಕೆ

ಎಎನ್ ಐ ಜೊತೆ ಮಾತನಾಡಿದ ಒವೈಸಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರಂಕುಶ ಆಡಳಿತಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಭಾರತದ ಪ್ರಜೆಯೊಬ್ಬ 18 ವಯಸ್ಸಿಗೆ ಕರಾರು ಪತ್ರಕ್ಕೆ, ಉದ್ಯಮ ಆರಂಭಿಸಲು ಸಹಿ ಹಾಕಬಹುದು, ಪ್ರಧಾನಿ, ಸಂಸದ, ಶಾಸಕರನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ಯುವಕರ ವಿವಾಹ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಕೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.

ದೇಶದ ಮಹಿಳೆಯರ ಏಳಿಗೆಗಾಗಿ ಈ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಒವೈಸಿ ಆರೋಪಿಸಿದರು. ಭಾರತದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಇಳಿಕೆಯಾಗಿರುವುದು ಕೇವಲ ಕ್ರಿಮಿನಲ್ ಕಾಯ್ದೆಯಿಂದ ಮಾತ್ರವಲ್ಲ, ಇದಕ್ಕೆ ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಯ ಕೊಡುಗೆಯೂ ಇದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರದ ಗಣತಿಯ ಪ್ರಕಾರ ಸುಮಾರು 12 ಮಿಲಿಯನ್ ಬಾಲ್ಯವಿವಾಹ (18 ವರ್ಷಕ್ಕಿಂತ ಕೆಳಗೆ) ನಡೆದಿರುವುದಾಗಿ ತಿಳಿಸಿದೆ.

ಈ ಸರ್ಕಾರ ಮಹಿಳೆಯರ ಏಳಿಗೆಗಾಗಿ ಏನನ್ನೂ ಮಾಡಿಲ್ಲ ಎಂಬುದು ಬಹಿರಂಗವಾಗಿದೆ. 2005ರಲ್ಲಿ ಶೇ.26ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದರು, ಆದರೆ 2020ರಲ್ಲಿ ಅದು ಶೇ.16ಕ್ಕೆ ಇಳಿಕೆಯಾಗಿದೆ ಎಂದು ಒವೈಸಿ ಟೀಕಿಸಿದರು.

Advertisement

ಡಾಟಾ ಸಂರಕ್ಷಣಾ ಮಸೂದೆ ಪ್ರಕಾರ, ಡಾಟಾ ಹಂಚಿಕೊಳ್ಳುವ ಹಕ್ಕು ನಿಮಗಿದೆ, ಹಾಗಾದರೆ ಬಾಳಸಂಗಾತಿಯನ್ನು ಯಾಕೆ ಆಯ್ಕೆ ಮಾಡಿಕೊಳ್ಳಬಾರದು. ಇದ್ಯಾವ ರೀತಿ ತರ್ಕ. ಇದೊಂದು ತಪ್ಪು ಹೆಜ್ಜೆ ಎಂಬುದು ನನ್ನ ನಿಲುವಾಗಿದೆ. ಖಾಸಗಿತನ ಮೂಲಭೂತ ಹಕ್ಕು ಎಂಬುದಾಗಿ ಸುಪ್ರೀಂಕೋರ್ಟ್ ಕೂಡಾ ಹೇಳಿದೆ ಎಂದು ಒವೈಸಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next