Advertisement

ಬ್ರಾಹ್ಮಣರಿಗೆ ಶೇ. 10 ಮೀಸಲು ನೀಡದಿದ್ದರೆ ಹೈಕೋರ್ಟ್‌ ಮೊರೆ

10:35 PM Feb 25, 2023 | Team Udayavani |

ಹಾವೇರಿ: ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ಮೀಸಲಾತಿ (ಇಡಬ್ಲ್ಯೂ ಎಸ್‌) ವ್ಯವಸ್ಥೆ ಜಾರಿಗೊಳಿಸಿದ್ದರೂ ರಾಜ್ಯ ಸರಕಾರ ಇದನ್ನು ಅನುಷ್ಠಾನಗೊಳಿಸುತ್ತಿಲ್ಲ. 2-3 ವಾರಗಳಲ್ಲಿ ಇಡಬ್ಲ್ಯೂ ಎಸ್‌ ಪ್ರಮಾಣ ಪತ್ರ ಸೌಲಭ್ಯ ನೀಡದಿದ್ದರೆ, ಈ ಕುರಿತು ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ಬ್ರಾಹ್ಮಣ ಸಮಾಜ (ಎಕೆಬಿಎಂಎಸ್‌) ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

Advertisement

ಅಗಡಿ ಗ್ರಾಮದ ಶ್ರೀಕ್ಷೇತ್ರ ಆನಂದವನದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜ ಏರ್ಪಡಿಸಿದ್ದ ಹಾವೇರಿ ಜಿಲ್ಲಾ ಪ್ರಥಮ ಬ್ರಾಹ್ಮಣ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ ಕೊಟ್ಟಿದೆ. ಇದನ್ನು ಸುಪ್ರೀಂಕೋರ್ಟ್‌ ಸಹ ಎತ್ತಿ ಹಿಡಿದಿದೆ. ಆದರೂ, ರಾಜ್ಯ ಸರಕಾರ ಮೀಸಲಾತಿ ಕೊಟ್ಟಿಲ್ಲ. ಬ್ರಾಹ್ಮಣರಿಗೆ ಅನುಕೂಲ ಮಾಡಿಕೊಟ್ಟರೆ ಬೇರೆ ಸಮುದಾಯದರು ಬೇಸರ ಮಾಡಿಕೊಳ್ಳುತ್ತಾರೆಂಬ ಕಾರಣದಿಂದ ಮೀಸಲಾತಿ ಜಾರಿಗೊಳಿಸುತ್ತಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next