Advertisement

9 ಚಿನ್ನದ ಪದಕ ಪಡೆದ ಸುಚಿತ್ರಾಗೆ ಐಇಎಸ್‌ ಕನಸು

07:06 AM Mar 19, 2019 | |

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದಲ್ಲಿ ಸೋಮವಾರ ನಡೆದ 18ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆದು ಮಿಂಚಿದರು. ದಾವಣಗೆರೆಯ ಜೈನ್‌ ಇನ್‌ಸ್ಟಿಟ್ಯೂಟ್‌ ಆಪ್‌
ಟೆಕ್ನಾಲಾಜಿಯ ಬಿಇ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಮೊದಲ ರ್‍ಯಾಂಕ್‌ ಗಳಿಸಿದ ಸುಚಿತ್ರಾ ಎನ್‌. 9 ಚಿನ್ನದ ಪದಕ ಪಡೆದಿದ್ದಾಳೆ.

Advertisement

ನಿರಂತರ ಶ್ರಮದಿಂದ ಇಷ್ಟೊಂದು ಸಾಧನೆ ಮಾಡಿರುವ ಸುಚಿತ್ರಾ ಐಇಎಸ್‌(ಭಾರತೀಯ ಇಂಜಿನಿಯರಿಂಗ್‌ ಸರ್ವೀಸ್‌) ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ. ತಂದೆ ನಟರಾಜನ್‌ ಬಿ. ಹಾಗೂ ತಾಯಿ ಸೀತಾ ದಂಪತಿಯ ಮಗಳು ಸುಚಿತ್ರಾ ಹಾಗೂ ಮಗ ಸುನೀಲ ಡಿಪ್ಲೊಮಾ ಓದುತ್ತಿದ್ದಾನೆ. ಮಗಳ ಸಾಧನೆಗೆ ಪಾಲಕರು ಸಂತಸ ಪಟ್ಟಿದ್ದಾರೆ. ಸದ್ಯ ಬಾಗಲಕೋಟೆಯಲ್ಲಿ ಎಂ.ಟೆಕ್‌ ಕಲಿಯುತ್ತಿದ್ದು, ಐಇಎಸ್‌ ಮಾಡಬೇಕೆಂಬ ಕನಸು ಇಟ್ಟುಕೊಂಡಿದ್ದಾರೆ.

ಮೂವರೂ ಹೆಣ್ಮಕ್ಳೂ ಎಂಜಿನಿಯರ್‌
ಹೆಣ್ಣು ಹುಟ್ಟಿದರೆ ಮೂಗು ಮುರಿಯತ್ತಿರುವ ದಿನಗಳಲ್ಲಿ ಮೂವರೂ ಹೆಣ್ಣು ಮಕ್ಕಳಿಗೆ ಎಂಜಿನಿಯರಿಂಗ್‌ ಕಲಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ರಾಮಪ್ಪ ಹಾಗೂ ಸುವರ್ಣ ದಂಪತಿ ಮೂರನೇ ಮಗಳೇ ಮಧುಶ್ರೀ ದಾವಣಗೆರೆಯ ಬಾಪೂಜಿ ಇನ್‌ ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಬಿಇ ಸಿವಿಲ್‌ ವಿಭಾಗದಲ್ಲಿ ರ್‍ಯಾಂಕ್‌ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಮೊದಲನೇ ಮಗಳು ಕಾವ್ಯಶ್ರೀ, ಎರಡನೇ ಮಗಳು ವಿದ್ಯಾಶ್ರೀ ಹಾಗೂ ಮೂರನೇಯವಳು ಮಧುಶ್ರೀ. ಮೂವರೂ ಸಿವಿಲ್‌ ಎಂಜಿನಿಯರಿಂಗ್‌ ಓದಿದ್ದೇ ವಿಶೇಷ. ಪಾಲಕರ ಹಾಗೂ ಪ್ರಾಧ್ಯಾಪಕರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಐಇಎಸ್‌ ಓದಬೇಕೆಂಬ ಕನಸು ಇದೆ. ಶೀಘ್ರವೇ ಅದನ್ನೂ ಮಾಡುತ್ತೇನೆ ಎನ್ನುತ್ತಾರೆ ಮಧುಶ್ರೀ

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next