Advertisement

ಸ್ವಿಮ್ಮಿಂಗ್‌: ಸೆಮಿಫೈನಲ್‌ಗೆ ಶ್ರೀಹರಿ ನಟರಾಜನ್‌

11:22 PM Jul 31, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಬೆಂಗಳೂರಿನ ಈಜುಪಟು ಶ್ರೀಹರಿ ನಟರಾಜನ್‌ ರವಿವಾರದ 50 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ಅವರು 25.52 ಸೆಕೆಂಡ್‌ಗಳ ಸಾಧನೆಯೊಂದಿಗೆ ಹೀಟ್ಸ್‌ನಲ್ಲಿ 2ನೇ, ಒಟ್ಟಾರೆಯಾಗಿ 8ನೇ ಸ್ಥಾನ ಪಡೆದರು.

Advertisement

ಆದರೆ 100 ಮೀ. ಬ್ಯಾಕ್‌ಸ್ಟ್ರೋಕ್‌ ಫೈನಲ್‌ ಅರ್ಹತೆ ಪಡೆದಿದ್ದ ಅವರು 54.31 ಸೆಕೆಂಡ್‌ಗಳ ಸಾಧನೆಯೊಂದಿಗೆ 7ನೇ ಸ್ಥಾನಕ್ಕೆ ಕುಸಿದರು. ಇದು ಅವರ ರಾಷ್ಟ್ರೀಯ ದಾಖಲೆಗಿಂದಲೂ ಕಡಿಮೆ ಮಟ್ಟದ ಸಾಧನೆಯಾಗಿದೆ (53.77 ಸೆಕೆಂಡ್‌).

50 ಮೀ. ಸ್ಪ್ಲಿಟ್‌ ತನಕ ಶ್ರೀಹರಿ 5ನೇ ಸ್ಥಾನಿಯಾಗಿದ್ದರು (26.31 ಸೆ.). ಬಳಿಕ ಇನ್ನಷ್ಟು ಹಿನ್ನಡೆ ಕಂಡರು.

ದಕ್ಷಿಣ ಆಫ್ರಿಕಾದ 18 ವರ್ಷದ ಪೀಟರ್‌ ಕೋಟ್ಜ್ ಚಿನ್ನ (53.78 ಸೆ.), ಇಂಗ್ಲೆಂಡ್‌ನ‌ ಬ್ರೋಡಿ ವಿಲಿಯಮ್ಸ್‌ ಬೆಳ್ಳಿ (53.91 ಸೆ.) ಮತ್ತು ಆಸ್ಟ್ರೇಲಿಯದ ಬ್ರಾಡ್ಲಿ ವುಡ್‌ವರ್ಡ್‌ ಕಂಚು ಗೆದ್ದರು (54.06 ಸೆ.).

 

Advertisement
Advertisement

Udayavani is now on Telegram. Click here to join our channel and stay updated with the latest news.

Next