Advertisement

1000 ವರ್ಷಗಳಷ್ಟು ಹಳೆಯ ವಿಗ್ರಹಗಳು ವಶಕ್ಕೆ; ನಟರಾಜ, ಶಿವಕರ್ಮಿ, ರಮಣ ಮಹರ್ಷಿ ವಿಗ್ರಹಗಳು

07:47 PM Aug 10, 2022 | Team Udayavani |

ಚೆನ್ನೈ: ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯ 5 ವಿಗ್ರಹ ಸೇರಿದಂತೆ ಒಟ್ಟು 8 ವಿಗ್ರಹಗಳನ್ನು ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯ ವಿಗ್ರಹ ತಂಡವು ವಶಪಡಿಸಿಕೊಂಡಿದೆ.

Advertisement

ಸ್ವಾಮಿಮಲೈನಲ್ಲಿ ಜಿ. ಮಸಿಲಮಣಿ ಹೆಸರಿನ ವ್ಯಕ್ತಿಗೆ ಸೇರಿದ ಸ್ಥಳದಲ್ಲಿ ವಿಗ್ರಹಗಳನ್ನು ಹೂತಿಡಲಾಗಿತ್ತು. 200ಕೆ.ಜಿ. ತೂಕದ ಬೋಗಶಕ್ತಿ ಅಮ್ಮ ದೇವರ ಮೂರ್ತಿ, ಬುದ್ಧನ 2 ಮೂರ್ತಿಗಳು, ಅಂದಲ್‌ ಮತ್ತು ವಿಷ್ಣು ದೇವರ ಮೂರ್ತಿಗಳು ಪತ್ತೆಯಾಗಿದ್ದು ಅವೆಲ್ಲವೂ ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗಿದೆ.

ಅದರ ಜತೆಯಲ್ಲಿ 100 ವರ್ಷಗಳಷ್ಟು ಹಳೆಯ ನಟರಾಜ ಮೂರ್ತಿ, ಶಿವಕಮಿ ಮತ್ತು ರಮಣ ಮಹರ್ಷಿ ವಿಗ್ರಹಗಳೂ ಪತ್ತೆಯಾಗಿವೆ.

ಮಸಿಲಮಣಿ ವಿರುದ್ಧ ವಿಗ್ರಹ ಕಳ್ಳತನದ ಆರೋಪವಿದ್ದು, ಮೊದಲಿಗೆ ಕೊಡಂಬಕ್ಕಂನ ಅವರ ನಿವಾಸದಲ್ಲಿ ವಿಗ್ರಹಗಳಿಗಾಗಿ ಶೋಧ ನಡೆಸಲಾಗಿತ್ತು. ನಂತರ ಆ.9ರಂದು ಸ್ವಾಮಿಮಲೈನಲ್ಲಿ ಶೋಧ ನಡೆಸಿದಾಗ ವಿಗ್ರಹಗಳು ಪತ್ತೆಯಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next