ಜಾರ್ಖಂಡ್: ಇಲ್ಲಿನ ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯ ಜಾರ್ಜ್ ಹಾರಾ ಪ್ರದೇಶದಲ್ಲಿ ನಕ್ಸಲೀಯರು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಳಿಸಿದ ಪರಿಣಾಮ ಜಾರ್ಖಂಡ್ ಜಾಗ್ವಾರ್ ಯೂನಿಟ್ ನ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ:ತಾಜ್ ಮಹಲ್ ಗೆ ಬಾಂಬ್ ಬೆದರಿಕೆ ಕರೆ: ಪ್ರವಾಸಿಗರ ತೆರವು, ತೀವ್ರ ಶೋಧ
ಗುರುವಾರ(ಮಾರ್ಚ್ 04) ಬೆಳಗ್ಗೆ ಹೊಯಾಹಾಟು ಗ್ರಾಮದ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಐಇಡಿ ಸ್ಫೋಟಿಸಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಸಿಆರ್ ಪಿಎಫ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಐಇಡಿ ಸ್ಫೋಟಗೊಂಡ ನಂತರ ಅರಣ್ಯಪ್ರದೇಶದಲ್ಲಿ ನಕ್ಸಲೀಯರಿಗಾಗಿ ಸಿಆರ್ ಪಿಎಫ್ ಮತ್ತು ಜಾರ್ಖಂಡ್ ಪೊಲೀಸ್ ತಂಡ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿ ಹೇಳಿದೆ.
ನಕ್ಸಲೀಯರ ಐಇಡಿ ಸ್ಫೋಟದಿಂದ ಗಾಯಗೊಂಡಿದ್ದ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.