Advertisement
ಕ್ಯಾಮೆರಾ ಕೈಯಲ್ಲಿ ಬಂದ ಹೊಸತರಲ್ಲಿ ಇದ್ಯಾವುದರ ಪರಿವೇ ಇರುವುದಿಲ್ಲ. ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹುಮ್ಮಸ್ಸಿನಿಂದ ಸೆರೆಹಿಡಿಯುತ್ತಾ ಸಾಗಿದಾಗ, ತಿಳಿದೋ, ತಿಳಿಯದೆಯೋ ಹಲವಾರು ಪ್ರೇಮ್‌ಗಳು ಶಹಭಾಶ್ ಗಿರಿ ಪಡೆಯುವುದು ಸಹಜವೇ. ಅಚಾನಕ್ ಆಗಿ ಅವುಗಳಲ್ಲೊಂದು ತರುಣಿಯ ಸುಂದರ ಚಿತ್ರನೋಡಿ ಪ್ರಭಾವಿತಳಾದ, ದೂರದ ಊರಿಗೆ ನಡು ಹಗಲು ಹೊರಟು ನಿಂತ ಪರಿಚಯದ ಯವ್ವನೆಯೊಬ್ಬಳಿಗೆ ನಿಮ್ಮ ಬಗ್ಗೆ ಅಭಿಮಾನ ಉಕ್ಕಿ ಬಂತು ಅನ್ನಿ. “ನಂದೂ ಒಂದು ಫೋಟೋ ಈ ಥರಾನೇ ತೆಗೀರೀ’ ಅಂತ ಗಂಟು ಬಿದ್ದರೆ, ಓಹ್, ಅದಾ…ಸೂರ್ಯಾಸ್ತದ ಸಂಜೆ ತೆಗೆದದ್ದು ಎನ್ನುವ ಸಮಜಾಯಿಶಿಯನ್ನು ಕೊಟ್ಟು ಜಾರಿಕೊಳ್ಳಬಹುದು. ಅದರ ಬದಲು ಆ ಬಗೆಯ ವಾರ್ಮ್ ಕಲರ್ಸ್ ಬಣ್ಣಗಳ ಬೆಳಕನ್ನು ಹೇಗಾದರೂ ದೊರಕಿಸಿಕೊಂಡು, ಅದಕ್ಕೊಂದು ಹಿನ್ನೆಲೆ ಹೊಂದಿಸಿಕೊಂಡು ಆಕೆಯ ಭಾವಪೂರ್ಣ ಭಂಗಿಯೊಂದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲಿ ನಿಮ್ಮ ಕೈ ಚಳಕ ತೋರಿಸಬಲ್ಲಿರಾದರೆ, ಸಾಧನೆಯ ಮೆಟ್ಟಲೊಂದನ್ನು ಏರಿ ನಿಂತಿದ್ದೀರಿ ಅಂತಲೇ ಅರ್ಥ.
Foil Refl ector ) ಅದರ ಸಹಾಯದಿಂದ ತಲೆಯ ಬದಿಯಿಂದ ಮುಂದುವರಿದ ಅದೇ ಕೆಂಪು ಸೂರ್ಯಕಿರಣಗಳನ್ನು ಪ್ರತಿಫಲನಗೊಳಿಸಿರುವುದು ಆಸಿಫ್ ಅವರ ಬೆಳಕಿನ ಮೇಲಿನ ಹಿಡಿತ ಮತ್ತು ತಾಂತ್ರಿಕ ಪರಿಣಿತಿಗೆ ಕನ್ನಡಿ ಹಿಡಿದಂತಿದೆ. ಇನ್ನೊಂದು, ನಾನು ಸೆರೆಹಿಡಿದ ಪರಿಚಿತ ತರುಣಿಯದ್ದು. ಮಹಡಿ ಮನೆಯ ತೆರೆದ ಬಾಲ್ಕನಿಯಲ್ಲಿ ಬೆಳಗ್ಗೆ ಹತ್ತರ ಆಸು ಪಾಸು. ಆಕೆಯ ಲಾವಣ್ಯಪೂರಿತ, ಮನೋಧೃಡತೆಯುಳ್ಳ ಮುಖಭಾವದ ಜೊತೆಗೆ, ಪೂರಕ ನೀಳ ಬಾಹು- ಕೈನ ಭಾಗಗಳು ಕೆಂಚುಬಣ್ಣದ ಗುಂಗುರು ಕೇಶರಾಶಿ ಮತ್ತು ಸ್ವಲ್ಪ ಕೆಂಪು ತ್ವಚೆಯುಳ್ಳ ಮೈಬಣ್ಣ . ಅವೆಲ್ಲಾ ಸಹಜವಾಗಿಯೇ ವಾರ್ಮ್ ಕಲರ್ಸ್ ಚಿತ್ರಣಕ್ಕೆ ಹೇಳಿಮಾಡಿಸಿದಂತಿತ್ತು. ಆಕಾಶದಿಂದ ಮಂದವಾದ (Overcast & Diff used) ಬೆಳಗಿನ ಬೆಳಕು ತರುಣಿಯ ಹಿಂಬದಿಯಿಂದ ಬರುವಂತೆ ನೋಡಿಕೊಂಡು ಆಕೆಯನ್ನು ಕುಳ್ಳರಿಸಿ, ಆಕೆಯ ಮುಖದೆದುರು ಐದಡಿ ಅಂತರದಿಂದ ದೊಡ್ಡ ಥರ್ಮೋಕೋಲ್ ಶೀಟ್ ಹಿಡಿದು, ಪೂರಕ ಬೆಳಕನ್ನು ಪ್ರತಿಫಲಿಸಿ ಈ ಭಂಗಿಯನ್ನು ಸೆರೆಹಿಡಿದದ್ದು.
Related Articles
Advertisement
ಭಾವಲಹರಿಯ ಧೀಮಂತೆ ; 90 ಎಂ.ಎಂ. f 5.6 1/80 ಸೆಕೆಂಡ್, 200 ಐ.ಎಸ್.ಒ; ಟ್ರೈಪಾಡ್ ಬಳಸಿದೆ
ಕೆ.ಎಸ್.ರಾಜಾರಾಮ್