ವಾಷಿಂಗ್ಟನ್: ಭಾರೀ ಗಾತ್ರದ ಕಂಟೈನರ್ (ಸರಕು ಸಾಗಣೆ) ಹಡಗೊಂದು ಅಮೆರಿಕದ ಬಾಲ್ಟಿಮೋರ್ ನಲ್ಲಿರುವ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದ ಘಟನೆ ಮಂಗಳವಾರ (ಮಾರ್ಚ್ 26) ನಡೆದಿದ್ದು, ಹಲವಾರು ಜನರು ಮತ್ತು ವಾಹನ ಮುಳುಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಬಾಲ್ಟಿಮೋರ್ ನಗರದ ಅಗ್ನಿಶಾಮಕದಳದ ಮಾಹಿತಿ ಪ್ರಕಾರ, ಘಟನೆಯಿಂದ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿರುವ ಸಾಧ್ಯತೆ ಇದ್ದಿರುವುದಾಗಿ ಹೇಳಿದೆ. ಹಲವಾರು ವಾಹನಗಳು ನೀರಿನಲ್ಲಿ ಮುಳುಗಿದ್ದು, ಶೋಧ ಕಾರ್ಯ ನಡೆಯುತ್ತಿರುವುದಾಗಿ ವರದಿ ವಿವರಿಸಿದೆ.
ಘಟನೆ ನಡೆದ ಸಂದರ್ಭದಲ್ಲಿ ಬಾಲ್ಟಿಮೋರ್ ಸೇತುವೆ ಮೇಲೆ 20 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು ಎಂದು ಕೆಲವು ಮಾಧ್ಯಮದ ವರದಿಗಳು ತಿಳಿಸಿವೆ. ಕಂಟೈನರ್ ಹಡಗು ಡಿಕ್ಕಿ ಹೊಡೆದು ಸೇತುವೆ ಕುಸಿದು ಬೀಳುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
1.6 ಮೈಲಿ (2.6 ಕಿಲೋ ಮೀಟರ್), ಚತುಷ್ಪಥ ಸೇತುವೆಯನ್ನು 1977ರಲ್ಲಿ ಉದ್ಘಾಟಿಸಲಾಗಿತ್ತು. ಪ್ರತಿವರ್ಷ ಬಾಲ್ಟಿಮೋರ್ ಸೇತುವೆ ಮೇಲೆ 11 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತದೆ. ಬಾಲ್ಟಿಮೋರ್ ಸುತ್ತಮುತ್ತ ನಗರಕ್ಕೆ ಈ ಸೇತುವೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ ಎಂದು ವರದಿ ತಿಳಿಸಿದೆ.
ಸೇತುವೆ ಕುಸಿದು ಬಿದ್ದಿದ್ದರಿಂದ ವಾಹನ ಸವಾರರು ಈ ಮಾರ್ಗವನ್ನು ಬಿಟ್ಟು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮೇರಿಲ್ಯಾಂಡ್ ಸಾರಿಗೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.