Advertisement

ಚುನಾವಣಾ ಅಕ್ರಮ ಬಹಿರಂಗಪಡಿಸುವವರ ಗುರುತು ರಕ್ಷಣೆ: ಸಿಇಸಿ

04:39 PM Jun 02, 2018 | Team Udayavani |

ಕೋಲ್ಕತ : ಚುನಾವಣಾ ಆಯೋಗದ ಮೊಬೈಲ್‌ ಆ್ಯಪ್‌ ಮೂಲಕ ಚುನಾವಣಾ ಅಕ್ರಮಗಳ ಮಾಹಿತಿಯನ್ನು ಬಹಿರಂಗಪಡಿಸುವವರ ಗುರುತನ್ನು ಸೂಕ್ತ ರಕ್ಷಣೆಯೊಂದಿಗೆ ಗೌಪ್ಯವಾಗಿ ಇಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಒ ಪಿ ರಾವತ್‌ ಭರವಸೆ ನೀಡಿದ್ದಾರೆ.

Advertisement

ಈಚೆಗೆ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯ ವೇಳೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿದ್ದ ಚುನಾವಣಾ ಆಯೋಗದ ಆ್ಯಪ್‌ ಮೂಲಕ ಸುಮಾರು 680 ವಿಡಿಯೋ ದೂರುಗಳು ದಾಖಲಾಗಿದ್ದವು. 

ಈ ಬಗೆಯ ಚುನಾವಣಾ ಅಕ್ರಮ ವಿಡಿಯೋ ದೂರುಗಳನ್ನು ನೀಡುವವರ ಗುರುತು ಬಹಿರಂಗವಾಗದಂತೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರಾವತ್‌ ಹೇಳಿದರು. 

ಇಲ್ಲಿನ ಎಂಸಿಸಿಐ ನಲ್ಲಿ ಏರ್ಪಡಿಸಲಾಗಿದ್ದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾವತ್‌, ಚುನಾವಣಾ ಆಯೋಗದ ಈ ಮೊಬೈಲ್‌ ಆ್ಯಪ್‌ನಿಂದ ಸಾಮಾನ್ಯ ಜನರಿಗೆ ಚುನಾವಣಾ ಅಕ್ರಮಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಬಂದಿದೆ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next