Advertisement

2 ವಾರದಲ್ಲಿ ಗುರುತಿನ ಚೀಟಿ

12:32 PM Feb 06, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ಪೂರ್ಣಗೊಳಿಸಿರುವ ಬಿಬಿಎಂಪಿ, ಮುಂದಿನ ಎರಡು ವಾರಗಳಲ್ಲಿ ಅವರಿಗೆ ಗುರುತಿನ ಚೀಟಿ ನೀಡಲು ಸಿದ್ಧತೆ ನಡೆಸಿದೆ.

Advertisement

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿರುವ ಪಾಲಿಕೆಯ ಕಲ್ಯಾಣ ವಿಭಾಗದ ಅಧಿಕಾರಿಗಳು, ನಗರದಲ್ಲಿ ಒಟ್ಟು 24,629 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದ್ದಾರೆ. ಅದರಂತೆ ಸೋಮವಾರ ಬೀದಿ ವ್ಯಾಪಾರಿಗಳ ಸಂಘದ ಮುಖಂಡರೊಂದಿಗೆ ಸಭೆ ನಡೆಸಿದ ಅಧಿಕಾರಿಗಳು ಎರಡು ವಾರಗಳಲ್ಲಿ ಗುರುತಿನ ಚೀಟಿ ನೀಡುವುದಾಗಿ ತಿಳಿಸಿದ್ದಾರೆ.

ಜತೆಗೆ, ಈಗಾಗಲೇ ಎಲ್ಲಾ ವಲಯಗಳಲ್ಲಿ ಗುರುತಿಸಿರುವ ಬೀದಿ ಬದಿ ವ್ಯಾಪಾರಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಬಹುದಾಗಿದೆ. ಪಟ್ಟಿಗೆ ಹೆಸರು ಸೇರಿಸಲು ಹಾಗೂ ಹೆಸರು ಬಿಟ್ಟು ಹೋಗಿದ್ದರೆ ಸರಿಪಡಿಸಿಕೊಳ್ಳಲು ಒಂದು ವಾರ ಅವಕಾಶ ನೀಡಲಾಗಿದ್ದು, ಪಟ್ಟಿಯಲ್ಲಿರುವ ವ್ಯಾಪಾರಿಗಳಿಗೆ ಪಾಲಿಕೆಯಿಂದ ವಿಧಿಸಲಾಗುವ ನಿಯಮಗಳಿಗೆ ಬದ್ಧರಾಗಿರುವ ಕುರಿತಂತೆ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಸೂಚಿಸಿದ್ದಾರೆ.

ನಗರದಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಬೀದಿ ಬದಿ ವ್ಯಾಪಾರಿಗಳಿದ್ದು, ಸಮೀಕ್ಷೆ ನಡೆಸಿದಾಗ ಹೆಚ್ಚಿನ ವ್ಯಾಪಾರಿಗಳು ಬಿಟ್ಟು ಹೋಗಿದ್ದಾರೆ. ಹೀಗಾಗಿ ಮತ್ತೆ ಸಮೀಕ್ಷೆ ನಡೆಸಬೇಕೆಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಅಧಿಕಾರಿಗಳು, ಸದ್ಯ ಗುರುತಿಸಿರುವ 24,629 ವ್ಯಾಪಾರಿಗಳಿಗೆ ಸ್ಮಾರ್ಟ್‌ ಗುರುತಿನ ಚೀಟಿ ನೀಡಲಾಗುವುದು. ನಂತರದಲ್ಲಿ ಮತ್ತೆ ಸಮೀಕ್ಷೆ ನಡೆಸುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 ಮುಚ್ಚಳಿಕೆಯಲ್ಲಿರಬೇಕಾದ ಅಂಶಗಳೇನು?
ಜೀವನೋಪಾಯಕ್ಕಾಗಿ ಬೀದಿ ಬದಿ ವ್ಯಾಪಾರ ಮಾಡಲಾಗುತ್ತಿದೆ
ಪಾಲಿಕೆಯಿಂದ ನಿಗದಿಪಡಿಸಿದ ಸ್ಥಳದಲ್ಲಿಯೇ ವ್ಯಾಪಾರ „
ರುತಿನ ಚೀಟಿ ಪಡೆದು ವ್ಯಾಪಾರ ನಡೆಸುತ್ತೇವೆ „
ಪಾದಚಾರಿಗಳ ಸಂಚಾರಕ್ಕೆ ಅಡೆತಡೆ ಮಾಡಬಾರದು „
ವ್ಯಾಪಾರದ ಸ್ಥಳದಲ್ಲಿ ಖಡ್ಡಾಯವಾಗಿ ಗುರುತಿನ ಚೀಟಿ ಅಳವಡಿಕೆ
ನಿಗದಿತ ಜಾಗದ ಒಡೆತನದ ಹಕ್ಕು ಹೋದಿರುವುದಿಲ್ಲ „
ವ್ಯಾಪಾರಿಗೆ ತೊಂದರೆಯಾದಲ್ಲಿ ಸಿಂಧುತ್ವದ ಮೂಲಕ ಕುಟುಂಬದವರಿಗೆ ಹಸ್ತಾಂತರ
ಪಟ್ಟಣ ಮಾರಾಟ ಸಮಿತಿಯ ಷರತ್ತುಗಳನ್ನು ಪಾಲಿಸಲಾಗುವುದು

Advertisement

ಪಾಲಿಕೆಯಿಂದ ನಡೆಸಲಾದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ 24,629 ವ್ಯಾಪಾರಿಗಳನ್ನು ಗುರುತಿಸಿದ್ದು, ಅವರಿಗೆ ಗುರುತಿನ ಚೀಟಿ ನೀಡಲು ಸಿದ್ಧತೆ ನಡೆಸಲಾಗಿದೆ. ಸಂಘಟನೆಯ ಮುಖಂಡರು ಹಲವರ ಹೆಸರು ಬಿಟ್ಟುಹೋಗಿರುವ ಕುರಿತು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಗುರುತಿನ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು. 
 ಸಾವಿತ್ರಿ, ವಿಶೇಷ ಆಯುಕ್ತೆ, ಕಲ್ಯಾಣ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next