Advertisement

50 ಕೋಟಿಗಿಂತ ಹೆಚ್ಚಿನ ಸಾಲಕ್ಕೆ ಆಡಿಟ್‌

08:36 AM May 01, 2018 | |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚನೆ ಉಂಟಾದ ಬಳಿಕ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಅನುತ್ಪಾದಕ ಆಸ್ತಿ (ಎನ್‌ಪಿಎ) ನಿಯಂತ್ರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. 50 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲ ಪಡೆದುಕೊಂಡಿರುವ ಖಾತೆಗಳ ಮೇಲೆ ಹೆಚ್ಚಿನ ನಿಗಾ ಇಟ್ಟು, ಕರಾರುವಾಕ್ಕಾಗಿ ಪರಿಶೋಧನೆ (ಫೊರೆನ್ಸಿಕ್‌ ಆಡಿಟ್‌) ನಡೆಸಲು ಕೇಂದ್ರ ಹಣಕಾಸು ಇಲಾಖೆ ಸೂಚಿಸಿದ್ದು, ಅದರಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಆಡಿಟಿಂಗ್‌ ಆರಂಭಿಸಿವೆ.

Advertisement

ಸಾಲ ಖಾತೆಗಳ ಫೋರೆನ್ಸಿಕ್‌ ಆಡಿಟ್‌ ಪೂರ್ತಿಗೊಂಡ ಬಳಿಕ ಬ್ಯಾಂಕ್‌ಗಳು ಅವುಗಳು ಅನುತ್ಪಾದಕ ಆಸ್ತಿಯಾಗಿ (ಎನ್‌ಪಿಎ) ಬದಲಾವಣೆಗೊಳ್ಳಲಿಯೋ ಎಂಬ ಬಗೆಗಿನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿವೆ.  ಪರಿಶೀಲನೆ ವೇಳೆ ವಂಚನೆ  ಪತ್ತೆಯಾದರೆ, ಬ್ಯಾಂಕ್‌ಗಳ ಮುಖ್ಯ ಜಾಗೃತ ದಳದ ಜತೆ ಚರ್ಚಿಸಿ ಸಿಬಿಐಗೆ ಮಾಹಿತಿ ನೀಡಬೇಕಿದೆ. 

ಏನಿದು ಫೊರೆನ್ಸಿಕ್‌ ಆಡಿಟ್‌?: ನಿಗದಿತ ವ್ಯಕ್ತಿ, ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸುವುದೇ ಫೊರೆನ್ಸಿಕ್‌ ಆಡಿಟ್‌. ಇದರಿಂದ ವಂಚನೆ ಪತ್ತೆ ಸಾಧ್ಯ. 

Advertisement

Udayavani is now on Telegram. Click here to join our channel and stay updated with the latest news.

Next