ತಾಳಿಕೋಟೆ: ಪ್ರತಿಭೆ ಎಂಬುದು ಯಾರ ಸ್ವತ್ತಲ್ಲ. ಅಂತಹ ಪ್ರತಿಭೆಗಳನ್ನು ಹುಡುಕಿ ಹೊರಹಾಕುವುದರೊಂದಿಗೆ ಜ್ಯೋತಿ ಬೆಳಗಿಸಿದವರು ಸಂಗೀತ ಶಿಕ್ಷಕ ದಿ| ವಠಾರ ಗುರುಗಳಾಗಿದ್ದಾರೆಂದು ನಟ ರಾಜು ತಾಳಿಕೊಟಿ ಹೇಳಿದರು.
ಪಟ್ಟಣದ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯಲ್ಲಿ ಎ.ಎಸ್. ವಠಾರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಎ.ಎಸ್. ವಠಾರ ಗುರುಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎ.ಎಸ್. ವಠಾರ ಗುರುಗಳ ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದವರು. ಕಣ್ಣು ಕಾಣಿಸದಿದ್ದರೂ ಸಂಗೀತದ ಮೂಲಕ ಎಲ್ಲರನ್ನು ಬೆರಗುಗೊಳಿಸಿದಂತಹ ವ್ಯಕ್ತಿಯಾಗಿದ್ದರು. ನಮ್ಮ ಅನೇಕ ನಾಟಕಗಳಲ್ಲಿಯೂ ಸಂಗೀತದ ಸೇವೆಯ ಜೊತೆಗೆ ತಬಲಾ ಸೇವೆ ಉಣಬಡಿಸಿದ್ದರು. ಅವರು ಹುಟ್ಟು ಹಾಕಿದ ಸಂಗೀತದ ಪ್ರತಿಭೆಗಳು ನಾಡಿನ ಉದ್ದಗಲಕ್ಕೂ ಸಂಗೀತದ ಸೇವೆ ಮೂಲಕ ಜನಮಾನಸವಾಗಿದ್ದಾರೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ರಮೇಶ ಯರಕ್ಯಾಳ ಹಾಗೂ ಎ.ಎಸ್. ವಠಾರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ದೀಪಕಸಿಂಗ್ ಹಜೇರಿ ಮಾತನಾಡಿದರು.
ನಿವೃತ್ತ ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ಭಜಂತ್ರಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನ್ಯಾಯವಾದಿ ಕೆ.ಎಂ. ಕಲಾದಗಿ, ಹುಮನಾಬಾದ ಅರಣ್ಯ ವಲಯಾಧಿಕಾರಿ ಮುನ್ನಾಸಾಬ ವಠಾರ, ಸಂಗೀತ ಶಿಕ್ಷಕ ಮುರುಳಿಧರ ಭಜಂತ್ರಿ, ಪರಶುರಾಮ ಚಟ್ನಳ್ಳಿ, ದೇವರಾಜ ಯರಕ್ಯಾಳ, ಯಲ್ಲಪ್ಪ ಗುಂಡಳ್ಳಿ, ವೀರೇಶ ಬಳಿಗಾರ, ಮಹೇಶ ಹಿರೇಮಠ, ಮಲ್ಲಿಕಾರ್ಜುನ ನಾವಿ, ಗೋವಿಂದಸಿಂಗ್ ಹಜೇರಿ, ರಾಜು ಗುಬ್ಬೇವಾಡ, ಕುಮಾರ ಕುದರಗುಂಡ, ಶಶಿ ಬಳಗಾನೂರ, ಶ್ವೇತಾ ಹಂದಿಗನೂರ, ಭವಾನಿ ಕುಲಕರ್ಣಿ, ಕಾವೇರಿ ಹೂಗಾರ, ವೀಣಾ ಕುಂಟೋಜಿ, ಎಂ.ಬಿ. ಹಿಪ್ಪರಗಿ, ಪ್ರಕಾಶ ಕಟ್ಟಿಮನಿ, ವಸಂತಸಿಂಗ್ ಹಜೇರಿ, ಮಹೇಬೂಬ್ ವಠಾರ, ಪ್ರೊ| ಡಾ| ಸಿ. ಲಿಂಗಪ್ಪ ಮೊದಲಾದವರು ಇದ್ದರು. ಸಂಗೀತ ಶಿಕ್ಷಕ ಶ್ರೀನಿವಾಸ ಬಸವಂತಾಪುರ ನಿರೂಪಿಸಿ, ವಂದಿಸಿದರು.