Advertisement

ಭಿಕ್ಷುಕರ ಗುರುತಿಸಿ, ಹಣ ಗೆಲ್ಲಿ

09:32 AM Jan 18, 2018 | |

ಹೈದರಾಬಾದ್‌: “ನಿಮ್ಮ ಏರಿಯಾದಲ್ಲಿ ಭಿಕ್ಷುಕರು ಇದ್ದರೆ ಮಾಹಿತಿ ಕೊಡಿ. 500 ರೂ. ಬಹುಮಾನ ಗೆಲ್ಲಿ’. ಸ್ವಲ್ವ ನಿಲ್ಲಿ. ಇದು ಕರ್ನಾಟಕ ಅಥವಾ ಕೇಂದ್ರ ಸರಕಾರದ ಹೊಸ ಯೋಜನೆ ಅಲ್ಲ. ತೆಲಂಗಾಣದಲ್ಲಿರುವ ಕೆ.ಚಂದ್ರಶೇಖರ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸರಕಾರ ಜಾರಿ ಮಾಡಿರುವ ಯೋ ಜನೆ. ಕಳೆದ ವರ್ಷ ಅದನ್ನು ಜಾರಿ ಮಾಡಲಾಗಿತ್ತು. ತೆಲಂ ಗಾಣ ರಾಜ್ಯ ಬಂದೀಖಾನೆ ಇಲಾಖೆ (ಟಿಎಸ್‌ಪಿಡಿ) ಭಿಕ್ಷುಕ ರಹಿತ ರಾಜ್ಯ ತೆಲಂಗಾಣ ಆಗಬೇಕು ಎಂಬ ಸದಭಿಲಾಷೆೆ ಯಿಂದ ರಾಜ್ಯಾದ್ಯಂತ ವಿಶೇಷವಾಗಿ ಹೈದರಾಬಾದ್‌ನಲ್ಲಿ ಅದನ್ನು ಅನುಷ್ಠಾನಗೊಳಿಸಿದೆ.

Advertisement

ಕುತೂಹಲಕಾರಿ ಅಂಶವೆಂದರೆ ಇದುವರೆಗೆ ಎಂಟು ಮಂದಿ ಭಿಕ್ಷುಕರು ಇದ್ದಾರೆ ಎಂದು ಗುರುತಿಸಿ ಬಹುಮಾನ ಪಡೆದು ಕೊಂಡಿ ದ್ದಾರೆ. 2017ರ ಅ.28ರಂದು ಭಿಕ್ಷುಕರಿಗಾಗಿ ಗೃಹವನ್ನು ಆರಂಭಿಸಲಾಗಿತ್ತು. ಹೈದರಾ ಬಾದ್‌ನಲ್ಲಿರುವ ಚಂಚಲಗುಡ ಮತ್ತು ಚೇರ್ಲಪಲ್ಲಿಯಲ್ಲಿ ಕ್ರಮವಾಗಿ ಪುರು ಷರಿಗೆ ಮತ್ತು ಮಹಿಳೆಯರಿಗೆ ಎರಡು ಮನೆ ಗಳನ್ನು ಆರಂಭಿಸಲಾಗಿದೆ ಎಂದು ಟಿಎಸ್‌ಪಿಡಿಯ ಇನ್ಸ್‌ಪೆಕ್ಟರ್‌ ಜನರಲ್‌ ಎ.ನರಸಿಂಹ ಹೇಳಿದ್ದಾರೆ.

ಯೋಜನೆ ಆರಂಭವಾದ ಮೂರು ತಿಂಗಳ ಅವಧಿಯಲ್ಲಿ ಎರಡು ಸಾವಿರ ಮಂದಿ ಯನ್ನು ಈ ಗೃಹಗಳಿಗೆ ದಾಖಲಿಸಲಾಗಿದೆ. ಈ ಪೈಕಿ 1,500 ಪುರುಷರು, 500 ಮಹಿಳೆಯರು. ಅವರ ಪೂರ್ವಾಪರ ವಿಚಾರಿಸಿ ಮತ್ತೂಮ್ಮೆ ಭಿಕ್ಷೆ ಬೇಡಲು ಬಂದರೆ ಜೈಲಿಗೆ ತಳ್ಳಲಾಗುತ್ತದೆ ಎಂದು  ಎಚ್ಚರಿಕೆ ನೀಡಲಾಗಿದೆ ಎಂದು ನರಸಿಂಹ ಹೇಳಿದ್ದಾರೆ. ಭಿಕ್ಷುಕರ ಫೋಟೋ, ಕೈಬೆರಳುಗಳ ಗುರುತನ್ನು ದಾಖಲಿಸಿ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ ಅಮೆರಿಕ 

ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್‌ ಭೇಟಿ ನೀಡಿದ್ದಾಗಲೂ ಭಿಕ್ಷುಕರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next