Advertisement

ಜೀವವೈವಿಧ್ಯ ತಾಣವಾಗಿ ಗುರುತಿಸಿ: ಅನಂತ ಹೆಗಡೆ

01:33 PM Aug 30, 2020 | Suhan S |

ಗುಡಿಬಂಡೆ: ಪಟ್ಟಣದ ಸುರಸದ್ಮಗಿರಿ ಬೆಟ್ಟ ಹಾಗೂ ಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟವನ್ನು ಸಂರಕ್ಷಣೆ ಮಾಡಲು ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಿ ಜೀವ ವೈವಿಧ್ಯ ತಾಣವನ್ನಾಗಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದಜೀವ ವೈವಿಧ್ಯ ಕಾಯ್ದೆ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಈ ವೇಳೆ ಮಾತನಾಡಿದ ಅವರು, ಜೈವಿಕ ವೈವಿಧ್ಯ ಅಧಿನಿಯಮಗಳ ಪ್ರಕಾರ ಪ್ರತಿ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚಿಸಬೇಕು. ಈ ಸಮಿತಿಯು ತನ್ನ ಅಧಿಕಾರ ವ್ಯಾಪ್ತಿ ಯಲ್ಲಿ ಜೀವ ವೈವಿಧ್ಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜೀವಿಗಳ ಆವಾಸ ಸ್ಥಾನಗಳನ್ನು ಗುರುತಿಸುವಿಕೆ, ನದಿ ಮೂಲಗಳ ಗುರುತಿಸುವ ಹಾಗೂ ಸಂರಕ್ಷಣೆ ಸೇರಿದಂತೆ ಸ್ಥಳೀಯವಾಗಿ ಬೆಳೆಯಬಹುದಾದ ತೊಟಗಾರಿಕೆ, ಅರಣ್ಯ ಸಸಿಗಳ ಕುರಿತು ದಾಖಲಾತಿ ಮಾಡುವುದು ಈ ಸಮಿತಿಗಳ ಕೆಲಸವಾಗಿದೆ ಎಂದರು.

ನದಿ ಮೂಲಗಳು ಒತ್ತುವರಿ ಒತ್ತುವರಿ ತೆರವುಗೊಳಿಸಿದ ನಂತರ ಆ ಭಾಗದಲ್ಲಿ ಬೇಲಿ ಹಾಕುವ ಬದಲು ಅಚ್ಚುಕಟ್ಟು ಪ್ರದೇಶದಲ್ಲಿ ಉಪಯುಕ್ತವಾದ ಮರಗಳನ್ನು ಬೆಳೆಸುವುದರಿಂದ ಹಲವಾರು ಜೀವರಾಶಿಗಳಿಗೆ ಸಹಕಾರಿಯಾಗುತ್ತದೆ ಎಂದರು. ತಹಶೀಲ್ದಾರ್‌ ಸಿಗ್ಬತ್ತುಲ್ಲಾ, ತಾಪಂ ಇಒ ಚಂದ್ರಕಾಂತ್‌, ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷಬೈರಾರೆಡ್ಡಿ, ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್‌ ಸಾಗರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಕೃಷಿ, ತೋಟಗಾರಿಕೆ, ಸಾಮಾಜಿಕ ಹಾಗೂ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಪಂ, ಪಿಡಿಒಗಳು ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next